Yash's 'Toxic: ಬಿಡುಗಡೆಯಾದ ನಾಲ್ಕನೇ ದಿನ ಧುರಂಧರ್' ದಾಖಲೆ ಉಡೀಸ್! ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?

ಹಿಂದಿ ಆವೃತ್ತಿಯಲ್ಲಿ ಅತಿ ಹೆಚ್ಚು ಕೊಡುಗೆ ನೀಡಿದ್ದು, 15.5 ಕೋಟಿ ರೂ.ಗಳನ್ನು ಗಳಿಸಿದೆ. ಇದು 12,822 ಪ್ರದರ್ಶನಗಳಲ್ಲಿ 23 ರಷ್ಟು ಪ್ರೇಕ್ಷಕರ ಹಾಜರಾತಿಯನ್ನು ದಾಖಲಿಸಿದೆ.
Yash's 'Toxic
ಟಾಕ್ಸಿಕ್ ನಲ್ಲಿ ಯಶ್
Updated on

ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ ಮೊದಲ ದಿನವೇ 101 ಕೋಟಿ ರೂ.ಗಳ ಗಳಿಕೆ ಕಂಡಿದ್ದ ಈ ಸಿನಿಮಾ, ಕೇವಲ ನಾಲ್ಕು ದಿನಗಳಲ್ಲಿ 190 ಕೋಟಿ ರೂ.ಗಳ ಗಡಿಯನ್ನು ದಾಟಿದೆ. ನಾಲ್ಕನೇ ದಿನದ ಗಳಿಕೆಯ ವಿಷಯದಲ್ಲಿ ರಣವೀರ್ ಸಿಂಗ್ ಅವರ 'ಧುರಂಧರ್' ಸಿನಿಮಾವನ್ನು ಹಿಂದಿಕ್ಕಿದೆ.

ಹಿಂದಿ ಆವೃತ್ತಿಯಲ್ಲಿ ಹೆಚ್ಚಿನ ಕಲೆಕ್ಷನ್: ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ಹಾಗೂ ಮನರಂಜನಾ ಸುದ್ದಿ ವೆಬ್‌ಸೈಟ್ 'ಸಕ್ನಿಲ್ಕ್' (Sacnilk) ಪ್ರಕಾರ, 'ಟಾಕ್ಸಿಕ್' ನಾಲ್ಕನೇ ದಿನದಂದು 24.50 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಅಂದು ಒಟ್ಟು 17,612 ಪ್ರದರ್ಶನಗಳನ್ನು ಕಂಡಿದ್ದು, ಸರಾಸರಿ 24.3 ರಷ್ಟು ಪ್ರೇಕ್ಷಕರ ಹಾಜರಾತಿಯನ್ನು (occupancy) ದಾಖಲಿಸಿದೆ. ಹಿಂದಿ ಆವೃತ್ತಿಯಲ್ಲಿ ಅತಿ ಹೆಚ್ಚು ಕೊಡುಗೆ ನೀಡಿದ್ದು, 15.5 ಕೋಟಿ ರೂ.ಗಳನ್ನು ಗಳಿಸಿದೆ. ಇದು 12,822 ಪ್ರದರ್ಶನಗಳಲ್ಲಿ 23 ರಷ್ಟು ಪ್ರೇಕ್ಷಕರ ಹಾಜರಾತಿಯನ್ನು ದಾಖಲಿಸಿದೆ.

ಕನ್ನಡ ಆವೃತ್ತಿಯಲ್ಲಿ ಗಳಿಸಿದ್ದು ಎಷ್ಟು ಕೋಟಿ? ಕನ್ನಡ ಆವೃತ್ತಿಯಲ್ಲಿ 1,341 ಪ್ರದರ್ಶನಗಳ ಮೂಲಕ 6.60 ಕೋಟಿ ರೂ. ಗಳಿಸಿದ್ದು, ಶೇ. 47 ರಷ್ಟು ಪ್ರೇಕ್ಷಕರ ಹಾಜರಾತಿಯನ್ನು ಕಂಡಿದೆ. ಮಲಯಾಳಂ ಆವೃತ್ತಿಯು 277 ಪ್ರದರ್ಶನಗಳಲ್ಲಿ ಶೇ.21 ರಷ್ಟು ಹಾಜರಾತಿಯೊಂದಿಗೆ 15 ಲಕ್ಷ ರೂ.ಗಳನ್ನು ಗಳಿಸಿದೆ.

ಇದೇ ವೇಳೆ ತಮಿಳು ಆವೃತ್ತಿಯು 1,500 ಪ್ರದರ್ಶನಗಳ ಮೂಲಕ ಶೇ. 17 ರಷ್ಟು ಹಾಜರಾತಿಯೊಂದಿಗೆ 75 ಲಕ್ಷ ರೂ.ಗಳನ್ನು ಸಂಗ್ರಹಿಸಿದೆ. ತೆಲುಗು ಆವೃತ್ತಿಯು 1,672 ಪ್ರದರ್ಶನಗಳಲ್ಲಿ ಶೇ. 23 ರಷ್ಟು ಹಾಜರಾತಿಯನ್ನು ದಾಖಲಿಸುವ ಮೂಲಕ 1.5 ಕೋಟಿ ರೂ.ಗಳ ಕೊಡುಗೆ ನೀಡಿದೆ. ನಾಲ್ಕನೇ ದಿನದ ಈ ಅಂಕಿಅಂಶಗಳು 'ಟಾಕ್ಸಿಕ್' ಚಿತ್ರಕ್ಕೆ ಮತ್ತೊಂದು ಬಾಕ್ಸ್ ಆಫೀಸ್ ಮೈಲಿಗಲ್ಲನ್ನು ತಂದುಕೊಟ್ಟಿದ್ದು, ಯಶ್ ಅಭಿನಯದ ಈ ಚಿತ್ರವು 'ಎ-ರೇಟೆಡ್' (A-rated) 'ಧುರಂಧರ್' ಚಿತ್ರಕ್ಕಿಂತ ಮುಂದಿದೆ.

