ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್‌ಗೆ ಸೇನಾ ಮುಖ್ಯಸ್ಥರಿಂದ ಕಮಾಂಡೇಷನ್‌!

ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಟ, ಸೇನೆಗಾಗಿ ಮತ್ತು ನಾಗರಿಕರ ಸುಧಾರಣೆಗಾಗಿ ತಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇನೆ ಎಂದು ತಿಳಿಸಿದರು.
Malayalam superstar Mohanlal receives commendation from Army Chief
ಮೋಹನ್ ಲಾಲ್‌ಗೆ ಸೇನಾ ಮುಖ್ಯಸ್ಥರಿಂದ ಕಮಾಂಡೇಷನ್‌
Updated on

ನವದೆಹಲಿ: ನವದೆಹಲಿಯಲ್ಲಿ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಇತ್ತೀಚೆಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾದ ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಅವರಿಗೆ ಮಂಗಳವಾರ ಕಮಾಂಡೇಷನ್‌ ಪ್ರಶಂಸಾ ಪದಕ ನೀಡಿ ಗೌರವಿಸಿದರು.

ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಶ್ರೇಣಿಯನ್ನು ಹೊಂದಿರುವ ಮೋಹನ್ ಲಾಲ್ ಅವರು, ಸೇನಾ ಮುಖ್ಯಸ್ಥರಿಂದ ಪ್ರಶಂಸೆಯನ್ನು ಪಡೆಯುವುದು " ಅತ್ಯಂತ ಗೌರವ" ಎಂದು ಹೇಳಿದ್ದಾರೆ.

ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಟ, ಸೇನೆಗಾಗಿ ಮತ್ತು ನಾಗರಿಕರ ಸುಧಾರಣೆಗಾಗಿ ತಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇನೆ ಎಂದು ತಿಳಿಸಿದರು.

Malayalam superstar Mohanlal receives commendation from Army Chief
ಮೋಹನ್ ಲಾಲ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ; SRK, ವಿಕ್ರಾಂತ್ ಮಾಸ್ಸೆ ಹಾಗೂ ರಾಣಿ ಮುಖರ್ಜಿಗೆ ಅತ್ಯುತ್ತಮ ನಟ-ನಟಿ ಪ್ರಶಸ್ತಿ ಪ್ರದಾನ!

"ಪ್ರಾದೇಶಿಕ ಸೇನಾ ಬೆಟಾಲಿಯನ್‌ಗಳಿಗೆ ಹೆಚ್ಚಿನ ದಕ್ಷತೆಯನ್ನು ಹೇಗೆ ತರುವುದು ಮತ್ತು ದೇಶಕ್ಕಾಗಿ ಏನು ಮಾಡಬಹುದು" ಎಂಬುದರ ಕುರಿತು ನಾನು ಮತ್ತು ಸೇನಾ ಮುಖ್ಯಸ್ಥರು ಚರ್ಚಿಸಿದ್ದೇವೆ ಎಂದು ಅವರು ಹೇಳಿದರು.

"ಇದು ಒಂದು ಸಣ್ಣ ಚರ್ಚೆಯಾಗಿತ್ತು. ಆದರೆ ನಮ್ಮ ಮುಂದೆ ದೊಡ್ಡ ಯೋಜನೆಗಳಿವೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com