100-200 ಕೋಟಿ ನಷ್ಟದ ಭಯ ನನಗಿಲ್ಲ; Toxic ಪೋಸ್ಟ್‌ಪೋನ್ ಬಗ್ಗೆ ಯಶ್ ನೀಡಿದ ಖಡಕ್ ಉತ್ತರ

ಜೇಬಿನಲ್ಲಿ ಏನೂ ಇಲ್ಲದೆ ಬಂದ ನಾನು, ಈಗಿರುವುದೆಲ್ಲ ಬೋನಸ್; ಟಾಕ್ಸಿಕ್ ಬಿಡುಗಡೆ ಮುಂದೂಡಿಕೆಗೆ ಧುರಂಧರ್ 2 ಕಾರಣವಲ್ಲ, ಬಾಕ್ಸ್ ಆಫೀಸ್ ಮುಖಾಮುಖಿ, ನಷ್ಟ ಭಯ, ಟಾಕ್ಸಿಕ್ ನಿರ್ಧಾರ ಕುರಿತು ಯಶ್ ನೇರ ಮಾತು.
Rocking Star Yash
ರಾಕಿಂಗ್ ಸ್ಟಾರ್ ಯಶ್
Updated on

ನವದೆಹಲಿ: ರಾಕಿಂಗ್ ಸ್ಟಾರ್ ಯಶ್ ಅವರು ನಟಿಸಿ, ಸಹ ನಿರ್ಮಾಣ ಮಾಡುತ್ತಿರುವ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಸಿನಿಮಾ ಇದೇ 25 ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲು ಸಿದ್ಧವಾಗಿದೆ. ಆದ್ರೆ, ಚಿತ್ರ ಈ ಮೊದಲು ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಬೇಕಿತ್ತು. ಇನ್ನು, ಅದೇ ಟೈಮ್‌ನಲ್ಲಿ ರಣವೀರ್ ಸಿಂಗ್ ನಟನೆಯ ಧುರಂಧರ್ 2 ಬಿಡುಗಡೆ ಆಗಿತ್ತು. ಆದ್ರೆ, ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯ ಕಾರಣದಿಂದಾಗಿ ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆ ಆಗಿತ್ತು. ಆದ್ರೆ, ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಇದನ್ನೇ, "ಯಶ್ ಅವರು ಧುರಂಧರ್ ಚಿತ್ರದ ಭರ್ಜರಿ ಹೈಪ್ ನೋಡಿ ಹೆದರಿ ತಮ್ಮ ಸಿನಿಮಾವನ್ನು ಮುಂದೂಡಿದ್ದಾರೆ ಎಂದು ಚರ್ಚಿಸುತ್ತಿದ್ದರು. ಅದಕ್ಕೆ ಈಗ ಖಡಕ್ ಉತ್ತರ ನೀಡಿರುವ ಯಶ್, 100-200 ಕೋಟಿ ರೂಪಾಯಿ ನಷ್ಟದ ಭಯ ನನಗಿಲ್ಲ ಎಂದು ತಿಳಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

100-200 ಕೋಟಿ ರೂ. ನಷ್ಟದ ಭಯ ನನಗಿಲ್ಲ!

ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ಸಿನಿಮಾ ಮುಖಾಮುಖಿಯಿಂದಾಗಿ 100 ರಿಂದ 200 ಕೋಟಿ ರೂಪಾಯಿ ಕಮ್ಮಿ ಬಂದರೆ ತಮಗೆ ಯಾವುದೇ ನಷ್ಟವಿಲ್ಲ. "ಆರಂಭದಲ್ಲಿ ನಾನು ಜೇಬಿನಲ್ಲಿ ಏನೂ ಇಲ್ಲದೆ ಬಂದವನು. ಈಗ ಇರುವುದೆಲ್ಲವೂ ನಮಗೆ ಬೋನಸ್ ಅಷ್ಟೇ" ಎಂದು ಹೇಳಿದ್ದಾರೆ.

Rocking Star Yash
ಅಮ್ಮ, ಅಪ್ಪ, ಹೆಂಡತಿಯಲ್ಲ: ಇಡೀ ಜಗತ್ತಿನಲ್ಲೇ ಯಶ್‌ಗೆ ಮೋಸ್ಟ್ ಫೇವರಿಟ್ ವ್ಯಕ್ತಿ ಯಾರು ಗೊತ್ತೆ?

ಹಾಗಾದ್ರೆ, ಬಿಡುಗಡೆ ಮುಂದೂಡಿಕೆಗೆ ಅಸಲಿ ಕಾರಣವೇನು?

ಮುಂದುವರೆದು ಮಾತನಾಡಿದ ಯಶ್, "ನನ್ನ ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರದ ಕೆಲಸಗಳು ಸಂಪೂರ್ಣವಾಗಿ ಮುಗಿದಿರಲಿಲ್ಲ. ಕೇವಲ ಬಾಕ್ಸ್ ಆಫೀಸ್ ಮುಖಾಮುಖಿಯಲ್ಲಿ ಗೆಲ್ಲಬೇಕು ಅಥವಾ ನನ್ನ ಇಮೇಜ್ ತೋರಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಅಪೂರ್ಣ ಚಿತ್ರವನ್ನು ರಿಲೀಸ್ ಮಾಡಿದ್ದರೆ ಅದು ನನ್ನ 'ಅಹಂಕಾರ' ಆಗುತ್ತಿತ್ತು" ಎಂದಿದ್ದಾರೆ. ಹಾಗಾಗಿಯೇ, ಸಿನಿಮಾ ಚೆನ್ನಾಗಿ ಮೂಡಿಬರಲು ಸಮಯ ಬೇಕು ಅನಿಸಿದಾಗ ದಿನಾಂಕ ಬದಲಾಯಿಸಿದ್ದು ನನ್ನ ಸ್ವಾಭಿಮಾನ". ಯಾಕಂದ್ರೆ, ಜನರಿಗೆ ನೀಡಿದ ಭರವಸೆಯಂತೆ ಉತ್ತಮ ಸಿನಿಮಾ ನೀಡದಿದ್ದರೆ ಮಾತ್ರ ಹೆದರಿಕೆ ಕಾಡುತ್ತದೆ ಎಂದು ವಿವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com