
ಬನಾರಸ್ ಚಿತ್ರದ ಮೂಲಕ ನಟನಾಗಿ ಗುರುತಿಸಿಕೊಂಡಿರುವ ಜೈದ್ ಖಾನ್, ಪ್ರಸ್ತುತ ಅನಿಲ್ ಕುಮಾರ್ ನಿರ್ದೇಶನದ ತಮ್ಮ ಎರಡನೇ ಸಿನಿಮಾ ಕಲ್ಟ್ ನಲ್ಲಿ ನಿರತರಾಗಿದ್ದಾರೆ. ಈಗಾಗಲೇ ಪೋಸ್ಟರ್ ನಿಂದಲೇ cult ಚಿತ್ರ ಸಾಕಷ್ಟು ಆಸಕ್ತಿ ಕೆರಳಿಸಿದೆ.
ಇದು ಜೈದ್ ಸಿನಿಮಾ ವೃತ್ತಿ ಪಯಣಕ್ಕೆ ಮಹತ್ವದ ಹೆಜ್ಜೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಜೊತೆಗೆ ಜೈದ್ ಹಲವು ದೊಡ್ಡ ಪ್ರಾಜೆಕ್ಟ್ ಗಳಿಗೆ ಸಜ್ಜಾಗುತ್ತಿದ್ದಾರೆ. ಮಾರ್ಕೊ ನಿರ್ದೇಶಕ ಹನೀಫ್ ಅದೇನಿ ನಿರ್ದೇಶನದ ಮುಂದಿನ ಸಿನಿಮಾ ಕಡೆ ಜೈದ್ ಖಾನ್ ದೃಷ್ಟಿ ನೆಟ್ಟಿದ್ದಾರೆ. "ಹನೀಫ್ ಮತ್ತು ನಾನು ಮಾತುಕತೆ ನಡೆಸಿದ್ದೇವೆ. ಆದರೆ ಈಗ ಅವರು ಹಿಂದಿ ಸಿನಿಮಾದಲ್ಲಿ ಎಂಗೇಜ್ ಆಗಿದ್ದಾರೆ. ಆ ಪ್ರಾಜೆಕ್ಟ್ ವಿಳಂಬವಾದರೆ, ನಾವು ನಮ್ಮ ಸಿನಿಮಾ ಪ್ರಾರಂಭಿಸಬಹುದು ಎಂದು ಜೈದ್ ತಿಳಿಸಿದ್ದಾರೆ.
ಹನೀಫ್ ಅದೇನಿ ಚಿತ್ರಗಳು ಸಾಕಷ್ಟು violent themes ಗೆ ಹೆಸರುವಾಸಿಯಾಗಿದೆ. ಆದರೂ ಜೈದ್ ಖಾನ್ ಗಾಗಿ ವಿಭಿನ್ನವಾದದ್ದನ್ನು ಅನ್ವೇಷಿಸಲು ಉತ್ಸುಕರಾಗಿದ್ದಾರೆ. "ಹನೀಫ್ ಅವರ ವಿಷಯಗಳು ಹಿಂಸಾತ್ಮಾಕ ವಿಷಯಗಳನ್ನು ಸ್ಪರ್ಶಿಸುತ್ತವೆ, ಆದರೆ ನಾನು ಅದನ್ನು ನನ್ನ ಚಾಕೊಲೇಟ್ ಬಾಯ್ ಇಮೇಜ್‌ನಿಂದ ಹೊರಬರಲು ಬಯಸುತ್ತೇನೆ. ನಾನು ರಿವೇಂಜ್ ಅಥವಾ ಬೇರೆ ವಿಭಿನ್ನ ರೀತಿಯ ಕಥೆಗಾಗಿ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ. ಇತ್ತೀಚೆಗೆ, ಹನೀಫ್ ಬೆಂಗಳೂರಿನಲ್ಲಿದ್ದರು, ಅಲ್ಲಿ ಅವರಿಗೆ ಕೆಲವು ಸ್ಕ್ರಿಪ್ಟ್‌ಗಳನ್ನು ನೀಡಲಾಗಿತ್ತುಅವುಗಳಲ್ಲಿ ಒಂದು ಮುಂಬರುವ ತಿಂಗಳುಗಳಲ್ಲಿ ಲಾಕ್ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಕಲ್ಟ್ ನಂತರ ಜೈದ್ ಖಾನ್ ಕೆವಿಎನ್ ಪ್ರೊಡಕ್ಷನ್ಸ್‌ನೊಂದಿಗೆ ಕೈಜೋಡಿಸಿದ್ದಾರೆ. "ನಾವು ಬನಾರಸ್ ನಂತರ ಸಿನಿಮಾ ಮಾಡಲು ಯೋಜಿಸಿದ್ದೆವು, ಆದರೆ ಕೆವಿಎನ್ ಪ್ರೊಡಕ್ಷನ್ಸ್ ಟಾಕ್ಸಿಕ್ ಮತ್ತು ಜನ ನಾಯಗನ್ ಮೇಲೆ ಕೇಂದ್ರೀಕರಿಸಿದ್ದರಿಂದ, ಸಮಯ ಕೈಗೂಡಲಿಲ್ಲ. ಆದರೆ ಈಗ ಮಾರ್ಗ ಸ್ಪಷ್ಟವಾಗಿದೆ, ನಾವು ಈ ಪ್ರಾಜೆಕ್ಟ್ ಪ್ರಾರಂಭಿಸುತ್ತೇವೆ" ಎಂದು ಜೈದ್ ಉತ್ಸಾಹದಿಂದ ಹೇಳಿದ್ದಾರೆ. ಕಲ್ಟ್ ಅನ್ನು ಕೆವಿಎನ್ ಪ್ರೊಡಕ್ಷನ್ಸ್ ಸಹ ಪ್ರಸ್ತುತಪಡಿಸುತ್ತಿದೆ.
ಇನ್ನೂ ಕಲ್ಟ್ ಸಿನಿಮಾ ರಿಲೀಸ್ ಬಗ್ಗೆ ಜೈದ್ ಖಾನ್ ಮಾಹಿತಿ ಹಂಚಿಕೊಂಡಿದ್ದಾರೆ. ದಸರಾ ಹಬ್ಬದ ಸಂದರ್ಭದಲ್ಲಿ ಅಂದರೆ ಅಕ್ಟೋಬರ್‌ನಲ್ಲಿ ಅದನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ನಾವು ಪೋಸ್ಟ್-ಪ್ರೊಡಕ್ಷನ್ ಕೆಲಸ ಮುಗಿಸಿದ್ದೇವೆ ಮತ್ತು ಚಿತ್ರವು ಪ್ರೇಕ್ಷಕರೊಂದಿಗೆ ಚೆನ್ನಾಗಿ ಸಂಪರ್ಕ ಸಾಧಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ಹಬ್ಬದ ಬಿಡುಗಡೆಯು ಹೆಚ್ಚಿನ ಜನರನ್ನು ಆಕರ್ಷಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.
Advertisement