
ಬೆಂಗಳೂರು: ಹೊಂಬಾಳೆ ಫಿಲ್ಮ್ಸ್‌ನ ಬ್ಲಾಕ್‌ಬಸ್ಟರ್ ಕಾಂತಾರ ಅಧ್ಯಾಯ 1ಕ್ಕೆ ಅತ್ಯುತ್ತಮ ಆರಂಭ ಸಿಕ್ಕಿದೆ. ವಾರಾಂತ್ಯದ ನಂತರ ಕರ್ನಾಟಕದಲ್ಲಿ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ರಿಷಬ್ ಶೆಟ್ಟಿ ಬರೆದು, ನಟಿಸಿ, ನಿರ್ದೇಶಿಸಿದ ಈ ದೈವಿಕ ಆಕ್ಷನ್ ಥ್ರಿಲ್ಲರ್ ಚಿತ್ರ ರಾಜ್ಯದಲ್ಲಿ ಯಶ್ ನಟನೆಯ ಕೆಜಿಎಫ್ ಅಧ್ಯಾಯ 2 ಅನ್ನು ಸೋಲಿಸಿ ಕರ್ನಾಟಕದಲ್ಲಿ ವಾರಾಂತ್ಯದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಖ್ಯಾತಿಗೆ ಭಾಜನವಾಗಿದೆ.
ಅಕ್ಟೋಬರ್ 2ರಂದು ಗಾಂಧಿ ಜಯಂತಿ ಮತ್ತು ದಸರಾ ಹಬ್ಬದಂದು ಬಿಡುಗಡೆಯಾದ ಕಾಂತಾರ ಅಧ್ಯಾಯ 2 ರಾಜ್ಯದಲ್ಲಿ 20 ಕೋಟಿಗೂ ಹೆಚ್ಚು ಗಳಿಕೆ ದಾಖಲಿಸಿತ್ತು. 4 ದಿನಗಳ ವಾರಾಂತ್ಯದಲ್ಲಿ ಸುಮಾರು 79 ಕೋಟಿ ಗಳಿಕೆಯನ್ನು ದಾಖಲಿಸಿ ಭರ್ಜರಿ ಕಲೆಕ್ಷನ್ ಮಾಡಿದೆ. ಇದು ಈಗ ಕರ್ನಾಟಕ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ.
4 ದಿನಗಳ ವಾರಾಂತ್ಯದಲ್ಲಿ ಅತೀ ಹೆಚ್ಚು ಕಲೆಕ್ಷನ್ ದಾಖಲೆ ಯಶ್ ನಟನೆಯ ಆಕ್ಷನ್ ಚಿತ್ರ ಕೆಜಿಎಫ್ 2 ಹೊಂದಿತ್ತು. ಕೆಜಿಎಫ್ 2 ರಾಜ್ಯದಲ್ಲಿ ಸುಮಾರು 73.50 ಕೋಟಿ ಗಳಿಕೆ ಮಾಡಿತ್ತು. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರವನ್ನು ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸುವ ಮೊದಲು ಭಾರಿ ಪ್ರಚಾರ ಪಡೆದಿದ್ದರಿಂದ ಕಾಂತಾರ 2 ಸಾರ್ವಕಾಲಿಕ ಅತಿದೊಡ್ಡ ಕನ್ನಡ ಬ್ಲಾಕ್‌ಬಸ್ಟರ್ ಅನ್ನು ಸೋಲಿಸುವುದು ಒಂದು ಪ್ರಮುಖ ಸಾಧನೆಯಾಗಿದೆ. ಮತ್ತೊಂದೆಡೆ ರಾಜ್ಯದಲ್ಲಿ ಬಿಡುಗಡೆಯಾಗಿರುವ ಸ್ಕ್ರೀನ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವುದರಿಂದ ಆರನೇ ದಿನದೊಳಗೆ ಇದು ರಾಜ್ಯದಲ್ಲಿ 100 ಕೋಟಿ ಗಳಿಕೆ ದಾಟಲಿದೆ. ಬಾಹುಬಲಿ 2, ಕೆಜಿಎಫ್ 2 ಮತ್ತು ಕಾಂತಾರ ನಂತರ ಈ ಮೈಲಿಗಲ್ಲು ತಲುಪಿದ ನಾಲ್ಕನೇ ಚಿತ್ರವಾಗಿದೆ.
ಪ್ರಸ್ತುತ ಟ್ರೆಂಡ್ ಅನ್ನು ಗಮನಿಸಿದರೆ, ಕಾಂತಾರ 2 ಕರ್ನಾಟಕದಲ್ಲಿ 200 ಕೋಟಿ ಮೈಲಿಗಲ್ಲು ದಾಟಲಿರುವ ಮೊದಲ ಚಿತ್ರವಾಗಬಹುದು. ಕಾಂತಾರ (183.60 ಕೋಟಿ) ಅನ್ನು ಹಿಂದಿಕ್ಕಬಹುದು. ಆದಾಗ್ಯೂ, ಎರಡನೇ ವಾರಾಂತ್ಯ ಮತ್ತು ಅದರ ನಂತರ ಅದು ಹೇಗೆ ಪ್ರದರ್ಶನ ನೀಡುತ್ತದೆ ಎಂಬುದರ ಮೇಲೆ ಬಹಳಷ್ಟು ಅವಲಂಬಿತವಾಗಿರುತ್ತದೆ.
ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆಯ ಚಲನಚಿತ್ರಗಳು:
1. ಕಾಂತಾರ (2022) - 183.60 ಕೋಟಿ
2. ಕೆಜಿಎಫ್ ಅಧ್ಯಾಯ 2 (2022) - 183 ಕೋಟಿ
3. ಬಾಹುಬಲಿ 2 (2017) - 129 ಕೋಟಿ
Advertisement