ಹೊಸ ಬಾಕ್ಸ್ ಆಫೀಸ್ ಕಿಂಗ್: ಪ್ರದೀಪ್ ರಂಗನಾಥನ್ ನಟಿಸಿದ ಸತತ ಮೂರು ಚಿತ್ರಗಳು ಶತಕೋಟಿ ಕಲೆಕ್ಷನ್!

ನಟ-ನಿರ್ದೇಶಕ ಪ್ರದೀಪ್ ರಂಗನಾಥನ್ ಅವರು ಭಾರತೀಯ ಚಿತ್ರರಂಗದಲ್ಲಿ ಅಸಾಧಾರಣ ಮೈಲಿಗಲ್ಲನ್ನು ಸಾಧಿಸಿದ್ದಾರೆ. ನಟನೆಯ ಚೊಚ್ಚಲ ಚಿತ್ರದಿಂದಲೇ ಸತತ ಮೂರು ಚಿತ್ರಗಳು 100 ಕೋಟಿಗೂ ಹೆಚ್ಚು ಗಳಿಕೆ ಕಂಡ ಮೊದಲ ಭಾರತೀಯ ನಟ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
Pradeep Ranganathan
ಪ್ರದೀಪ್ ರಂಗನಾಥನ್
Updated on

ನಟ-ನಿರ್ದೇಶಕ ಪ್ರದೀಪ್ ರಂಗನಾಥನ್ ಅವರು ಭಾರತೀಯ ಚಿತ್ರರಂಗದಲ್ಲಿ ಅಸಾಧಾರಣ ಮೈಲಿಗಲ್ಲನ್ನು ಸಾಧಿಸಿದ್ದಾರೆ. ನಟನೆಯ ಚೊಚ್ಚಲ ಚಿತ್ರದಿಂದಲೇ ಸತತ ಮೂರು ಚಿತ್ರಗಳು 100 ಕೋಟಿಗೂ ಹೆಚ್ಚು ಗಳಿಕೆ ಕಂಡ ಮೊದಲ ಭಾರತೀಯ ನಟ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಆ ಮೂರು ಚಿತ್ರಗಳು - 'ಲವ್ ಟುಡೇ', 'ಡ್ರ್ಯಾಗನ್' ಮತ್ತು ಈಗಿನ 'ಡ್ಯೂಡ್'. ಈ ಐತಿಹಾಸಿಕ 'ಹ್ಯಾಟ್ರಿಕ್' ಸಾಧನೆಯು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪ್ರದೀಪ್ ಅವರನ್ನು ಅತ್ಯಂತ ಪ್ರಭಾವಶಾಲಿ ಹೊಸ ಪೀಳಿಗೆಯ ನಟರ ಸಾಲಿನಲ್ಲಿ ನಿಲ್ಲಿಸಿದೆ. ಅವರು ತಮ್ಮ ಚಿತ್ರಗಳಲ್ಲಿ ಭಾವನೆ, ಮನರಂಜನೆ ಮತ್ತು ಯುವ ಶಕ್ತಿಯನ್ನು ಸಮನ್ವಯಗೊಳಿಸುವ ಮೂಲಕ ದೇಶಾದ್ಯಂತ ಪ್ರೇಕ್ಷಕರೊಂದಿಗೆ ಆಳವಾದ ಸಂಪರ್ಕವನ್ನು ಸಾಧಿಸಿದ್ದಾರೆ. ಇದರಿಂದಾಗಿ ಅವರ ಪ್ರತಿ ಬಿಡುಗಡೆಯೂ ಒಂದು ದೊಡ್ಡ ಸಂಭ್ರಮವಾಗಿದೆ.

