ಈ ವಯಸ್ಸಲ್ಲಿ ಡ್ರಾಮಾ ಎಲ್ಲ ಬೇಕಾ? ಮುಜುಗರದ ಸಂಗತಿ: ವಿಜಯ್ ಪತ್ನಿ ಸಂಗೀತಾ, ಉದಯನಿಧಿ ವಿವಾದದ ಬಳಿಕ ತ್ರಿಶಾ ಪೋಸ್ಟ್​ ವೈರಲ್​!

ತ್ರಿಶಾ ಹಂಚಿಕೊಂಡಿರುವ ಪೋಸ್ಟ್​ಗಳು ಈಗ ಸಾಮಾದಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದ್ದು, ಒಂದು ಪೋಸ್ಟ್‌ನಲ್ಲಿ, "ಈ ವಯಸ್ಸಿನಲ್ಲಿ ನಾಟಕ ಮುಜುಗರದ ಸಂಗತಿ.
Trisha Krishnan Drops Cryptic Note Days After Udhayanidhi Stalin's Controversial Remark
ಉದಯನಿಧಿ ಸ್ಟಾಲಿನ್- ಸಂಗೀತಾ - ತ್ರಿಶಾ
Updated on

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್​ ವಿಜಯ್ ಅವರ​ ಪತ್ನಿ ಸಂಗೀತಾ ಅವರು ವಿಚ್ಛೇದನ ಅರ್ಜಿ ವಾಪಸ್ ಪಡೆದ ನಂತರ ಮತ್ತು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರ ಬಂಧನದ ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೆಲವು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.

ತ್ರಿಶಾ ಅವರು ತಮ್ಮ ಅಜ್ಜಿಯ 98ನೇ ಹುಟ್ಟುಹಬ್ಬದ ಆಚರಣೆಯ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ ಅವುಗಳು ಕೇವಲ ಪೋಸ್ಟ್‌ಗಳಾಗಿಲ್ಲ. ಕೆಲವು ನಿಗೂಢ ಸಂದೇಶಗಳನ್ನು ನೀಡಿದ್ದಾರೆ.

ತ್ರಿಶಾ ಹಂಚಿಕೊಂಡಿರುವ ಪೋಸ್ಟ್​ಗಳು ಈಗ ಸಾಮಾದಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದ್ದು, ಒಂದು ಪೋಸ್ಟ್‌ನಲ್ಲಿ, "ಈ ವಯಸ್ಸಿನಲ್ಲಿ ನಾಟಕ ಮುಜುಗರದ ಸಂಗತಿ. ಹೋಗಿ ಸ್ವಲ್ಪ ಹಣ ಸಂಪಾದಿಸಿ ಮತ್ತು ಶಾಂತಿಯನ್ನು ಕಂಡುಕೊಳ್ಳಿ" ಎಂದು ಬರೆಯಲಾಗಿದೆ. ಅದರೊಂದಿಗೆ ಹುಬ್ಬೇರಿಸುವ ಎಮೋಜಿಯನ್ನು ನಟಿ ಹಾಕಿದ್ದಾರೆ.

Trisha Krishnan Drops Cryptic Note Days After Udhayanidhi Stalin's Controversial Remark
'ವಿಜಯ್ 'ಆಪ್ತೆ' ತ್ರಿಶಾರನ್ನು DCM ಆಗಿ ನೇಮಿಸುವುದು ಯಾವಾಗ?': ತಮಿಳುನಾಡು ಎದುರು ನೋಡುತ್ತಿದೆ ಎಂದ AIADMK ನಾಯಕ
ತ್ರಿಶಾ ಪೋಸ್ಟ್
ತ್ರಿಶಾ ಪೋಸ್ಟ್

ಎರಡನೇ ಸ್ಲೈಡ್‌ನಲ್ಲಿ ""ಮಾಡಿದ್ದುಣ್ಣೋ ಮಾರಾಯ" ಎಂಬಂತೆ ನೀವು ಮಾಡಿದ್ದು ನಿಮಗೆ ಹಿಂತಿರುಗುತ್ತದೆ. ಒಳ್ಳೆಯದನ್ನು ಮಾಡಿ, ಒಳ್ಳೆಯವರಾಗಿರಿ" ಎಂದು ನಟಿ ಬರೆದಿದ್ದಾರೆ. ಹಾಗೆಯೇ ತ್ರಿಶಾ ತಾಯಿ ಉಮಾ ಕೃಷ್ಣನ್, "ಲಾಸ್ಟ್ ಒನ್ ಬೆಸ್ಟ್ ಒನ್" ಎಂದು ಬರೆದುಕೊಂಡು, ವ್ಯಾಯಾಮ ಮಾಡಿ, ಸ್ಕಿನ್ ಕೇರ್ ಮಾಡಿ, ನೀರು ಕುಡಿಯಿರಿ, ಹಣ ಸಂಪಾದಿಸಿ, ಜನರ ಜೊತೆ ಒಳ್ಳೆಯವರಾಗಿರಿ, ನಿಮ್ಮಷ್ಟಕ್ಕೆ ನೀವಿರಿ ಎಂಬ ಪೋಸ್ಟ್ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ತ್ರಿಶಾ ಅವರು ತಮ್ಮ ಸ್ಟೋರಿಯಲ್ಲಿ ಹಂಚಿಕೊಂಡಿರುವ ಮಾತುಗಳು ಯಾರನ್ನು ಉದ್ದೇಶಿಸಿವೆ? ಎಂಬ ಬಗ್ಗೆ ನೆಟ್ಟಿಗರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ತ್ರಿಶಾ ಯಾರ ಹೆಸರನ್ನೂ ನೇರವಾಗಿ ಉಲ್ಲೇಖಿಸದಿದ್ದರೂ, ಈ ಪೋಸ್ಟ್‌ಗಳು ವಿಜಯ್ ಅವರ ಪತ್ನಿ ಸಂಗೀತಾ ಮತ್ತು ಉದಯನಿಧಿಯನ್ನೇ ಗುರಿಯಾಗಿಸಿ ಬರೆಯಲಾಗಿದೆ ಎನ್ನುವುದು ನೆಟ್ಟಿಗರ ಲೆಕ್ಕಾಚಾರವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com