'ಧುರಂಧರ್' (Dhurandhar) ಬಿಡುಗಡೆಯಾದ ನಾಲ್ಕನೇ ದಿನದಂದು 14,233 ಪ್ರದರ್ಶನಗಳು ಮತ್ತು ಶೇ. 30ರಷ್ಟು ಪ್ರೇಕ್ಷಕರ ಹಾಜರಾತಿಯೊಂದಿಗೆ 23.25 ಕೋಟಿ ರೂ. ಗಳಿಸಿತ್ತು. ಆದರೆ 'ಟಾಕ್ಸಿಕ್' (Toxic) ಸಿನಿಮಾ ನಾಲ್ಕನೇ ದಿನ 24.50 ಕೋಟಿ ರೂ. ಗಳಿಸುವ ಮೂಲಕ ಆ ಅಂಕಿಅಂಶವನ್ನು ಮೀರಿಸಿದೆ. ಈ ಸಿನಿಮಾ ಮೊದಲ ದಿನ 24,579 ಪ್ರದರ್ಶನಗಳು ಮತ್ತು ಶೇ. 56.1ರಷ್ಟು ಪ್ರೇಕ್ಷಕರ ಹಾಜರಾತಿಯೊಂದಿಗೆ 101.10 ಕೋಟಿ ರೂ. ಗಳಿಕೆಯೊಂದಿಗೆ ಆರಂಭಗೊಂಡಿತು.

ಎರಡನೇ ದಿನ, 'ಟಾಕ್ಸಿಕ್' 22,629 ಪ್ರದರ್ಶನಗಳು ಮತ್ತು ಶೇ. 26.6ರಷ್ಟು ಹಾಜರಾತಿಯೊಂದಿಗೆ 37.65 ಕೋಟಿ ರೂ. ಸಂಗ್ರಹಿಸಿತು. ಮೂರನೇ ದಿನ 19,390 ಪ್ರದರ್ಶನ ಮತ್ತು ಶೇ.25.5 ರಷ್ಟು ಪ್ರೇಕ್ಷಕರ ಹಾಜರಾತಿಯೊಂದಿಗೆ 27.20 ಕೋಟಿ ರೂ. ಕಲೆಕ್ಷನ್ ಮಾಡಿತು.

Yash's 'Toxic
ಸಿನಿಮಾಗಳಲ್ಲಿ ಅತಿಯಾದ ಹಿಂಸೆ, ಮಹಿಳಾ ವಿರೋಧಿ ಧೋರಣೆ ನಿಲ್ಲಿಸಿ: 'ಟಾಕ್ಸಿಕ್' ಚಿತ್ರ ಉಲ್ಲೇಖಿಸಿ CBFC ವಿರುದ್ಧ ಅಣ್ಣಾಮಲೈ ಕಿಡಿ

ನಾಲ್ಕನೇ ದಿನ ಒಟ್ಟು 227.50 ಕೋಟಿ ಕಲೆಕ್ಷನ್: ನಾಲ್ಕನೇ ದಿನದ ಅಂತ್ಯದ ವೇಳೆಗೆ, 'ಟಾಕ್ಸಿಕ್' 190.45 ಕೋಟಿ ರೂ.ಗಳ ನಿವ್ವಳ (net) ಗಳಿಕೆ ದಾಖಲಿಸಿದ್ದರೆ, ಅದರ ಒಟ್ಟು (gross) ಸಂಗ್ರಹವು 227.50 ಕೋಟಿ ರೂ.ಗಳಷ್ಟಿತ್ತು. ವಿದೇಶಗಳಲ್ಲಿಯೂ 4 ಕೋಟಿ ರೂ. ಗಳಿಸಿದ್ದು, ಇದರೊಂದಿಗೆ ಅಲ್ಲಿನ ಒಟ್ಟು ಗಳಿಕೆಯು 27.25 ಕೋಟಿ ರೂ.ಗೆ ತಲುಪಿದೆ. ಜಾಗತಿಕ ಮಟ್ಟದ ಒಟ್ಟು ಗಳಿಕೆಯು 254.75 ಕೋಟಿ ರೂ.ಗಳಷ್ಟಿದೆ. ಚಿತ್ರಮಂದಿರಗಳಲ್ಲಿ 'ಟಾಕ್ಸಿಕ್' ತನ್ನ ಯಶಸ್ವಿ ಪಯಣವನ್ನು ಮುಂದುವರಿದಿರುವಂತೆಯೇ ಅದರ ಈ ನಾಲ್ಕು ದಿನಗಳ ಪ್ರದರ್ಶನವು ಯಶ್ ಅವರ ಬಾಕ್ಸ್ ಆಫೀಸ್ ಸಾಧನೆಯನ್ನು ಪ್ರಮುಖವಾಗಿ ಗಮನ ಸೆಳೆಯುವಂತೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com