ಮದುವೆಯಾಗುವ ಯೋಚನೆ ಬಂದಿದೆ, ಹುಡುಗನ ಆಯ್ಕೆ ಅಪ್ಪ-ಅಮ್ಮನಿಗೆ ಬಿಟ್ಟಿದ್ದು: ನಟಿ ರಚಿತಾ ರಾಮ್

ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ಗೆ ಇಂದು ಅಕ್ಟೋಬರ್ 3 ಬರ್ತ್ ಡೇ ಸಂಭ್ರಮ.
Actress Rachita Ram
ನಟಿ ರಚಿತಾ ರಾಮ್
Updated on

ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ಗೆ ಇಂದು ಅಕ್ಟೋಬರ್ 3 ಬರ್ತ್ ಡೇ ಸಂಭ್ರಮ. ಮಧ್ಯರಾತ್ರಿಯಿಂದಲೇ ಅವರು ತಮ್ಮ ಕುಟುಂಬ ಸದಸ್ಯರು, ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಮಾಧ್ಯಮ ಪ್ರತಿನಿಧಿಗಳು ಸಹ ಅವರ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಎಂದಿನಂತೆ ಸಹಜವಾಗಿ ಅವರ ಮದುವೆ ವಿಚಾರ ಬಂತು.

ಅದಕ್ಕೆ ನಗುತ್ತಾ ಉತ್ತರಿಸಿದ ರಚಿತಾ ರಾಮ್, ನಾನು ಖಂಡಿತವಾಗಿಯೂ ಮದುವೆ ಆಗುತ್ತೇನೆ. ಆ ಯೋಚನೆ ಕೂಡ ಬಂದಿದೆ. ತಂದೆ-ತಾಯಿಗೂ ಹೇಳಿದ್ದೇನೆ. ಹುಡುಗನನ್ನು ನೋಡಲು ಶುರು ಮಾಡಿದ್ದಾರೆ. ಇಂಥದ್ದೇ ಕ್ವಾಲಿಟಿ ಅಂತೇನೂ ಇಲ್ಲ. ಯಾರನ್ನೇ ಕರೆದುಕೊಂಡು ಬಂದು ಮದುವೆಯಾಗು ಎಂದರೆ ಆಗುತ್ತೇನೆ. ದೇವರು ಯಾರನ್ನು ಕಳಿಸುತ್ತಾನೋ ಅವರನ್ನು ನಾನು ಅಕ್ಸೆಪ್ಟ್​ ಮಾಡುತ್ತೇನೆ ಎನ್ನುವ ಮೂಲಕ ಮದುವೆ ಹುಡುಗನ ಆಯ್ಕೆ ಸಂಪೂರ್ಣ ಜವಾಬ್ದಾರಿಯನ್ನು ಪಾಲಕರ ಮೇಲೆ ಬಿಟ್ಟಿದ್ದು ಎಂದು ಹೇಳಿದ್ದಾರೆ.

Actress Rachita Ram
ರಜಿನಿಕಾಂತ್ ನಟನೆಯ 'ಕೂಲಿ' ಚಿತ್ರದ ಟ್ರೇಲರ್‌ನಲ್ಲಿ ನಟಿ ರಚಿತಾ ರಾಮ್; ತಮಿಳು ಚಿತ್ರರಂಗಕ್ಕೆ ಪದಾರ್ಪಣೆ

ಕಿಟ್​ ವಿತರಣೆ

ಇದೇ ಮೊದಲ ಬಾರಿಗೆ ಅಪ್ಪ-ಅಮ್ಮನ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಅಪ್ಪ-ಅಮ್ಮನನ್ನು ಪರಿಚಯಿಸಿದರು. ಹುಟ್ಟುಹಬ್ಬದ ನಿಮಿತ್ತ ಪೌರ ಕಾರ್ಮಿಕರಿಗೆ ಕಿಟ್​ ವಿತರಣೆ ಮಾಡಿದರು.

ಡಿ ಬಾಸ್ ನೆನೆದ ರಚ್ಚು

ರಚಿತಾ ರಾಮ್ ಅವರು 2011ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟು ‘ಬೆಂಕಿಯಲ್ಲಿ ಅರಳಿದ ಹೂವು’ ಅವರ ನಟನೆಯ ಮೊದಲ ಧಾರಾವಾಹಿ. ಈ ಧಾರಾವಾಹಿ ಸಾಕಷ್ಟು ಗಮನ ಸೆಳೆಯಿತು. ಆ ಬಳಿಕ ‘ಅರಸಿ’ ಹೆಸರಿನ ಧಾರಾವಾಹಿ ಮಾಡಿದರು. ಇದರಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. 2012ರಲ್ಲಿ ಧಾರಾವಾಹಿಯಲ್ಲಿ ರಶ್ಮಿ ಹೆಸರಿನ ಪಾತ್ರ ಮಾಡಿದ್ದರು. ಆ ಬಳಿಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು.

ರಚಿತಾ ರಾಮ್ ಅವರು ಮೊದಲು ಆಯ್ಕೆ ಆಗಿದ್ದು, ‘ಬುಲ್ ಬುಲ್’ ಸಿನಿಮಾದಲ್ಲಿ. ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ದರ್ಶನ್ ತಾಯಿ ಮೀನಾ ತುಗುದೀಪ್. ದರ್ಶನ್ ಹೋಂ ಬ್ಯಾನರ್​ನಿಂದ ಲಾಂಚ್ ಆಗಿರುವುದರಿಂದ ಅವರಿಗೆ ದರ್ಶನ್ ಮೇಲೆ ವಿಶೇಷ ಗೌರವ.

ರಚಿತಾ ಅವರು ಇತ್ತೀಚೆಗೆ ನಟಿಸಿದ್ದ ‘ಕೂಲಿ’ ಸಿನಿಮಾ ಸೂಪರ್ ಹಿಟ್ ಆಗಿದೆ. ಇದು ತಮಿಳು ಸಿನಿಮಾ. ಈ ಚಿತ್ರದಲ್ಲಿ ರಜನಿಕಾಂತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರಚಿತಾ ಪಾತ್ರ ಭಿನ್ನವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com