'ಮಂಗಳಗೌರಿ ಮದುವೆ' ಸೀರಿಯಲ್ ನ ಖ್ಯಾತ ನಟ, ಶಂಕರ್ ನಾಗ್ ಮೆಚ್ಚಿದ್ದ ಕಲಾವಿದ ವಿಜಯ್ ಇನ್ನಿಲ್ಲ

ಮಂಗಳಗೌರಿ ಮದುವೆ ಸೀರಿಯಲ್ ನಲ್ಲಿ ಗಗನ್ ಚಿನ್ನಪ್ಪ ಪೊಲೀಸ್ ಪಾತ್ರದ ಜೊತೆ ಕಾನ್ಸ್ಟೇಬಲ್ ಪಾತ್ರದಲ್ಲಿ ನಟಿಸಿದ್ದರು. ಜಿತೂರಿ ನಟಿಸಿ ಖ್ಯಾತಿ ಪಡೆದಿದ್ದರು.
'ಮಂಗಳಗೌರಿ ಮದುವೆ' ಸೀರಿಯಲ್ ನ ಖ್ಯಾತ ನಟ, ಶಂಕರ್ ನಾಗ್ ಮೆಚ್ಚಿದ್ದ ಕಲಾವಿದ ವಿಜಯ್ ಇನ್ನಿಲ್ಲ
Updated on

ಬೆಂಗಳೂರು: ಖ್ಯಾತ ಕಿರುತೆರೆ ನಟ ಹಾಗೂ ರಂಗಭೂಮಿ ಕಲಾವಿದ ವಿಜಯ್ ಕುಮಾರ್ ಜಿತೂರಿ (Vijay kumar jithoori) ನಿಧನರಾಗಿದ್ದಾರೆ.

ಮಂಗಳಗೌರಿ ಮದುವೆ ಸೀರಿಯಲ್ ನಲ್ಲಿ ಗಗನ್ ಚಿನ್ನಪ್ಪ ಪೊಲೀಸ್ ಪಾತ್ರದ ಜೊತೆ ಕಾನ್ಸ್ಟೇಬಲ್ ಪಾತ್ರದಲ್ಲಿ ನಟಿಸಿದ್ದರು. ಜಿತೂರಿ ನಟಿಸಿ ಖ್ಯಾತಿ ಪಡೆದಿದ್ದರು. 40 ವರ್ಷಗಳಿಗೂ ಹೆಚ್ಚು ಕಾಲ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಅವರು ಸುಪ್ರಸಿದ್ಧ ರಂಗಗೀತೆಗಳ ಗಾಯನದಲ್ಲಿ ತೊಡಗಿಸಿಕೊಂಡಿದ್ದರು.

ಸೀರಿಯಲ್ ಅಭಿಮಾನಿಗಳು, ಕಲಾವಿದರು ವಿಜಯ್ ಜಿತೂರಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಮಂಟೆಸ್ವಾಮಿ ಕಥಾ ಪ್ರಸಂಗದ ಹಾಡುಗಾರಿಕೆ ನೋಡಿ ಸ್ವತಃ ಶಂಕರ್ ನಾಗ್ ವಿಜಯ್ ಕುಮಾರ್ ಜಿತೂರಿ ಅವರನ್ನು ನಾಟಕಗಳಿಗೆ ಆಯ್ಕೆ ಮಾಡಿಕೊಂಡಿದ್ದರು ಮಂಟೆಸ್ವಾಮಿ ಕಥಾ ಪ್ರಸಂಗದ 550ಕ್ಕೂ ಹೆಚ್ಚು ಪ್ರದರ್ಶನಗಳು ಕಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com