

ಬಹುಭಾಷಾ ನಟಿ ವೇದಿಕಾ ಹಾಟ್ ಅವತಾರಕ್ಕೆ ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ. ಕನ್ನಡದ ಶಿವಲಿಂಗ ಚಿತ್ರದಲ್ಲಿ ನಟಿಸಿರುವ ವೇದಿಕಾ, ಕನ್ನಡದ ಹುಡುಗಿಯಾದರೂ ಹುಟ್ಟಿ ಬೆಳೆದಿದ್ದು ಬಾಂಬೆಯಲ್ಲಿ. ಹೀಗಾಗಿ ಸಖತ್ ಬೋಲ್ಡ್ ಅವತಾರದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ.
ಮಾಡೆಲ್ ಕಮ್ ನಟಿಯಾಗಿರುವ ವೇದಿಕಾ, ಕಪ್ಪು ಬಣ್ಣದ ಬಿಕಿನಿಯಲ್ಲಿ ಸಮುದ್ರದ ಕಿನಾರೆಯಲ್ಲಿ ನಿಂತು ವಿವಿಧ ಸ್ಟೈಲ್‌ನಲ್ಲಿ ಪೋಸ್ ನೀಡಿದ್ದಾರೆ. ಈ ಫೋಟೋಶೂಟ್‌ನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವೇದಿಕಾ ಅವರ ಈ ಹಾಟ್ ಅವತಾರ ಕಂಡು ಅಭಿಮಾನಿಗಳು ದಂಗಾಗಿದ್ದಾರೆ. ಈ ವಿಡಿಯೋಗೆ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಅಂದಹಾಗೆ, ತಮಿಳು ಚಿತ್ರದ ಮೂಲಕ ಸಿನಿ ಪ್ರಯಾಣ ಆರಂಭಿಸಿದ ವೇದಿಕಾ, ತೆಲುಗು ಹಾಗೂ ಕನ್ನಡದ ಶಿವಲಿಂಗ ಸಿನಿಮಾದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.
Advertisement