

ರಾಕಿಂಗ್ ಸ್ಟಾರ್ ಯಶ್ ಅವರ ಗ್ಯಾಂಗ್‌ಸ್ಟರ್ ಆಕ್ಷನ್ ಡ್ರಾಮಾ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್‌ನ ಟೀಸರ್ ಕಳೆದ 24 ಗಂಟೆಗಳಲ್ಲಿ ಅಕ್ಷರಶಃ ದಾಖಲೆಯ ವೀಕ್ಷಕರನ್ನು ಗಳಿಸಿದೆ. ಗೀತು ಮೋಹನ್ದಾಸ್ ನಿರ್ದೇಶನದ, ಜನವರಿ 8ರಂದು ಬಿಡುಗಡೆಯಾದ ಟೀಸರ್ ನಲ್ಲಿ ಯಶ್‌ರ ರಾಯ ಪಾತ್ರವನ್ನು ಬಹಿರಂಗಪಡಿಸಿತ್ತು.
ಡ್ಯಾಡಿ ಈಸ್ ಹೋಮ್ ಎಂಬ ಟಾಕ್ಸಿಕ್ ಟೀಸರ್, ಮೊದಲ 24 ಗಂಟೆಗಳಲ್ಲಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ (ಯೂಟ್ಯೂಬ್, ಇನ್‌ಸ್ಟಾಗ್ರಾಮ್, ಟ್ವಿಟರ್/ಎಕ್ಸ್ ಮತ್ತು ಫೇಸ್‌ಬುಕ್) 220ಕ್ಕೂ ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಇದು ಬಹುಶಃ ಭಾರತೀಯ ಚಿತ್ರವೊಂದಕ್ಕೆ ಹೊಸ ದಾಖಲೆಯಾಗಿದೆ.
ಯೂಟ್ಯೂಬ್ ಟೀಸರ್ 54 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಯಶ್ ಸೇರಿದಂತೆ ಚಿತ್ರತಂಡದ ಹಲವರು ತಮ್ಮ ವೈಯಕ್ತಿಕ ಇನ್‌ಸ್ಟಾಗ್ರಾಮ್‌ನಲ್ಲಿ ನಲ್ಲಿ ವಿಡಿಯೋ ಹಂಚಿಕೊಂಡಿದ್ದು ಇದು 150ಕ್ಕೂ ಮಿಲಿಯನ್ ವೀಕ್ಷಣೆಗಳನ್ನು ಗಳಿಸಿತು. ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಟೀಸರ್ 23 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಇದರ ಜೊತೆಗೆ ಇದು 6 ಮಿಲಿಯನ್‌ಗಿಂತಲೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.
ಟೀಸರ್‌ನ ದಾಖಲೆಯ ವೀಕ್ಷಕರ ಸಂಖ್ಯೆ, ವರ್ಷದ ಶ್ರೇಷ್ಠ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಒಂದಾದ ಈ ಚಿತ್ರದ ಮೇಲಿನ ಭಾರಿ ಕುತೂಹಲವನ್ನು ಒತ್ತಿಹೇಳುತ್ತದೆ. 2022ರಲ್ಲಿ ಬಿಡುಗಡೆಯಾದ ಭಾರತದ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾದ ಕೆಜಿಎಫ್: ಅಧ್ಯಾಯ 2ರ ನಂತರ ಯಶ್ ಅವರ ಮೊದಲ ಚಿತ್ರ ಟಾಕ್ಸಿಕ್: 'ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್'. ಈ ಮೊದಲು ತೆರೆಗೆ ಬಂದಿದ್ದ ‘ಕೆಜಿಎಫ್ 2’ ಸಿನಿಮಾ 24 ಗಂಟೆಯಲ್ಲಿ 109 ಮಿಲಿಯನ್ ಡಿಜಿಟಿಲ್ ವ್ಯೂವ್ಸ್, ‘ಕಾಂತಾರ: ಚಾಪ್ಟರ್ 1’ 107 ಮಿಲಿಯನ್, ‘ಅನಿಮಲ್’ 71 ಮಿಲಿಯನ್ ಹಾಗೂ ‘ಪುಷ್ಪ 2’ 107 ಮಿಲಿಯನ್ ವೀಕ್ಷಣೆ ಕಂಡಿತ್ತು. ಈ ಎಲ್ಲಾ ದಾಖಲೆಗಳನ್ನು ಯಶ್ ಅವರು ಪೀಸ್ ಪೀಸ್ ಮಾಡಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸಿದ ಟಾಕ್ಸಿಕ್, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬಿಡುಗಡೆಯಾಗುತ್ತಿದ್ದು, ಈ ರೀತಿ ಮಾಡಲಾದ ಮೊದಲ ಕನ್ನಡ ಚಿತ್ರವಾಗಿದೆ. ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ನಟಿಸಿರುವ ಈ ಚಿತ್ರವು ಮಾರ್ಚ್ 19, 2026 ರಂದು ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
Advertisement