
ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12 ಅದ್ದೂರಿಯಾಗಿ ಶುರುವಾಗಿದೆ. ಸುದೀಪ್ ಅವರು ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದು, ಒಬ್ಬೊಬ್ಬರಾಗಿ ಸ್ಪರ್ಧಿಗಳು ವೇದಿಕೆ ಮೇಲೆ ಬಂದು, ಬಿಗ್‌ಬಾಸ್ ಮನೆ ಸೇರಿಕೊಳ್ಳುತ್ತಿದ್ದಾರೆ.
ಮೊದಲ ಸ್ಪರ್ಧಿಯಾಗಿ ಕಾಕ್ರೂಚ್ ಸುಧಿ ಅವರು ದೊಡ್ಮನೆ ಸೇರಿದ್ದಾರೆ. ಸುದೀಪ್ ಅವರೊಟ್ಟಿಗೆ ಕೆಲಸ ಮಾಡಿರಲಿಲ್ಲವಂತೆ, ಈಗ ಬಿಗ್‌ಬಾಸ್ ವೇದಿಕೆ ಮೇಲೆಯೇ ಅವರು ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ. ಎರಡನೇ ಸ್ಪರ್ಧಿಯಾಗಿ ‘ಕೊತ್ತಲವಾಡಿ’ ಸಿನಿಮಾದ ನಾಯಕಿ ಕಾವ್ಯಾ ಅವರ ಎಂಟ್ರಿ ಆಗಿದೆ. ಇವರು ಜಂಟಿಯಾಗಿ ಬಿಗ್‌ಬಾಸ್ ಮನೆ ಸೇರಲಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ಮಲ್ಲಮ್ಮ ಮೂರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಇವರು ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ.
ಇನ್ನೂ ನಾಲ್ಕನೇ ಸ್ಪರ್ಧಿಯಾಗಿ ಕಾಮಿಡಿ ಕಲಾವಿದ ಗಿಲ್ಲಿ ಮನೆಗೆ ಎಂಟ್ರಿ ನೀಡಿದ್ದಾರೆ.
ಐದನೇ ಸ್ಪರ್ಧಿಯಾಗಿ ನಿರೂಪಕಿ, ನಟಿ ಜಾನ್ಹವಿ ಎಂಟ್ರಿ ಕೊಟ್ಟಿದ್ದಾರೆ. ಹಲವು ಸುದ್ದಿವಾಹಿನಿಗಳಲ್ಲಿ ಆಂಕರಿಂಗ್ ಮಾಡುತ್ತಿದ್ದ ಇವರು ನನ್ನಮ್ಮ ಸೂಪರ್ ಸ್ಟಾರ್ ' ರಿಯಾಲಿಟಿ ಶೋನಲ್ಲಿ ರನ್ನರ್ ಆಫ್ ಆಗಿದ್ದ ಜಾನ್ಹವಿ, ನಮ್ಮಮ್ಮ ಸೂಪರ್ ಸ್ಟಾರ್, ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಭಾಗವಹಿಸಿದ್ದ ಇವರು, ಕರ್ನಾಟಕದ ಮನೆಮಾತಾಗಿದ್ದಾರೆ. ಬಿಗ್‌ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಅಭಿನಯದ ಅಧಿಪತ್ರ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.
ಆರನೇ ಸ್ಪರ್ಧಿಯಾಗಿ ಕಿರುತೆರೆ, ಹಿರಿತೆರೆ ಎರಡರಲ್ಲೂ ನಟಿಸಿರುವ ನಟ ಧನುಶ್ ಎಂಟ್ರಿ ನೀಡಿದ್ದಾರೆ. ಏಳನೇ ಸ್ಪರ್ಧಿಯಾಗಿ ಗಿಚ್ಚಿ-ಗಿಲಿಗಿಲಿ ಗೆದ್ದಿರುವ ಚಂದ್ರಪ್ರಭಾ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಶೋನಲ್ಲಿ ಮಾತ್ರವೇ ನಾನು ಡಬಲ್ ಮೀನಿಂಗ್, ನಿಜವಾಗಿ ನಾನು ಬಹಳ ಮೃದು ಸ್ವಭಾವದ ವ್ಯಕ್ತಿ ಎಂದಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 12ಕ್ಕೆ ಖ್ಯಾತ ನಟಿ ಮಂಜು ಭಾಷಿಣಿ ಅವರು ಎಂಟ್ರಿ ಕೊಟ್ಟಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ 'ಸಿಲ್ಲಿ ಲಲ್ಲಿ' ಧಾರವಾಹಿಯಲ್ಲಿ ಅಭಿನಯಿಸಿದ್ದ ಮಂಜು ಭಾಷಿಣಿ, ‘ಸಾಧನೆ’, ಈಗ ಪ್ರಸಾರ ಆಗುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಸೇರಿದಂತೆ ಹಲವಾರು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮನದ ಕಡಲು’ ಸಿನಿಮಾದ ನಾಯಕಿ ರಾಶಿಕಾ ಶೆಟ್ಟಿ ಇದೀಗ ಬಿಗ್‌ಬಾಸ್ ಮನೆಗೆ ಬಂದಿದ್ದಾರೆ. ರಾಶಿಕಾ ಶೆಟ್ಟಿಗೆ ಕೋಪ, ಪ್ರೀತಿ, ಅಳು ಎಲ್ಲವೂ ಹೆಚ್ಚಂತೆ. ಕಿರುತೆರೆ ನಟ ಅಭಿಷೇಖ್ ಹತ್ತನೇ ಸ್ಪರ್ಧಿಯಾಗಿ ಮನೆಗೆ ಪ್ರವೇಶಿಸಿದ್ದಾರೆ.
Advertisement