Oscars 2026: ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ ವಿಭಾಗದಲ್ಲಿ ಶಾರ್ಟ್‌ಲಿಸ್ಟ್ ಆದ ಮಹಾವತಾರ ನರಸಿಂಹ!

ವಿಷ್ಣು ಮತ್ತು ರಾಜ ಹಿರಣ್ಯಕಶಿಪು ಮತ್ತು ಆತನ ಮಗ ಭಕ್ತ ಪ್ರಹ್ಲಾದನ ಕಥೆಯನ್ನು ಹೇಳುವ ಪೌರಾಣಿಕ ಕಥೆಯಾಗಿದ್ದು, ಈ ವಿಭಾಗದಲ್ಲಿ ಸ್ಪರ್ಧಿಸಲು ಆಯ್ಕೆಯಾದ 35 ಚಿತ್ರಗಳಲ್ಲಿ ಒಂದಾಗಿದೆ.
Mahavatar Narsimha
ಮಹಾವತಾರ ನರಸಿಂಹ
Updated on

ಹೊಂಬಾಳೆ ಫಿಲ್ಮ್ಸ್‌ನ ಮಹಾವತಾರ ನರಸಿಂಹ ಚಿತ್ರವು ಆಸ್ಕರ್ ಪ್ರಶಸ್ತಿ ಗೆಲ್ಲುವತ್ತ ಒಂದೊಂದೆ ಹೆಜ್ಜೆ ಹಾಕುತ್ತಾ ಸಾಗುತ್ತಿದೆ. 2026ರ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಕ್ಕೆ ಸಲ್ಲಿಸಲ್ಪಟ್ಟಿದ್ದ ಅಶ್ವಿನ್ ಕುಮಾರ್ ನಿರ್ದೇಶನದ 2D ಮತ್ತು 3D ಅನಿಮೇಟೆಡ್ ಚಿತ್ರವನ್ನು ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ ವಿಭಾಗದ ಅಡಿಯಲ್ಲಿ ಶಾರ್ಟ್‌ಲಿಸ್ಟ್ ಮಾಡಲಾಗಿದೆ.

ವಿಷ್ಣು ಮತ್ತು ರಾಜ ಹಿರಣ್ಯಕಶಿಪು ಮತ್ತು ಆತನ ಮಗ ಭಕ್ತ ಪ್ರಹ್ಲಾದನ ಕಥೆಯನ್ನು ಹೇಳುವ ಪೌರಾಣಿಕ ಕಥೆಯಾಗಿದ್ದು, ಈ ವಿಭಾಗದಲ್ಲಿ ಸ್ಪರ್ಧಿಸಲು ಆಯ್ಕೆಯಾದ 35 ಚಿತ್ರಗಳಲ್ಲಿ ಒಂದಾಗಿದೆ. ಈ ವಿಭಾಗದಲ್ಲಿ ದಿ ಬ್ಯಾಡ್ ಗೈಸ್ 2, ಝೂಟೋಪಿಯಾ 2, ಡೆಮನ್ ಸ್ಲೇಯರ್: ಕಿಮೆಟ್ಸು ನೋ ಯೈಬಾ ಇನ್ಫಿನಿಟಿ ಕ್ಯಾಸಲ್, ಕೆಪಾಪ್ ಡೆಮನ್ ಹಂಟರ್ಸ್, ದಿ ಸ್ಪಾಂಜ್‌ಬಾಬ್ ಮೂವಿ: ಸರ್ಚ್ ಫಾರ್ ಸ್ಕ್ವೇರ್‌ಪ್ಯಾಂಟ್ಸ್ ಮತ್ತು ದಿ ಟ್ವಿಟ್ಸ್, ಇತರವುಗಳು ಶಾರ್ಟ್‌ಲಿಸ್ಟ್ ಆಗಿವೆ.

ಮಹಾವತಾರ ನರಸಿಂಹ ಚಿತ್ರವು ಅಂತಿಮ ನಾಮನಿರ್ದೇಶಿತರ ಪಟ್ಟಿಯಲ್ಲಿ ಸ್ಥಾನ ಪಡೆದರೆ, ಆ ವಿಭಾಗದಲ್ಲಿ ನಾಮನಿರ್ದೇಶನಗೊಂಡ ಮೊದಲ ಭಾರತೀಯ ಅನಿಮೇಟೆಡ್ ಚಿತ್ರವಾಗಲಿದೆ. ಇದು ಭಾರತೀಯ ಅನಿಮೇಷನ್‌ಗೆ ಐತಿಹಾಸಿಕ ಮೈಲಿಗಲ್ಲಾಗಲಿದೆ. ಚಿತ್ರವು 300 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಕಾಣುವ ಮೂಲಕ ಬಾಕ್ಸ್ ಆಫೀಸ್ ಯಶಸ್ಸು ಕಂಡ ಮೊದಲ ಅನಿಮೇಷನ್ ಚಿತ್ರವಾಗಿದೆ. ಗಿಂಟ್ಸ್ ಜಿಲ್ಬಾಲೋಡಿಸ್ ನಿರ್ದೇಶನದ "ಫ್ಲೋ ಫ್ರಂ ಲಾಟ್ವಿಯಾ" ಕಳೆದ ವರ್ಷ ಈ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.

