

ದೇಶಾದ್ಯಂತ ಸಿನಿ ಅಭಿಮಾನಿಗಳ ಜಗತ್ತಿನಲ್ಲಿ ಟಾಕ್ಸಿಕ್ ಟ್ರೈಲರ್ ಬಗ್ಗೆ ಚರ್ಚೆ ಜೋರಾಗಿದೆ. ಬೆಂಗಳೂರಿನಲ್ಲಿ ಶನಿವಾರ ಸಂಜೆ ಬಿಡುಗಡೆಯಾದ, ಯಶ್ ನಟನೆಯ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್ ಟ್ರೈಲರ್ ಬಿಡುಗಡೆಯಾಗಿದೆ.
ಟ್ರೈಲರ್ ನಲ್ಲಿ ಯಶ್ ಜೊತೆ ನಟಿಸಿರುವ ನಯನತಾರ, ಕೀರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಅನುಕ್ರಮವಾಗಿ ಗಂಗಾ, ನಾದಿಯಾ, ಎಲಿಜಬೆತ್, ಮೆಲಿಸ್ಸಾ ಹಾಗೂ ರೆಬೆಕಾ ಎಂಬ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರತಿ ಪಾತ್ರವೂ ಬದಲಾಗುವ ಮತ್ತು ಊಹಿಸಲಾಗದ ಗೆರೆಯನ್ನು ಹೊಂದಿದ್ದು ಸಿನಿಮಾಗೆ ಮೆರುಗು ಹೆಚ್ಚಿಸಿದೆ.
ಕಥೆ ಬರ್ಬರ ಕ್ರಿಮಿನಲ್ ಅಂಡರ್ ವರ್ಲ್ಡ್ ಪ್ರಪಂಚವನ್ನು ತೆರೆದಿಡುವಂತಿದೆ. ಸಿನಿಮಾದ ಕಥಾ ಹಂದರ ಅಧಿಕಾರ, ರೊಮ್ಯಾನ್ಸ್, ವಂಚನೆಯ ಸುತ್ತ ಹೆಣೆದಿರುವಂತೆ ತೋರುತ್ತಿದ್ದು, ಯಶ್ ಹಿರೋಯಿನ್ ಪಾತ್ರದ ಎದುರು ಬೆತ್ತಲಾಗಿ ನಿಲ್ಲುವ ದೃಶ್ಯಗಳು ಅಭಿಮಾನಿಗಳನ್ನು ದಂಗಾಗಿಸಿದ್ದು, ಈ ಸೀನ್ ವೈರಲ್ ಆಗತೊಡಗಿದೆ.
ನೆಟ್ಟಿಗರು ಟ್ರೈಲರ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಭರ್ಜರಿ ಸಿನಿಮಾ, ಇದು ಸಾಮಾನ್ಯದ್ದಲ್ಲ ಎಂದು ಹೇಳುತ್ತಿದ್ದಾರೆ.
ಮತ್ತೊಬ್ಬ ನೆಟ್ಟಿಗರು ಟ್ವೀಟ್ ಮಾಡಿದ್ದು, ಡಿಯರ್ ಬಾಕ್ಸ್ ಆಫೀಸ್ your dad is coming ಎಂದು ಹೇಳಿದ್ದರೆ, ಇನ್ನೂ ಕೆಲವರು ಈ ಸಿನಿಮಾ ಬಾಕ್ಸ್ ಆಫೀಸ್ ರೆಕಾರ್ಡ್ ಗಳನ್ನು ಮುರಿಯುತ್ತದೆ ಬಾಕ್ಸ್ ಆಫೀಸ್ ನಲ್ಲಿ 3000 ಕೋಟಿ ಕಲೆಕ್ಷನ್ ಫಿಕ್ಸ್ ಎಂದು ಹೇಳಿದ್ದಾರೆ. ಗಡ್ಡ ಮತ್ತು ಉದ್ದ ಕೂದಲಿನ ಲುಕ್ ನಲ್ಲಿ ಯಶ್ ರಾಕ್ ಸ್ಟಾರ್ ರೀತಿ ಕಾಣಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಆ.26 ರಂದು ಸಿನಿಮಾ ಬಿಡುಗಡೆಯಾಗಲಿದೆ.