

ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಚೊಚ್ಚಲ ನಿರ್ದೇಶನದ ಜೊತೆಗೆ ನಾಯಕ ನಟನಾಗಿ ಅಭಿನಯಿಸಿರುವ ಬಹುನಿರೀಕ್ಷಿತ 'GST'ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.
ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಂದೇಶ್ ಎನ್. ಅವರು ನಿರ್ಮಿಸಿರುವ ಈ ಚಿತ್ರವು ಹಾರರ್-ಕಾಮಿಡಿ ಕಥಾಹಂದರವನ್ನು ಹೊಂದಿದೆ. ಚಿತ್ರಕ್ಕೆ ಚಂದನ್ ಶೆಟ್ಟಿ ಅವರ ಸಂಗೀತ ಮತ್ತು ಸುರೇಶ್ ಅವರ ಛಾಯಾಗ್ರಹಣವಿದೆ.
ಈ ಚಿತ್ರದಲ್ಲಿ ಸೃಜನ್ ಲೋಕೇಶ್ ಅವರಿಗೆ ನಾಯಕಿಯಾಗಿ ರಜನಿ ಭಾರದ್ವಾಜ್ ನಟಿಸಿದ್ದಾರೆ. ಜೊತೆಗೆ ಅವರ ಗಿರಿಜಾ ಲೋಕೇಶ್ ಮತ್ತು ಸೃಜನ್ ಅವರ ಪುತ್ರ ಸುಕೃತ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಪ್ರಮೋದ್ ಶೆಟ್ಟಿ, ಶೋಭರಾಜ್, ಶರತ್ ಲೋಹಿತಾಶ್ವ, ನಿವೇದಿತಾ ಗೌಡ, ತಬಲಾ ನಾಣಿ, ರವಿಶಂಕರ್ ಗೌಡ ಮತ್ತು ವಿನೋದ್ ಗೊಬ್ಬರಗಾಲ ಮತ್ತಿತರರ ತಾರಾಬಳಗವಿದೆ. ಈ ಚಿತ್ರವು ನವೆಂಬರ್ 28 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ.
Advertisement