ಅಶ್ವಿನ್ ಕುಮಾರ್ ನಿರ್ದೇಶನದ 'ಮಹಾವತಾರ ನರಸಿಂಹ' ಜುಲೈ 25 ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ನಂತರ ಜುಲೈ 31 ರಿಂದ ಶ್ರೀಲಂಕಾ, ಆಸ್ಟ್ರೇಲಿಯಾ, ಮಲೇಷ್ಯಾ ಮತ್ತು ಯುರೋಪ್‌ ಸೇರಿದಂತೆ ಅನೇಕ ದೇಶಗಳಲ್ಲಿ ತೆರೆಕಂಡಿತು. ಕೂಲಿ, ವಾರ್ 2 ನಂತಹ ಚಿತ್ರಗಳ ಬಿಡುಗಡೆಯ ನಡುವೆಯೇ ಚಿತ್ರವು ಭಾರತ ಮತ್ತು ವಿದೇಶಗಳಲ್ಲಿ ಉತ್ತಮ ಪ್ರದರ್ಶನ ಕಂಡಿತು.

Mahavatar Narsimha
ಅನಿಮೇಷನ್ ಬ್ಲಾಕ್‌ಬಸ್ಟರ್ 'ಮಹಾವತಾರ ನರಸಿಂಹ' ಒಟಿಟಿಯಲ್ಲಿ ಬಿಡುಗಡೆ

ಅಶ್ವಿನ್ ಕುಮಾರ್ ನಿರ್ದೇಶನದ ಮಹಾವತಾರ ನರಸಿಂಹ, ವಿಷ್ಣುವಿನ ಕಟ್ಟಾ ಭಕ್ತ ಮತ್ತು ಅವನ ತಂದೆ ಹಿರಣ್ಯಕಶಿಪುಂ- ಒಬ್ಬ ಪರಾಕ್ರಮಿ ರಾಜ ಮತ್ತು ಕಟ್ಟಾ ನಾಸ್ತಿಕನ ನಡುವಿನ ಕಥೆಯಾಗಿದೆ. ವಿಷ್ಣುವಿನ ಇರುವಿಕೆ ಬಗ್ಗೆ ತನ್ನ ಮಗನ ಅಚಲ ನಂಬಿಕೆಯಿಂದ ಕೋಪಗೊಂಡ ತಂದೆಯ ಕಥೆಯನ್ನು ಒಳಗೊಂಡಿದೆ.

ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸಿದ್ದು, ಕ್ಲೀಮ್ ಪ್ರೊಡಕ್ಷನ್ಸ್ ಬೆಂಬಲದೊಂದಿಗೆ ಶಿಲ್ಪಾ ಧವನ್, ಕುಶಾಲ್ ದೇಸಾಯಿ ಮತ್ತು ಚೈತನ್ಯ ದೇಸಾಯಿ ನಿರ್ಮಿಸಿದ್ದಾರೆ. ಈ ಚಿತ್ರವು ಸ್ಯಾಮ್ ಸಿಎಸ್ ಅವರ ಸಂಗೀತ ಸಂಯೋಜನೆ ಹೊಂದಿದ್ದು, ಚಿತ್ರಕಥೆಯನ್ನು ಜಯಪೂರ್ಣ ದಾಸ್ ಮತ್ತು ರುದ್ರ ಪ್ರತಾಪ್ ಘೋಷ್ ಬರೆದಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ತನ್ನ ಮಹತ್ವಾಕಾಂಕ್ಷೆಯ ಮಹಾವತಾರ್ ಸಿನಿಮ್ಯಾಟಿಕ್ ಯೂನಿವರ್ಸ್ ಎಂಬ ಪ್ರಮುಖ ಯೋಜನೆಯನ್ನು ಪ್ರಾರಂಭಿಸಿದ್ದು, ಇದು ಹಿಂದೂ ಪುರಾಣದ ಭಗವಾನ್ ವಿಷ್ಣುವಿನ ಹತ್ತು ಅವತಾರಗಳನ್ನು ಆಧರಿಸಿದ ಅನಿಮೇಟೆಡ್ ಚಲನಚಿತ್ರಗಳನ್ನು ಒಳಗೊಂಡಿರುತ್ತದೆ. ಈ ಸರಣಿಯ ಮೊದಲ ಚಿತ್ರ ಇದೀಗ ಬಿಡುಗಡೆಯಾಗಿದ್ದು, ಉಳಿದ ಚಿತ್ರಗಳು 2025 ಮತ್ತು 2037ರ ನಡುವೆ ಬಿಡುಗಡೆ ಮಾಡಲು ಯೋಜಿಸಲಾಗಿದೆ.

ಮಹಾವತಾರ ನರಸಿಂಹ ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

98ನೇ ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು 2026ರ ಜನವರಿ 22 ರಂದು ಘೋಷಿಸಲಾಗುವುದು. 98ನೇ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭವು ಮಾರ್ಚ್ 15 ರಂದು ಓವೇಶನ್ ಹಾಲಿವುಡ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com