ನಿರ್ದೇಶಕ ಅಟ್ಲೀ, ಪ್ರಿಯಾ ದಂಪತಿಗೆ ಹೆಣ್ಣು ಮಗು ಜನನ; ತಂಗಿ ಸಿಕ್ಕಿದ್ದಾಳೆ ಎಂದ ಮೀರ್!

ಅಟ್ಲೀ ಇದೀಗ ತಮ್ಮ ಮುಂದಿನ 'ರಾಕಾ' ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ನಟಿ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Atlee, Priya Atlee blessed with a baby girl!
ಅಟ್ಲೀ-ಪ್ರಿಯಾ ಅಟ್ಲೀ
Updated on

ಚೆನ್ನೈ: ಖ್ಯಾತ ನಿರ್ದೇಶಕ ಅಟ್ಲೀ ಮತ್ತು ಅವರ ಪತ್ನಿ ಪ್ರಿಯಾ ಅಟ್ಲೀ ದಂಪತಿ ತಮಗೆ ಹೆಣ್ಣು ಮಗು ಜನಿಸಿರುವುದಾಗಿ ಸೋಮವಾರ ಘೋಷಿಸಿದ್ದಾರೆ. ದಂಪತಿಗೆ ಈಗಾಗಲೇ ಮೀರ್ ಎಂಬ ಮಗನಿದ್ದಾನೆ.

ಈ ಕುರಿತು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಟ್ಲೀ, 'ಆಶೀರ್ವಾದಗೊಂಡಂತೆ ಭಾಸವಾಗುತ್ತಿದೆ' ಎಂದಿದ್ದು, ಅವರ ಮಗ ಮೀರ್‌ನ ರೇಖಾಚಿತ್ರವನ್ನು ಹೊಂದಿರುವ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ 'ಹೇ! ನನಗೆ ತಂಗಿ ಸಿಕ್ಕಿದ್ದಾಳೆ!'. ಪ್ರಿಯಾ ಮತ್ತು ಅಟ್ಲೀಯಾಗ ನಮಗೆ ಹೆಣ್ಣು ಮಗು ಜನಿಸಿದೆ. ಏಪ್ರಿಲ್ 20, 2026' ಎಂದು ಬರೆಯಲಾಗಿದೆ.

ಕೆಲಸದ ವಿಚಾರಕ್ಕೆ ಬಂದರೆ, ಅಟ್ಲೀ ಇದೀಗ ತಮ್ಮ ಮುಂದಿನ 'ರಾಕಾ' ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ನಟಿ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇತ್ತೀಚೆಗೆ ಅಲ್ಲು ಅರ್ಜುನ್ ಅವರ 44ನೇ ಹುಟ್ಟುಹಬ್ಬದಂದು, ಚಿತ್ರತಂಡ ನಟನ ಫಸ್ಟ್ ಲುಕ್ ಪೋಸ್ಟರ್‌ ರಿಲೀಸ್ ಮಾಡಿತ್ತು.

ಈ ಚಿತ್ರವನ್ನು ನಿರ್ಮಿಸುತ್ತಿರುವ ಸನ್ ಪಿಕ್ಚರ್ಸ್, ಕಳೆದ ವರ್ಷ ಈ ಯೋಜನೆಯನ್ನು ಔಪಚಾರಿಕವಾಗಿ ಘೋಷಿಸುವಾಗ, ಈ ಯೋಜನೆಯಲ್ಲಿ ವಿಶ್ವದರ್ಜೆಯ ತಜ್ಞರು ಕೆಲಸ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com