

ಬೆಂಗಳೂರು: ಬಿಗ್ ಬಾಸ್ ಕನ್ನಡ 12ನೇ ಆವೃತ್ತಿ ಈ ಬಾರಿ ಹೆಚ್ಚಾಗಿ ಜಗಳ, ವಾಗ್ವಾದ ನಾನಾ-ನೀನಾ ವಿಚಾರವಾಗಿ ಸುದ್ದಿಯಾಗುತ್ತಿದೆ. ಅಲ್ಲಿ ಗಿಲ್ಲಿ ನಟನ ಕಾಮಿಡಿ ಪ್ರೇಕ್ಷಕರಿಗೆ ಕೊಂಚ ನಗುವನ್ನು ತರಿಸುತ್ತದೆ. ಇನ್ನು ನೇರ-ನುಡಿಗೆ ಹೆಸರಾಗಿದ್ದ ಧ್ರುವಂತ್ ಕೆಲವೊಮ್ಮೆ ಪ್ರತಿಸ್ಪರ್ಧಿಗಳ ವೈಯಕ್ತಿಕ ವಿಷಯಕ್ಕೆ ನಾಲಿಗೆ ಹರಿಬಿಡುತ್ತಿದ್ದರು. ಆದರೆ ಇಂದಿನ ಎಪಿಸೋಡ್ ನಲ್ಲಿ ಧ್ರುವಂತ್ ಹಾಡಿದ ಒಂದು ಮಾತು ಸೂರಜ್ ಮತ್ತು ಧನುಷ್ ರೊಚ್ಚಿಗೇಳುವಂತೆ ಮಾಡಿದೆ. ಒಂದು ಹಂತದಲ್ಲಿ ಧನುಷ್ ಕೈ ಎತ್ತುವ ಹಂತಕ್ಕೂ ಹೋಗಿದ್ದರು. ಆದರೆ ಇತರೇ ಸ್ಪರ್ಧಿಗಳು ತಡೆದಿದ್ದಾರೆ. ಇವತ್ತು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಈ ಘಟನಾವಳಿಗಳು ಕಾಣಸಿಕ್ಕಿವೆ. ಯಾವ ಕಾರಣಕ್ಕೆ ಧ್ರುವಂತ್ ಕೂಗಾಡಿದರು ಎಂಬುದನ್ನು ಇಂದಿನ ಸಂಚಿಕೆಯಲ್ಲಿ ನೋಡಬಹುದು.
Advertisement