
ಇತ್ತೀಚೆಗೆ ನಟಿ ಸಾಯಿಪಲ್ಲವಿ ಬಿಕಿನಿ ಧರಿಸಿರುವ ಫೋಟೋ ವೈರಲ್ ಆಗುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿಗೆ ಟ್ರೋಲ್ ಮಾಡಲಾಗುತಿತ್ತು. ಸಾಯಿ ಪಲ್ಲವಿ ಅವರ ತಂಗಿ ಪೂಜಾ ಇತ್ತೀಚಿಗೆ ಬೀಚ್ ನಲ್ಲಿ ಕಳೆದ ಫೋಟೋಗಳನ್ನು ಹಂಚಿಕೊಂಡ ನಂತರ 'ಸ್ವೀಮ್ ಶೂಟ್ ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಟ್ರೋಲಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದರು.
ಆರಂಭದಲ್ಲಿ ಇದು ಅಸಲಿಯಾ, ಅಥವಾ ನಕಲಿಯಾ ಎಂಬ ಹುಡುಕಾಟದಲ್ಲಿದ್ದ ಫ್ಯಾನ್ಸ್ ಗೆ ಅದು ಎಐ ಫೋಟೋ ಅನ್ನೋದು ಬಳಿಕ ತಿಳಿದುಬಂತು. ಇದೀಗ ಇದೇ ವೈರಲ್ ಫೋಟೋ ವಿಚಾರಕ್ಕೆ ಸಾಯಿಪಲ್ಲವಿ ಪ್ರತಿಕ್ರಿಯೆ ನೀಡಿದ್ದಾರೆ.
ಸಾಯಿ ಪಲ್ಲವಿ ತಮ್ಮ ಕುಟುಂಬದವರ ಜೊತೆಯಲ್ಲಿ ಕಾಲ ಕಳೆಯುತ್ತಿರುವ ವಿಡಿಯೋವೊಂದನ್ನು ತಮ್ಮ ಇನ್ಸಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಎಐ ಫೋಟೋಗಳಲ್ಲ ಎಂದು ಹೇಳುವ ಮೂಲಕ ವೈರಲ್ ಮಾಡಿರೋ ಎಐ ಫೋಟೋ ವೈರಲ್ ಮಾಡಿದ್ದವರಿಗೆ ಟಾಂಗ್ ನೀಡಿದ್ದಾರೆ.
ಸಾಯಿಪಲ್ಲವಿ ಇದುವರೆಗೂ ಬಿಕಿನಿ, ಸ್ವೀಮ್ ಶೂಟ್ ನಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಕೆಲವರ ಅಸಮಾಧಾನಕ್ಕೆ ಕಾರಣವಾಗಿದ್ದರು. ಅಲ್ಲದೇ ಸಾಯಿಪಲ್ಲವಿ ರಾಮಾಯಣದಲ್ಲಿ ಸೀತೆ ಪಾತ್ರ ಮಾಡುತ್ತಿರುವ ಬಗ್ಗೆಯೂ ಅದೇ ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿ ಟ್ರೋಲ್ ಮಾಡಲಾಗಿತ್ತು.
ತಂತ್ರಜ್ಞಾನದ ದುರುಪಯೋಗಕ್ಕೆ ಬೇಸರಿಸಿಕೊಂಡ ಸಾಯಿಪಲ್ಲವಿ ಇದೀಗ ಏನನ್ನೂ ಹೇಳದೆ ಟ್ರಿಪ್ ನ ನಿಜವಾದ ಚಿತ್ರಣ ಹೇಗಿತ್ತು ಅನ್ನೋದನ್ನು ತಿಳಿಸಿದ್ದಾರೆ.
Advertisement