ರಜಿನಿಕಾಂತ್ ನಟನೆಯ 'ಕೂಲಿ' ಚಿತ್ರದ ಟ್ರೇಲರ್‌ನಲ್ಲಿ ನಟಿ ರಚಿತಾ ರಾಮ್; ತಮಿಳು ಚಿತ್ರರಂಗಕ್ಕೆ ಪದಾರ್ಪಣೆ

ರಜಿನಿಕಾಂತ್ ನಟನೆಯ ಮತ್ತು ಲೋಕೇಶ್ ಕನಕರಾಜ್ ನಿರ್ದೇಶನದ ಮೆಗಾ ಪ್ಯಾನ್-ಇಂಡಿಯಾ ಚಿತ್ರದಲ್ಲಿ ರಚಿತಾ ಕಾಣಿಸಿಕೊಂಡಿದ್ದಾರೆ.
Rajinikanth and Rachita Ram
ರಜಿನಿಕಾಂತ್ - ರಚಿತಾ ರಾಮ್
Updated on

ನಟಿ ರಚಿತಾ ರಾಮ್ ಕೂಲಿ ಚಿತ್ರದಲ್ಲಿ ನಟಿಸುತ್ತಿರುವ ಕುರಿತು ಎದ್ದಿದ್ದ ವದಂತಿಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಬಹು ನಿರೀಕ್ಷಿತ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ನಟಿ ರಚಿತಾ ಕಾಣಿಸಿಕೊಂಡಿದ್ದಾರೆ.

ಕೂಲಿ ಚಿತ್ರವು ರಚಿತಾ ಅವರ ಚೊಚ್ಚಲ ತಮಿಳು ಚಿತ್ರವಾಗಿದ್ದು, ರಜಿನಿಕಾಂತ್ ನಟನೆಯ ಮತ್ತು ಲೋಕೇಶ್ ಕನಕರಾಜ್ ನಿರ್ದೇಶನದ ಮೆಗಾ ಪ್ಯಾನ್-ಇಂಡಿಯಾ ಚಿತ್ರದಲ್ಲಿ ರಚಿತಾ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಕನ್ನಡದ ನಟ ಉಪೇಂದ್ರ, ಅಮೀರ್ ಖಾನ್, ಸತ್ಯರಾಜ್, ನಾಗಾರ್ಜುನ ಮತ್ತು ಶ್ರುತಿ ಹಾಸನ್ ಇದ್ದಾರೆ.

ಕನ್ನಡ ಚಿತ್ರರಂಗದಲ್ಲಿ 12 ವರ್ಷಗಳನ್ನು ಪೂರೈಸಿದ್ದು, ಈ ಹಿಂದೆ ರಚಿತಾ ಕಲ್ಯಾಣ್ ದೇವ್ ನಟನೆಯ ಸೂಪರ್ ಮಚ್ಚಿ (2022) ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ್ದರು. ಆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಗಳಿಸದಿದ್ದರೂ ಕೂಡ, ನಟಿ ತಮ್ಮ ನಟನೆಗೆ ಪ್ರಶಂಸೆ ಗಳಿಸಿದ್ದರು. ಕೂಲಿ ಚಿತ್ರವು ಸಂಪೂರ್ಣವಾಗಿ ವಿಭಿನ್ನ ಚಿತ್ರವಾಗಿದ್ದು, ₹400 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ ಎಂದು ವರದಿಯಾಗಿದೆ.

ಕೂಲಿ ಚಿತ್ರದಲ್ಲಿ ರಚಿತಾ ನೆಗೆಟಿವ್ ಶೇಡ್ ಇರುವ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಆದರೆ, ಟ್ರೇಲರ್ ಅವರ ಪಾತ್ರದ ಬಗ್ಗೆ ಏನನ್ನೂ ಬಹಿರಂಗಪಡಿಸಿಲ್ಲ ಮತ್ತು ಅವರ ಹೆಸರು ಮುಖ್ಯ ಕ್ರೆಡಿಟ್‌ಗಳಲ್ಲಿಯೂ ಕಾಣಿಸಿಕೊಂಡಿಲ್ಲ. ಅವರು ಚಿತ್ರದ ಪ್ರಚಾರಗಳಿಗೂ ಗೈರಾಗಿದ್ದರು. ಇದು ಅವರ ಪಾತ್ರಕ್ಕೆ ಮತ್ತಷ್ಟು ನಿಗೂಢತೆಯನ್ನು ಸೇರಿಸಿದೆ. ಆಗಸ್ಟ್ 14 ರಂದು ಚಿತ್ರ ತೆರೆಗೆ ಬರಲಿದ್ದು, ಅಲ್ಲಿಯವರೆಗೂ ಕಾಯಲೇಬೇಕಾಗಿದೆ.

Rajinikanth and Rachita Ram
ರಜಿನಿಕಾಂತ್ ಅಭಿನಯದ 171ನೇ ಸಿನಿಮಾದ ಟೈಟಲ್ ಅನಾವರಣ; 'ಕೂಲಿ' ಟೀಸರ್ ಬಿಡುಗಡೆ
Rachita Ram in Coolie
ಕೂಲಿ ಟ್ರೇಲರ್‌ನಲ್ಲಿ ರಚಿತಾ ರಾಮ್

ಸನ್ ಪಿಕ್ಚರ್ಸ್ ನಿರ್ಮಿಸಿರುವ ಕೂಲಿ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಮತ್ತು ಗಿರೀಶ್ ಗಂಗಾಧರನ್ ಛಾಯಾಗ್ರಹಣವಿದೆ.

ರಚಿತಾ ಸದ್ಯ ಮಹೇಶ್ ಕುಮಾರ್ ನಿರ್ದೇಶನದ ಸತೀಶ್ ನೀನಾಸಂ ನಟಿಸಿರುವ ಅಯೋಗ್ಯ 2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಜಡೇಶಾ ಕೆ ಹಂಪಿ ನಿರ್ದೇಶನದ ವಿಜಯ್ ಕುಮಾರ್ ಜೊತೆಗೆ ಲ್ಯಾಂಡ್‌ಲಾರ್ಡ್ ಚಿತ್ರದಲ್ಲೂ ನಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com