ತಮಿಳು ನಟ ವಿಜಯ್ ಜೊತೆಗೆ ಅಫೇರ್ ವದಂತಿ: ಪ್ರೀತಿ, ಶಾಂತಿ ಕುರಿತು ರಹಸ್ಯ ಪೋಸ್ಟ್‌ ಹಂಚಿಕೊಂಡ ನಟಿ ತ್ರಿಶಾ!

ಇತ್ತೀಚಿನ ತಿಂಗಳುಗಳಲ್ಲಿ, ವಿಜಯ್ ಮತ್ತು ತ್ರಿಶಾ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಸಾಕಷ್ಟು ವದಂತಿಗಳು ಕೇಳಿಬರುತ್ತಿವೆ. ಆದರೆ, ಇಬ್ಬರೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Trisha Krishnan
ತ್ರಿಶಾ ಕೃಷ್ಣನ್
Updated on

ನಟಿ ತ್ರಿಶಾ ಕೃಷ್ಣನ್ ಇತ್ತೀಚೆಗೆ ಶಾಂತಿ, ಸ್ವಾಭಿಮಾನ ಮತ್ತು ಪ್ರೀತಿಯ ಬಗ್ಗೆ ಉಲ್ಲೇಖದೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ನಟಿ ಚೆನ್ನೈನಲ್ಲಿ ನಟ ವಿಜಯ್ ಅವರೊಂದಿಗೆ ವಿವಾಹ ಆರತಕ್ಷತೆಯಲ್ಲಿ ಭಾಗವಹಿಸಿದ ನಂತರ, ತ್ರಿಶಾ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದರು.

ವಿಜಯ್ ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಅವರ ಮೇಲೆ ದಾಂಪತ್ಯ ದ್ರೋಹ ಸೇರಿದಂತೆ ಇತರ ಆರೋಪಗಳನ್ನು ಹೊರಿಸಿದ್ದಾರೆ ಎಂದು ವರದಿಯಾದ ಸ್ವಲ್ಪ ಸಮಯದ ನಂತರ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಂದಿನಿಂದ, ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹಗಳು ಮತ್ತು ಟೀಕೆಗಳು ಕೇಳಿಬರುತ್ತಿವೆ. ಹಲವಾರು ಬಳಕೆದಾರರು ವಿಜಯ್ ಮತ್ತು ತ್ರಿಶಾ ಅವರ ಸಂಬಂಧದ ಬಗ್ಗೆ ಕಮೆಂಟ್ ಮಾಡಿದ್ದಾರೆ.

ತ್ರಿಶಾ ಹಂಚಿಕೊಂಡ ಇತ್ತೀಚಿನ ವಿಡಿಯೋದಲ್ಲಿ ಮಹಿಳೆ, 'ನಾನು ನನ್ನ ಜೀವನದಲ್ಲಿ ಇನ್ನು ಮುಂದೆ ಯಾರೊಂದಿಗೂ ವಾದ ಮಾಡದ ಹಂತದಲ್ಲಿ ಇದ್ದೇನೆ. ಆನೆ ಹಾರಬಲ್ಲದು ಎಂದು ನೀವು ಹೇಳಿದರೆ, ನೀವು ಸಂಪೂರ್ಣವಾಗಿ ಸರಿ. ನಾನು ಒಪ್ಪುತ್ತೇನೆ ಎಂಬ ಕಾರಣಕ್ಕಾಗಿ ಅಲ್ಲ, ಆದರೆ, ನಿಮ್ಮ ಜೊತೆ ವಾದ ಮಾಡಿ ನಿಮ್ಮ ಮನವೊಲಿಸುವಷ್ಟು ಕಾಳಜಿ ನಾನು ವಹಿಸುವುದಿಲ್ಲ ಎಂಬ ಕಾರಣದಿಂದಾಗಿ. ನಾನು ಮುಖ್ಯವಾದದ್ದನ್ನು ಕಲಿತಿದ್ದೇನೆ - ಸರಿಯಾಗಿರುವುದಕ್ಕಿಂತ ಶಾಂತಿ ಹೆಚ್ಚು ಮೌಲ್ಯಯುತವಾಗಿದೆ. ವಿವರಿಸುವುದಕ್ಕಿಂತ ಮೌನವಾಗಿರುವುದೇ ಹೆಚ್ಚು ಅಗ್ಗವಾಗಿದೆ ಮತ್ತು ಪ್ರತಿಯೊಬ್ಬರೂ ನಿಮ್ಮ ಶಕ್ತಿಯನ್ನು ಖರ್ಚು ಮಾಡಲು ಅರ್ಹರಾಗಿರುವುದಿಲ್ಲ. ಕೆಲವು ವಾದಗಳು ತಪ್ಪು ತಿಳುವಳಿಕೆಗಳಲ್ಲ; ಅವು ನಿಮ್ಮನ್ನು ಬರಿದು ಮಾಡಿಕೊಳ್ಳಲು ಆಹ್ವಾನಗಳಾಗಿವೆ. ಆದ್ದರಿಂದ ನಾನು ನಿರಾಕರಿಸುತ್ತೇನೆ, ನಗುತ್ತೇನೆ ಮತ್ತು ನನ್ನ ಶಾಂತಿಯನ್ನು ಕಾಪಾಡಿಕೊಳ್ಳುತ್ತೇನೆ' ಎಂದಿದೆ.

