'ವಾರಣಾಸಿ': ಮಹೇಶ್ ಬಾಬು 'ಫಸ್ಟ್ ಲುಕ್' ಪೋಸ್ಟರ್ ಅನಾವರಣ!

ಭಾನುವಾರ 'ಆರ್‌ಆರ್‌ಆರ್' (RRR) ಖ್ಯಾತಿಯ ನಿರ್ದೇಶಕರಾದ ಎಸ್.ಎಸ್. ರಾಜಮೌಳಿ, ತಮ್ಮ 'ಎಕ್ಸ್' (X) ಖಾತೆಯಲ್ಲಿ ಈ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮಹೇಶ್ ಬಾಬು ಅರಣ್ಯ ಹಿನ್ನೆಲೆಯಲ್ಲಿ ಬಿದಿರಿನ ತೆಪ್ಪವೊಂದರ ಮೇಲೆ ಮಲಗಿರುವಂತೆ ಕಾಣುತ್ತಾರೆ
 Mahesh Babu
ಮಹೇಶ್ ಬಾಬು
Updated on

'ವಾರಣಾಸಿ' ಚಿತ್ರದಲ್ಲಿ ಮಹೇಶ್ ಬಾಬು ಅವರ 'ಫಸ್ಟ್ ಲುಕ್' ಪೋಸ್ಟರ್ ನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಸಿನಿಮಾದಲ್ಲಿ ಮಹೇಶ್ ಬಾಬು 'ರುದ್ರ'ನ ಪಾತ್ರ ಮಾಡ್ತಿದ್ದಾರೆ. ಎಸ್.ಎಸ್. ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ಮಹೇಶ್ ಬಾಬು ಅವರೊಂದಿಗೆ ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಕೂಡ ನಟಿಸಿದ್ದಾರೆ.

ಭಾನುವಾರ 'ಆರ್‌ಆರ್‌ಆರ್' (RRR) ಖ್ಯಾತಿಯ ನಿರ್ದೇಶಕರಾದ ಎಸ್.ಎಸ್. ರಾಜಮೌಳಿ, ತಮ್ಮ 'ಎಕ್ಸ್' (X) ಖಾತೆಯಲ್ಲಿ ಈ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮಹೇಶ್ ಬಾಬು ಅರಣ್ಯ ಹಿನ್ನೆಲೆಯಲ್ಲಿ ಬಿದಿರಿನ ತೆಪ್ಪವೊಂದರ ಮೇಲೆ ಮಲಗಿರುವಂತೆ ಕಾಣುತ್ತಾರೆ. ನಂತರದ ಪೋಸ್ಟ್‌ನಲ್ಲಿ ಆಫ್ರಿಕಾದ ಹಿನ್ನೆಲೆಯಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ವಾರಣಾಸಿ ಚಿತ್ರದಲ್ಲಿನ 'ರುದ್ರ'ನಿಗೆ ಉಗ್ರ ರೂಪವೊಂದೇ ಅಲ್ಲ, ಇನ್ನೂ ಹಲವು ಆಯಾಮಗಳಿವೆ ಎಂದು ಶೀರ್ಷಿಕೆಯಲ್ಲಿ ಅವರು ಬರೆದಿದ್ದಾರೆ. ರಾಜಮೌಳಿಯ ಹಿಂದಿನ ಚಿತ್ರ 'ಆರ್‌ಆರ್‌ಆರ್'ಗಾಗಿ ಆಸ್ಕರ್ ಪ್ರಶಸ್ತಿ ಗೆದ್ದಿದ್ದ ಎಂ.ಎಂ. ಕೀರವಾಣಿ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದನ್ನು 'ಶ್ರೀ ದುರ್ಗಾ ಆರ್ಟ್ಸ್' ಮತ್ತು 'ಶೋಯಿಂಗ್ ಬಿಸಿನೆಸ್' ಸಂಸ್ಥೆಗಳು ನಿರ್ಮಿಸುತ್ತಿವೆ.

2027ರ ಏಪ್ರಿಲ್ 7ರಂದು ಬಿಡುಗಡೆಯಾಗಲಿರುವ ಈ ಚಿತ್ರವು, ಜಗತ್ತನ್ನೇ ರಕ್ಷಿಸಬಲ್ಲ ಪ್ರಾಚೀನ ರಹಸ್ಯವೊಂದನ್ನು ಹೊಂದಿರುವ ಕ್ರಿ.ಶ. 512ರ ಸಮುದಾಯವೊಂದರ ಸುತ್ತ ಹೆಣೆಯಲಾದ ಕಥೆಯನ್ನು ಹೊಂದಿದೆ.

 Mahesh Babu
ಎಸ್.ಎಸ್ ರಾಜಮೌಳಿಯ 'ವಾರಣಾಸಿ': ಪ್ರಿಯಾಂಕಾ ಚೋಪ್ರಾ ಫಸ್ಟ್ ಲುಕ್ ಅನಾವರಣ!

ಕ್ರಿ.ಶ. 2027ರಲ್ಲಿ 'ಶಾಂಭವಿ' ಎಂಬ ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಿ ಭೀಕರ ವಿನಾಶಕಾರಿ ಘಟನೆಯನ್ನು ಉಂಟುಮಾಡುತ್ತದೆ. ಈ ನಡುವೆ, ಆ ಪ್ರಾಚೀನ ವಸ್ತುವನ್ನು (artifact) ವಶಪಡಿಸಿಕೊಳ್ಳಲು ಪ್ರಯತ್ನಿಸುವಾಗ ಕುಂಭ (ಪೃಥ್ವಿರಾಜ್) ಎಂಬ ದುರಾಸೆಯ ವಿಜ್ಞಾನಿಯೊಬ್ಬ ಪಾರ್ಶ್ವವಾಯುವಿಗೆ ಒಳಗಾಗುವುದರ ಸುತ್ತ ಕಥೆ ಸಾಗುತ್ತದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com