

ಚೆನ್ನೈ: ಖ್ಯಾತ ತಮಿಳು ನಟರಾದ ರಜನಿಕಾಂತ್ ಮತ್ತು ಧನುಷ್ ಅವರ ನಿವಾಸಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಇಮೇಲ್‌ಗಳನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸ್ವೀಕರಿಸಿದ್ದಾರೆ ಎಂದು ತಮಿಳುನಾಡು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ತೇನಾಂಪೇಟೆ ಪೊಲೀಸರ ಪ್ರಕಾರ, ಅಕ್ಟೋಬರ್ 27 ರಂದು ಬೆಳಗ್ಗೆ 8.30 ರ ಸುಮಾರಿಗೆ ರಜನಿಕಾಂತ್ ಅವರ ಮನೆಯಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಪತ್ರ ಪೊಲೀಸರಿಗೆ ಬಂದಿದೆ.
"ಪೊಲೀಸರು ಬಾಂಬ್ ನಿಷ್ಕ್ರಿಯ ತಂಡದೊಂದಿಗೆ ರಜನಿಕಾಂತ್ ಅವರ ಮನೆಗೆ ತೆರಳಿದಾಗ, ಅವರು ಬಾಂಬ್ ಸ್ಕ್ವಾಡ್‌ನ ಸಹಾಯದಿಂದ ಶೋಧ ಕಾರ್ಯಾಚರಣೆಯ ಅಗತ್ಯವಿಲ್ಲ ಎಂದು ನಮಗೆ ತಿಳಿಸಿದರು" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅದೇ ದಿನ ಸಂಜೆ 6.30 ಕ್ಕೆ ಎರಡನೇ ಬೆದರಿಕೆ ಪತ್ರ ಬಂದಿದ್ದು, ರಜನಿಕಾಂತ್ ಅವರ ತಂಡ ಮತ್ತೆ ಭದ್ರತಾ ತಪಾಸಣೆಯನ್ನು ನಿರಾಕರಿಸಿತು.
ಅದೇ ದಿನ ನಟ ಧನುಷ್ ಅವರ ಮನೆಯಲ್ಲೂ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಪತ್ರವೂ ಬಂದಿದೆ. "ಅವರು ಕೂಡ ನಮ್ಮ ಸಹಾಯವನ್ನು ನಿರಾಕರಿಸಿದರು" ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಇತ್ತೀಚಿನ ವಾರಗಳಲ್ಲಿ ಹಲವಾರು ಪ್ರಮುಖ ವ್ಯಕ್ತಿಗಳಿಗೆ ಈ ರೀತಿಯ ಬೆದರಿಕೆ ಪತ್ರಗಳು ಬರುತ್ತಿದ್ದು, ಸೈಬರ್ ಅಪರಾಧ ಪೊಲೀಸರು ಆ ಇಮೇಲ್‌ಗಳನ್ನು ಪತ್ತೆಹಚ್ಚುತ್ತಿದ್ದಾರೆ" ಎಂದು ಅಧಿಕಾರಿ ತಿಳಿಸಿದ್ದಾರೆ.
Advertisement