ಕೀರ್ತಿಸ್ವರನ್ ನಿರ್ದೇಶನದ ಮತ್ತು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಅವರ ಇತ್ತೀಚಿನ ಚಿತ್ರ 'ಡ್ಯೂಡ್' ಬಿಡುಗಡೆಯಾದ ಮೊದಲ ವಾರದಲ್ಲಿಯೇ ಜಾಗತಿಕವಾಗಿ 100 ಕೋಟಿ ಗಡಿ ದಾಟಿದೆ. ದೀಪಾವಳಿ ಹಬ್ಬದ ವಾರಾಂತ್ಯದಲ್ಲಿ ಬಿಡುಗಡೆಯಾದ 'ಡ್ಯೂಡ್' ತಮಿಳುನಾಡಿನಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಪ್ರಾಬಲ್ಯ ಸಾಧಿಸಿ, ಪ್ರಾದೇಶಿಕ ಬಿಡುಗಡೆಗಳಲ್ಲಿ ದೀಪಾವಳಿ ವಿಜೇತನಾಗಿ ಹೊರಹೊಮ್ಮಿದೆ. ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮತ್ತು ಕರ್ನಾಟಕದಲ್ಲಿ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಮ್ಮ ಹ್ಯಾಟ್ರಿಕ್ ಯಶಸ್ಸಿಗೆ ಪ್ರತಿಕ್ರಿಯಿಸಿದ ಪ್ರದೀಪ್ ರಂಗನಾಥನ್, ಈ ಯಶಸ್ಸಿಗೆ ಕಾರಣ ನಾನು ಅಲ್ಲ, ಬದಲಾಗಿ ನನ್ನನ್ನು ತಮ್ಮ ಕುಟುಂಬದ ಸದಸ್ಯರಂತೆ ಪ್ರೀತಿಸಿ ಬೆಂಬಲಿಸಿದ ಪ್ರೇಕ್ಷಕರು ಎಂದಿದ್ದಾರೆ. ತಮಿಳು ಜನರಿಗೆ, ಮತ್ತು ತೆಲುಗು, ಕೇರಳ, ಕರ್ನಾಟಕ ಹಾಗೂ ದುಬೈ, ಮಲೇಷ್ಯಾ, ಸಿಂಗಾಪುರ, ಯುಕೆ, ಉತ್ತರ ಅಮೆರಿಕ ಸೇರಿದಂತೆ ವಿಶ್ವಾದ್ಯಂತ ಇರುವ ನನ್ನ ಪ್ರೇಕ್ಷಕರಿಗೆ ನಿಮ್ಮ ನಿರಂತರ ಪ್ರೀತಿಗೆ ನನ್ನ ಧನ್ಯವಾದಗಳು. ನನ್ನ ಪ್ರಯಾಣದುದ್ದಕ್ಕೂ ಅಪಾರ ಬೆಂಬಲ ನೀಡಿದ ಎಲ್ಲಾ ಪತ್ರಿಕಾ ಮತ್ತು ಮಾಧ್ಯಮದವರಿಗೆ ನಾನು ಪ್ರಾಮಾಣಿಕವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ನಿರ್ದೇಶಕ ಮತ್ತು ನಟನಾಗಿ ಪ್ರದೀಪ್‌ರ ಯಶೋಗಾಥೆ

ಕ್ಯಾಮೆರಾ ಮುಂದೆ ಬರುವುದಕ್ಕೂ ಮೊದಲು, ಪ್ರದೀಪ್ ಅವರು 'ವೇಲ್ಸ್ ಫಿಲ್ಮ್ ಇಂಟರ್ನ್ಯಾಷನಲ್' ಅಡಿಯಲ್ಲಿ ರವಿ ಮೋಹನ್ ಮತ್ತು ಕಾಜಲ್ ಅಗರ್ವಾಲ್ ನಟಿಸಿದ್ದ 'ಕೋಮಾಲಿ' (2019) ಚಿತ್ರದ ಮೂಲಕ ಯಶಸ್ವಿ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಈ ಚಿತ್ರದ ಆಳವಾದ ಭಾವನಾತ್ಮಕತೆ ಮತ್ತು ಹೊಸ ಕಥಾನಕವು ಪ್ರೇಕ್ಷಕರನ್ನು ತಲುಪಿ 50 ಕೋಟಿ ಕ್ಲಬ್ ಸೇರಿತ್ತು. ಇದು ಚೊಚ್ಚಲ ನಿರ್ದೇಶಕರಿಗೆ ಅಪರೂಪದ ಸಾಧನೆ. ಪ್ರದೀಪ್ ಅವರ ನಟನೆಯ ಚೊಚ್ಚಲ ಚಿತ್ರ 'ಲವ್ ಟುಡೇ' (2022), ಇದನ್ನು ಅವರೇ ಬರೆದು ನಿರ್ದೇಶಿಸಿದ್ದರು ಮತ್ತು AGS ಎಂಟರ್‌ಟೈನ್‌ಮೆಂಟ್ ನಿರ್ಮಿಸಿತ್ತು. ಈ ಚಿತ್ರವು ಸಾಂಸ್ಕೃತಿಕ ವಿದ್ಯಮಾನವಾಗಿ ಹೊರಹೊಮ್ಮಿ, 100 ಕೋಟಿಗೂ ಹೆಚ್ಚು ಗಳಿಸಿತು. ಇದು ದಕ್ಷಿಣ ಭಾರತದಲ್ಲಿ ಸೂಪರ್ ಡೂಪರ್ ಹಿಟ್ ಆದ ಕಾರಣ, ಇದರ ಸಾರ್ವತ್ರಿಕ ಮತ್ತು ಯುವ ಆಕರ್ಷಣೆಯಿಂದಾಗಿ ಅಡ್ವೈತ್ ಚಂದನ್ ನಿರ್ದೇಶನದಲ್ಲಿ ಖುಷಿ ಕಪೂರ್ ಮತ್ತು ಜುನೈದ್ ಖಾನ್ ನಟಿಸಿದ 'ಲವ್ಯಾಪಾ' ಎಂಬ ಹಿಂದಿ ರಿಮೇಕ್ ಕೂಡ ನಿರ್ಮಾಣವಾಯಿತು.

