
ಬೆಂಗಳೂರು: ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ನಿರ್ಮಾಪಕರೊಬ್ಬರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ರಿಚ್ಚಿ ಸಿನಿಮಾದ ಶೂಟಿಂಗ್ ವೇಳೆ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬಿಗ್ ಬಾಸ್ 11 ಸ್ಪರ್ಧಿಯೊಬ್ಬರು ದೂರು ನೀಡಿದ್ದರು. ಅದರ ಅನ್ವಯ ಅನ್ನಪೂರ್ಣೇಶ್ವರಿನಗರ ನಿವಾಸಿ ಹೇಮಂತ್ ಕುಮಾರ್ (34) ನನ್ನು ಬಂಧಿಸಲಾಗಿದೆ.
ನಟಿಗೆ 2022ರಲ್ಲಿ ನಿರ್ದೇಶಕ, ನಿರ್ಮಾಪಕ ಎಂದು ಹೇಳಿಕೊಂಡು ಆರೋಪಿ ಪರಿಚಯವಾಗಿದ್ದರು. ‘ರಿಚ್ಚಿ ಹೆಸರಿನ ಸಿನಿಮಾ ಮಾಡುತ್ತಿದ್ದು, ಅದರಲ್ಲಿ ನಾಯಕಿಯಾಗಿ ನಟಿಸಬೇಕು ಎಂದು ಹೇಮಂತ್ ಅವರು ನಟಿಯನ್ನು ಕೋರಿದ್ದರು. ₹2 ಲಕ್ಷ ಸಂಭಾವನೆ ನೀಡುವುದಾಗಿ ಮಾತುಕತೆ ನಡೆದು ಚಿತ್ರೀಕರಣ ಆರಂಭವಾಗಿತ್ತು.
ಆದರೆ, ಕಾರಣಾಂತರಗಳಿಂದ ಆರೋಪಿ ಸಿನಿಮಾ ಚಿತ್ರೀಕರಣವನ್ನು ಮುಂದೂಡಿದ್ದರು. ಚಿತ್ರೀಕರಣದ ಅವಧಿಯಲ್ಲಿ ಆರೋಪಿ ಅಸಭ್ಯ ರೀತಿಯಲ್ಲಿ ಸ್ಪರ್ಶಿಸುತ್ತಿದ್ದರು’ ಎಂದು ದೂರು ನೀಡಲಾಗಿದೆ. ಎಂದು ಪೊಲೀಸರು ತಿಳಿಸಿದ್ದಾರೆ.
ಸಿನಿಮಾ ಶೂಟಿಂಗ್ ವೇಳೆ ಅರೆಬರೆ ಬಟ್ಟೆ ಧರಿಸುವಂತೆ ಒತ್ತಾಯ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಚಿತ್ರ ಶೂಟಿಂಗ್ ಮುಗಿದ ಮೇಲೆ ಪ್ರಚಾರದ ನೆಪದಲ್ಲಿ ಖಾಸಗಿ ಹೋಟೆಲಿಗೆ ಒಬ್ಬಳೇ ಬರುವಂತೆ ಕಿರುಕುಳ ನೀಡಿದ್ದರು. ನಾನು ನಿರಾಕರಿಸಿದಾಗ, ನನ್ನ ಹಿಂದೆ ರೌಡಿಗಳನ್ನು ಬಿಟ್ಟು ಬೆದರಿಕೆ ಹಾಕಿದ್ದಾರೆ.
ಚಿತ್ರದಲ್ಲಿ ಸೆನ್ಸಾರ್ ಆಗದ ಪೋಟೋಗಳನ್ನು ಸೋಷಿಯಲ್ ಮೀಡಿಯದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದರು. ಅಷ್ಟೇ ಅಲ್ಲದೇ ನನ್ನ ತಾಯಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನಟಿ ದೂರು ನೀಡಿದ್ದರು.
Advertisement