
ನವದೆಹಲಿ: ಬಾಹುಬಲಿ, ಅರುಧಂತಿ ಮುಂತಾದ ಹಿಟ್ ಸಿನಿಮಾ ನೀಡಿರುವ ಬಹುಭಾಷಾ ನಟಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣಗಳಿಂದ ದೂರವಿರಲು ನಿರ್ಧರಿಸಿದ್ದಾರೆ.
ಈ ಕುರಿತು ಇನ್ ಸ್ಟಾಗ್ರಾಮ್ ನಲ್ಲಿ ಕೈ ಬರಹದ ಚಿತ್ರವನ್ನು ಹಂಚಿಕೊಂಡಿರುವ ಅನುಷ್ಕಾ ಶೆಟ್ಟಿ, ಜಗತ್ತಿನೊಂದಿಗೆ ಬೆರೆಯಲು ಹಾಗೂ ಸ್ಕ್ರೋಲಿಂಗ್ ಗಿಂತ ಬೇರೆ ಕೆಲಸ ಮಾಡುವುದಕ್ಕಾಗಿ ಕೆಲ ಕಾಲ ಸಾಮಾಜಿಕ ಜಾಲತಾಣಗಳಿಂದ ದೂರು ಉಳಿಯುವುದಾಗಿ ಫೋಸ್ಟ್ ಮಾಡಿದ್ದಾರೆ.
ಇತ್ತೀಚಿಗೆ ಬಿಡುಗಡೆಯಾದ ಕ್ರಿಶ್ ಜಗಲಮರುಡು ನಿರ್ದೇಶನದ 'ಘಾಟಿ' ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಅಭಿನಯಿಸಿದ್ದರು. ಆದರೆ, ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿತ್ತು.
ಈ ಸಿನಿಮಾದ ಸೋಲಿನ ನಂತರ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ನೆಗೆಟಿವ್ ಕಾಮೆಂಟ್ ಗಳು ಬರುತ್ತಿದ್ದವು. ಹೀಗಾಗಿ ಅನುಷ್ಕಾ ಶೆಟ್ಟಿ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆಯೇ ಎಂಬ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
Advertisement