

ಇಂದಿನ ಸೋಷಿಯಲ್ ಮೀಡಿಯಾ, ಡಿಜಿಟಲ್ ಮೀಡಿಯಾ ಯುಗದಲ್ಲಿ ಗಾಸಿಪ್ ಗಳು, ವದಂತಿಗಳು ಬಹಳ ಬೇಗನೆ ಹರಡುತ್ತವೆ. ಸೆಲೆಬ್ರಿಟಿಗಳ ಜೀವನ ಬಗ್ಗೆಯಂತೂ ಕೇಳುವುದೇ ಬೇಡ. ಇಲ್ಲಸಲ್ಲದ ಸುದ್ದಿಗಳು ಹರಡುತ್ತವೆ.
ಸ್ಯಾಂಡಲ್ ವುಡ್ ನ ಜನಪ್ರಿಯ ಜೋಡಿ ಡಾ. ಶಿವರಾಜಕುಮಾರ್ ಮತ್ತು ಡಾ.ಸುಧಾರಾಣಿ ಆನಂದ್ ಚಿತ್ರದ ಮೂಲಕ ಜೊತೆಯಾಗಿ ಅದು ಸೂಪರ್ ಹಿಟ್ ಆಗಿ ನಂತರ ಆನಂದ ಜ್ಯೋತಿ ಮನ ಮೆಚ್ಚಿದ ಹುಡುಗಿ, ರಣರಂಗ, ಸಂಯುಕ್ತಾ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದರು, ಯಶಸ್ವಿ ಕೂಡ ಆಯ್ತ. ಚಂದನವನದ ಬೆಸ್ಟ್ ಜೋಡಿ ಎನಿಸಿಕೊಂಡರು.
ಇಬ್ಬರ ನಡುವೆ ಉತ್ತಮ ಸ್ನೇಹಬಾಂಧವ್ಯ ಕೂಡ ಇದೆ. ಹೀಗಿರುವಾಗ ಸೋಷಿಯಲ್ ಮೀಡಿಯಾದಲ್ಲಿ ಶಿವಣ್ಣನನ್ನು ಮದುವೆಯಾಗಬೇಕೆಂದು ಆಸೆ ಪಟ್ಟಿದ್ದರು ಸುಧಾರಾಣಿ ಎಂಬ ಶೀರ್ಷಿಕೆಯಡಿ ಕಪೋಲಕಲ್ಪಿತ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಆನಂದ್ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ನಟಿ ಸುಧಾರಾಣಿ ಅವರಿಗೆ ಶಿವರಾಜ್ ಕುವಾರ್ ಕಂಡರೆ ಭಯವಿತ್ತು. ನಂತರ ಅವರ ಮೇಲೆ ಪ್ರೀತಿ ಹುಟ್ಟಿತು, ಮದುವೆಯಾಗುವ ಆಸೆಯೂ ಇತ್ತು.
ಆದರೆ ಡಾ. ರಾಜ್‌ಕುಮಾರ್ ಅವರ ಮಗ ಎಂಬ ಕಾರಣದಿಂದ ಅವರು ಇದನ್ನು ಯಾರಿಗೂ ಹೇಳದೆ ಸುಮ್ಮನಾಗಿದ್ದರು. ಈ ವಿಷಯವನ್ನು ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ ಎಂದು ಕೂಡ ಉಲ್ಲೇಖ ಮಾಡಲಾಗಿದೆ. ಆದರೆ ಸುಧಾರಾಣಿ ಯಾವ ಸಂದರ್ಶನದಲ್ಲಿಯೂ ಈ ಮಾತನ್ನು ಹೇಳಿಲ್ಲ.
ಕೆರಳಿ ಕೆಂಡವಾದ ಸುಧಾರಾಣಿ
ಪೇಜ್ ವ್ಯೂವ್ಸ್ ಗೋಸ್ಕರ ಕ್ತಿಯೊಬ್ಬ ಮಾಡಿದ ಈ ಅಸಹ್ಯಕರ ಅಪಪ್ರಚಾರವನ್ನು ಕಂಡು ಸದ್ಯ ಸುಧಾರಾಣಿ ಸಿಡಿದೆದ್ದಿದ್ದು, ಸ್ವಲ್ಪನಾದ್ರೂ ನೈತಿಕತೆ ಇರಲಿ. ಕೇವಲ ವ್ಯೂವ್ಸ್‌ಗಾಗಿ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸೋದು ನಿಜಕ್ಕೂ ಬೇಸರದ ಸಂಗತಿ. ಇನ್ನಾದ್ರೂ ತಿದ್ದುಕೊಳ್ಳಿ - ಕಷ್ಟಪಟ್ಟು ಕೆಲಸ ಮಾಡಿ, ಪ್ರಾಮಾಣಿಕವಾಗಿರಿ ಮತ್ತು ಸರಿಯಾದ ದಾರಿಯಲ್ಲಿ ಯಶಸ್ಸು ಗಳಿಸಿ ಎಂದು ಬರೆದುಕೊಂಡಿದ್ಧಾರೆ.
ವಿಡಿಯೊ ಮಾಡಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಕೇಸ್ ದಾಖಲಿಸುವ ಎಚ್ಚರಿಕೆಯನ್ನೂ ಕೂಡ ನೀಡಿರುವ ಸುಧಾರಾಣಿ ಆಯ್ಕೊಂಡು ತಿನ್ನೋರೆಲ್ಲ ಕಂಟೆಂಟ್ ಕ್ರೀಯೇಟರ್ಸ್ ಆದರೆ ಹೀಗೆ ಆಗೋದು ಎಂದು ಹೇಳಿದ್ದಾರೆ.
Advertisement