
ಬೆಂಗಳೂರು: ʻಲಕ್ಷ್ಮೀ ನಿವಾಸʼ ಧಾರಾವಾಹಿಯ ನಿರ್ಮಾಣಕ್ಕಾಗಿ ಸೃಜನ್ ಲೋಕೇಶ್ ಅವರ ʻಲೋಕೇಶ್ ಪ್ರೊಡಕ್ಷನ್ಸ್ʼ ಸಂಸ್ಥೆಯಿಂದ ನಿರ್ಮಾಪಕ ಸತ್ಯ ಮತ್ತು ಅವರ ಪತ್ನಿ ನಿರ್ಮಲಾ 1 ಕೋಟಿ ರೂಪಾಯಿ ಸಾಲ ಪಡೆದು, ಹಿಂತಿರುಗಿಸದೆ ವಂಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸೃಜನ್ ಲೋಕೇಶ್ ಮ್ಯಾನೇಜರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʻಲಕ್ಷ್ಮೀ ನಿವಾಸʼ ಧಾರಾವಾಹಿಯ ನಿರ್ಮಾಣಕ್ಕಾಗಿ ಸೃಜನ್ ಲೋಕೇಶ್ ಅವರ ಲೋಕೇಶ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಿರ್ಮಾಪಕ ಸತ್ಯ ಮತ್ತು ಅವರ ಪತ್ನಿ ನಿರ್ಮಾಲಾ1 ಕೋಟಿ ರೂಪಾಯಿ ಹಣವನ್ನು ಸಾಲವಾಗಿ ಪಡೆದಿದ್ದರು.
2023ರ ನವೆಂಬರ್‌ನಲ್ಲಿ ಒಪ್ಪಂದ ಮಾಡಿಕೊಂಡಿದ್ದ ಆರೋಪಿಗಳು, 2024ರ ಏಪ್ರಿಲ್ 1ರಿಂದ ಪ್ರತಿ ತಿಂಗಳು 5 ಲಕ್ಷ ರೂಪಾಯಿ ಕಂತುಗಳಲ್ಲಿ ಹಣವನ್ನ ವಾಪಾಸ್ ಕೊಡುವುದಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಆದರೆ ಇದುವರೆಗೂ ಯಾವುದೇ ಹಣ ಪಾವತಿಸದ ಹಿನ್ನೆಲೆ, MOUನಲ್ಲಿರುವ ಷರತ್ತು ಉಲ್ಲಂಘಿಸಿದ್ದಕ್ಕಾಗಿ ದೂರು ದಾಖಲಾಗಿದೆ.
ಸೃಜನ್ ಲೋಕೇಶ್ ಅವರ ಲೋಕೇಶ್ ಸಂಸ್ಥೆಯ ಜಿಪಿಎ ಹೋಲ್ಡರ್ ಅಗ್ನಿ ಯು ಸಾಗರ್ ಎಂಬುವವರು ಬೆಂಗಳೂರಿನ ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ನಿರ್ಮಾಪಕ ಸತ್ಯ ಮತ್ತು ಅವರ ಪತ್ನಿ ನಿರ್ಮಲಾ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಸಾಯಿ ನಿರ್ಮಲಾ ಪ್ರೊಡಕ್ಷನ್ಸ್ ಕಂಪನಿಯ ಹೆಸರಿನಲ್ಲಿ ನಡೆದ ಹಣಕಾಸಿನ ವಹಿವಾಟುಗಳು ತನಿಖೆಗೆ ಒಳಪಟ್ಟಿವೆ ಎಂದು ಹೇಳಲಾಗುತ್ತಿದೆ.
Advertisement