ನೈಜ ಘಟನೆಯಾಧಾರಿತ ಸಿನಿಮಾ 'ಪ್ರೀತಿಯ ಹುಚ್ಚ' ಏಪ್ರಿಲ್ ನಲ್ಲಿ ರಿಲೀಸ್

ಪ್ರೀತಿಯ ಹುಚ್ಚ ಚಿತ್ರಕ್ಕೆ ಚಿತ್ರಕಥೆ, ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ, 90 ರ ದಶಕದ ಉತ್ತರಾರ್ಧದಲ್ಲಿ ಹಾಸನದಲ್ಲಿ ನಡೆದ ಒಂದು ನೈಜ ಘಟನೆಯಿಂದ ಸ್ಫೂರ್ತಿ ಪಡೆದಿದ್ದಾರೆ.
A Still from Preetiya Huchcha
ಪ್ರೀತಿಯ ಹುಚ್ಚ ಸಿನಿಮಾ ಸ್ಟಿಲ್
Updated on

ವಿ ಕುಮಾರ್ ನಿರ್ದೇಶನದ 'ಪೀತಿಯ ಹುಚ್ಚ' ಚಿತ್ರವು ಮುಂದಿನ ತಿಂಗಳು ಕನ್ನಡ, ತೆಲುಗು, ತಮಿಳು ಮತ್ತು ಇತರ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಈ ಹಿಂದೆ 'ಗಾಯತ್ರಿ' ಎಂಬ ಹಾರರ್ ಚಿತ್ರವನ್ನು ನಿರ್ದೇಶಿಸಿದ್ದ ಕುಮಾರ್, ಪ್ರೀತಿಯ ಹುಚ್ಚ ಚಿತ್ರಕ್ಕೆ ಚಿತ್ರಕಥೆ, ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ, 90 ರ ದಶಕದ ಉತ್ತರಾರ್ಧದಲ್ಲಿ ಹಾಸನದಲ್ಲಿ ನಡೆದ ಒಂದು ನೈಜ ಘಟನೆಯಿಂದ ಸ್ಫೂರ್ತಿ ಪಡೆದಿದ್ದಾರೆ.

ಮದುವೆಯಾದ ಮೊದಲ ರಾತ್ರಿಯೇ ದುಷ್ಟರ ಜಾಲಕ್ಕೆ ಸಿಕ್ಕಿ ಮುಂಬೈನ ಕಾಮಾಟಿಪುರಕ್ಕೆ ಮಾರಾಟವಾಗುವ ಅಮಾಯಕ ಯುವತಿಯೊಬ್ಬಳ ಕಥೆಯಿದು. ಆಕೆಯ ಜೀವನ ಮುಂದೆ ಯಾವೆಲ್ಲ ತಿರುವು ಪಡೆದುಕೊಂಡಿತು, ಪ್ರೀತಿಸಿ ಮದುವೆಯಾದ ಪತ್ನಿಯನ್ನು ಕಳೆದುಕೊಂಡ ನಾಯಕ ಯಾವ ಸ್ಥಿತಿ ತಲುಪುತ್ತಾನೆ ಎಂಬುದೇ ಚಿತ್ರಕಥೆ. ಏಪ್ರಿಲ್‌ ಎರಡನೆ ವಾರ ಚಿತ್ರ ತೆರೆಗೆ ಬರಲಿದೆ. ವಿ.ಕುಮಾರ್, ಬಿ.ಜಿ.ನಂದಕುಮಾರ್ ಬಂಡವಾಳ ಹೂಡಿದ್ದಾರೆ. ಕನ್ನಡ, ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರ ನಿರ್ಮಾಣಗೊಂಡಿದೆ. ವಿಜಯ್ ನಾಯಕನಾಗಿ ನಟಿಸಿದ್ದು, ಕುಂಕುಮ್ ನಾಯಕಿ.

ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಆಲಿಷಾ ಎಂಬ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಬೆಂಗಳೂರು, ಮಂಡ್ಯ, ಚಿಕ್ಕಮಗಳೂರು, ಹಾಸನ, ಶ್ರವಣಬೆಳಗೊಳ ಮತ್ತು ಮುಂಬೈ ಸೇರಿದಂತೆ ಹಲವು ಸ್ಥಳಗಳಲ್ಲಿ 65 ದಿನಗಳ ಅವಧಿಯಲ್ಲಿ ಚಿತ್ರೀಕರಣಗೊಂಡಿದೆ. ಜೆ.ಎನ್.ರಂಗರಾಜನ್ ಸಂಗೀತ, ಸುನಿಲ್ ಕೆ.ಆರ್‌.ಎಸ್. ಛಾಯಾಚಿತ್ರಗ್ರಹಣ, ಪ್ರವೀಣ್ ವಿಷ್ಣು ಸಂಕಲನವಿದೆ. ಬೆಂಗಳೂರು, ಮಂಡ್ಯ, ಚಿಕ್ಕಮಗಳೂರು, ಹಾಸನ, ಶ್ರವಣಬೆಳಗೊಳ ಹಾಗೂ ಮುಂಬೈನಲ್ಲಿ ಚಿತ್ರೀಕರಣಗೊಂಡಿದೆ.

A Still from Preetiya Huchcha
"ಕಪಟಿ" ಟ್ರೇಲರ್ ರಿಲೀಸ್​​: ಮಾರ್ಚ್ 7ಕ್ಕೆ ಸಿನಿಮಾ ಬಿಡುಗಡೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com