ನಂತರ 'ಪ್ರೀತಿಯೇ ಎಲ್ಲವೂ ಅಲ್ಲ, ಆದರೆ ಪ್ರೀತಿ ಇಲ್ಲದೆ ಎಲ್ಲವೂ ಅರ್ಥಹೀನ' ಎಂದಿರುವ ಮತ್ತೊಂದು ಪೋಸ್ಟ್ ಹಂಚಿಕೊಂಡಿರುವ ತ್ರಿಶಾ, ಇದಕ್ಕೆ 'ಸತ್ಯ' ಎಂದು ಬರೆದಿದ್ದಾರೆ.

Trisha Krishnan
ತ್ರಿಶಾ ಕೃಷ್ಣನ್ ಜೊತೆ ಕಾಣಿಸಿಕೊಂಡ ವಿಜಯ್; ಅದಕ್ಕೂ ಕೆಲವೇ ಗಂಟೆಗಳ ಮೊದಲು ನಟನ ಬಾಡಿಗಾರ್ಡ್ ರಹಸ್ಯ ಪೋಸ್ಟ್!

ವಿಜಯ್ ಮತ್ತು ತ್ರಿಶಾ ಕಾಲಿವುಡ್‌ನ ಅತ್ಯಂತ ಜನಪ್ರಿಯ ಆನ್‌ಸ್ಕ್ರೀನ್ ಜೋಡಿಗಳಲ್ಲಿ ಒಬ್ಬರು. ಗಿಲ್ಲಿ ಚಿತ್ರದಲ್ಲಿ ಅವರ ಮೊದಲ ಕಮರ್ಷಿಯಲ್ ಯಶಸ್ವಿ ಸಹಯೋಗದಿಂದ ಹಿಡಿದು ತಿರುಪಾಚಿ, ಆಥಿ ಮತ್ತು ಕುರುವಿಯಂತಹ ಚಿತ್ರಗಳವರೆಗೆ, ಈ ಜೋಡಿ ಹಲವಾರು ಬಾಕ್ಸ್ ಆಫೀಸ್ ಹಿಟ್‌ಗಳಲ್ಲಿ ಒಟ್ಟಿಗೆ ನಟಿಸಿದೆ. ಸುಮಾರು 15 ವರ್ಷಗಳ ಅಂತರದ ನಂತರ, ಅವರು ಲೋಕೇಶ್ ಕನಕರಾಜ್ ನಿರ್ದೇಶನದ ಲಿಯೋ ಚಿತ್ರದಲ್ಲಿ ಮತ್ತೆ ಪರದೆ ಮೇಲೆ ಒಟ್ಟಿಗೆ ಕಾಣಿಸಿಕೊಂಡರು.

ಇತ್ತೀಚಿನ ತಿಂಗಳುಗಳಲ್ಲಿ, ವಿಜಯ್ ಮತ್ತು ತ್ರಿಶಾ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಸಾಕಷ್ಟು ವದಂತಿಗಳು ಕೇಳಿಬರುತ್ತಿವೆ. ಆದರೆ, ಇಬ್ಬರೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com