'ನಿಮ್ಗೆ ಡಿ ಬಾಸ್, ನಂಗೆ ಅವನು ಮಗ, ನೋಡ್ತಿರಿ, ಇನ್ನೆರಡು ತಿಂಗಳಲ್ಲಿ ದರ್ಶನ್ ಹೊರಬರ್ತಾರೆ': ರವಿಚಂದ್ರನ್

ಹಿರಿಯ ನಟ ರವಿಚಂದ್ರನ್, ನೋಡ್ತಿರಿ ದರ್ಶನ್ ಇನ್ನೆರಡು ತಿಂಗಳಲ್ಲಿ ಆಚೆ ಬರ್ತಾರೆ ಎಂದು ಹೇಳಿದ್ದಾರೆ.
Darshan and Ravichandran (File photo)
ರವಿಚಂದ್ರನ್, ದರ್ಶನ್(ಸಂಗ್ರಹ ಚಿತ್ರ)
Updated on

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ (Darshan) ಅವರು ಸದ್ಯ ಜೈಲಿನಲ್ಲಿದ್ದಾರೆ. ನಿನ್ನೆ ಫೆಬ್ರವರಿ 16 ಅವರ 49ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರು ಯಾವಾಗ ಹೊರ ಬರುತ್ತಾರೆ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಹೀಗಿರುವಾಗಲೇ ಹಿರಿಯ ನಟ ರವಿಚಂದ್ರನ್, ನೋಡ್ತಿರಿ ದರ್ಶನ್ ಇನ್ನೆರಡು ತಿಂಗಳಲ್ಲಿ ಆಚೆ ಬರ್ತಾರೆ ಎಂದು ಹೇಳಿದ್ದಾರೆ. ದರ್ಶನ್ ಹಾಗೂ ರವಿಚಂದ್ರನ್ ಮಧ್ಯೆ ಒಳ್ಳೆಯ ಉತ್ತಮ ಬಾಂಧವ್ಯ ಇದೆ. 2023ರ ‘ಕ್ರಾಂತಿ’ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದಾರೆ. ದರ್ಶನ್ ಅವರಿಗೂ ರವಿಚಂದ್ರನ್ ಎಂದರೆ ಎಲ್ಲಿಲ್ಲದ ಗೌರವ. ಈಗ ರವಿಚಂದ್ರನ್ ಅವರು ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.

ನಿನ್ನೆ ಕಾರ್ಯಕ್ರಮವೊಂದರಲ್ಲಿ ರವಿಚಂದ್ರನ್ ಮಾತನಾಡುತ್ತಿದ್ದ ವೇಳೆ ಅಭಿಮಾನಿಗಳು ಡಿಬಾಸ್ ಎಂದು ಕೂಗಿದ್ದಾರೆ. ಆಗ ರವಿಚಂದ್ರನ್ ಅವರು , ‘ಡಿಬಾಸ್ ಎರಡು ತಿಂಗಳಲ್ಲಿ ಆಚೆ ಬರುತ್ತಾರಂತೆ. ಈ ಬಾಯಲ್ಲಿ ಹೇಳಿದೀನಿ ಬರ್ತಾರೆ. ನಿಮಗೆಲ್ಲ ಅವನು ಡಿ ಬಾಸ್, ನನಗೆ ಮಗ, ನೆನಪಿಟ್ಟುಕೊಳ್ಳಿ. ಇದೆಲ್ಲ ಕೆಟ್ಟ ಘಳಿಗೆ ಅಷ್ಟೇ. ಕೆಟ್ಟ ಘಳಿಗೆ ಮನುಷ್ಯನ್ನ ಕುಗ್ಗಿಸುತ್ತದೆ. ಅದೇ ಸಮಯ ಒಂದಲ್ಲ ಒಂದು ದಿನ ಮೇಲಕ್ಕೆ ಎತ್ತಲೇಬೇಕು. ಅವರನ್ನು ಎದೆಯಲ್ಲೇ ಇಟ್ಟು ಪೂಜಿಸಿ’ ಎಂದರು. ‘ಎಲ್ಲದಕ್ಕೂ ಕಾಯಬೇಕು’ ಎಂದರು.

Darshan and Ravichandran (File photo)
ಜೈಲಲ್ಲೂ ಅಭಿಮಾನಿಗಳ ಕಾಟ: ದರ್ಶನ್ ನೋಡಲು police constableಗೆ ಅವಕಾಶ; ವಾರ್ಡನ್ ಎತ್ತಂಗಡಿ

ದರ್ಶನ್ ಅವರ ಜಾಮೀನು ಸುಪ್ರೀಂಕೋರ್ಟ್​​ನಲ್ಲೇ ರದ್ದಾಗಿ ಅವರಿಗೆ ಮತ್ತೆ ಜೈಲುಶಿಕ್ಷೆಯಾಗಿದೆ. ಹೀಗಾಗಿ, ಅವರಿಗೆ ಸದ್ಯಕ್ಕೆ ಜಾಮೀನು ಸಿಗೋದು ಅನುಮಾನವೇ ಎಂದೆಲ್ಲ ಮಾತನಾಡಿಕೊಳ್ಳಲಾಗುತ್ತಿದೆ. ಹೀಗಿರುವಾಗ ರವಿಚಂದ್ರನ್ ಅವರು ಪಾಸಿಟಿವ್ ಆಗಿ ಮಾತನಾಡಿದ್ದು, ಅಭಿಮಾನಿಗಳಿಗೆ ಖುಷಿಕೊಟ್ಟಿದೆ.

ಪವಿತ್ರಾಗೆ ಮಧ್ಯಂತರ ಜಾಮೀನು ನಿರಾಕರಣೆ

ಪವಿತ್ರಾ ಗೌಡ ಅವರು ಮಗಳಿಗೆ 10ನೇ ತರಗತಿ ಬೋರ್ಡ್ ಪರೀಕ್ಷೆ ಇದೆ, 21 ದಿನಗಳ ಮಧ್ಯಂತರ ಜಾಮೀನು ಕೊಡಿ ಎಂದು ಅರ್ಜಿ ಸಲ್ಲಿಸಿದ್ದರು. ಆದರೆ, ಇದನ್ನು ನೀಡಲು ಕೋರ್ಟ್ ನಿರಾಕರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com