Pradeep Ranganathan
ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್ ಬಿಡುಗಡೆ ದಿನಾಂಕ ಫಿಕ್ಸ್; ಕೌಂಟ್‌ಡೌನ್ ಆರಂಭ

ನಂತರ ಬಂದ ಅಶ್ವತ್ ಮಾರಿಮುತ್ತು ನಿರ್ದೇಶನದ ಮತ್ತು AGS ಎಂಟರ್‌ಟೈನ್‌ಮೆಂಟ್ ನಿರ್ಮಾಣದ 'ಡ್ರ್ಯಾಗನ್' (2025) ಚಿತ್ರವು ಬಿಡುಗಡೆಯಾದ ಹತ್ತು ದಿನಗಳಲ್ಲಿಯೇ ವಿಶ್ವಾದ್ಯಂತ 100 ಕೋಟಿ ದಾಟುವ ಮೂಲಕ ಅವರ ಬಾಕ್ಸ್ ಆಫೀಸ್ ಯಶಸ್ಸನ್ನು ಮುಂದುವರೆಸಿತು. 'ಡ್ಯೂಡ್' ಚಿತ್ರದ ಮೂಲಕ ಪ್ರದೀಪ್ ಮತ್ತೊಮ್ಮೆ ತಮ್ಮ ಪ್ರಬಲ ಬಾಕ್ಸ್ ಆಫೀಸ್ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಮೊದಲ ದಿನ 22 ಕೋಟಿ ಗಳಿಸಿ, ಮೊದಲ ವಾರದಲ್ಲಿಯೇ ಜಾಗತಿಕವಾಗಿ 100 ಕೋಟಿ ಗಡಿ ದಾಟಿತು. ಈ ಚಿತ್ರವು ಯುವ ಶಕ್ತಿ, ಭಾವನಾತ್ಮಕ ಕಥೆ ಮತ್ತು ಸಾಮೂಹಿಕ ಆಕರ್ಷಣೆಯ ಮಿಶ್ರಣದಿಂದಾಗಿ ಎಲ್ಲ ವರ್ಗದ ಪ್ರೇಕ್ಷಕರನ್ನು ತಲುಪಿದೆ. ಚಲನಚಿತ್ರ ಕ್ಷೇತ್ರದ ತಜ್ಞರು ಪ್ರದೀಪ್ ರಂಗನಾಥನ್ ಅವರನ್ನು ದಕ್ಷಿಣ ಭಾರತದ ಚಿತ್ರರಂಗದ ಹೊಸ ಮರು-ಪರಿಣಾಮವೆಂದು ಪರಿಗಣಿಸುತ್ತಾರೆ. ಆಧುನಿಕ ಸಂವೇದನೆ ಮತ್ತು ಬೇರೂರಿರುವ ಕಥೆ ಹೇಳುವ ಅವರ ಸಾಮರ್ಥ್ಯವು ಹೊಸ ಪೀಳಿಗೆಯ 'ಮಾಸ್ ಹೀರೋ'ಗೆ ಹೊಸ ವ್ಯಾಖ್ಯಾನವನ್ನು ನೀಡಿದೆ.

ಈ ಸೃಜನಾತ್ಮಕ ಮತ್ತು ವಾಣಿಜ್ಯ ವಿಜಯಗಳ ನಂತರ, ಪ್ರೇಕ್ಷಕರು ಈಗ ವಿಘ್ನೇಶ್ ಶಿವನ್ ನಿರ್ದೇಶನದ ಮತ್ತು 7 ಸ್ಕ್ರೀನ್ ಸ್ಟುಡಿಯೋ ಮತ್ತು ರೌಡಿ ಪಿಕ್ಚರ್ಸ್ ನಿರ್ಮಾಣದ ಅವರ ಮುಂದಿನ ಯೋಜನೆ 'LIK' ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರ ಈಗಾಗಲೇ ಉದ್ಯಮದಲ್ಲಿ ದೊಡ್ಡ ಸದ್ದು ಮಾಡುತ್ತಿದೆ.

- ರಾಘವೇಂದ್ರ ಅಡಿಗ ಎಚ್ಚೆನ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com