

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆಗೆ ಇನ್ನು ಒಂದು ವಾರವಷ್ಟೇ ಬಾಕಿ ಇದ್ದು, ಈ ನಡುವಲ್ಲೇ ಟಾಸ್ಕ್ ಕ್ವೀನ್ ರಾಶಿಕಾ ಶೆಟ್ಟಿಯವರು ಮನೆಯಿಂದ ಹೊರಬಂದಿದ್ದಾರೆ.
ಭಾನುವಾರದ ಎಪಿಸೋಡ್‌ನಲ್ಲಿ ಒಬ್ಬ ಸ್ಪರ್ಧಿ ಮನೆಯಿಂದ ಹೊರಹೋಗಬೇಕೆಂಬ ನಿಯಮದಂತೆ ರಾಶಿಕಾ ಅವರನ್ನ ಎವಿಕ್ಟ್ ಮಾಡಲಾಗಿದೆ.
ʻಬಿಗ್ ಬಾಸ್ʼನಲ್ಲಿ ಈ ವಾರ ಒಟ್ಟು 8 ಮಂದಿ ಸ್ಪರ್ಧಿಗಳ ಪೈಕಿ, 7 ಮಂದಿ ಗಿಲ್ಲಿ ನಟ, ಕಾವ್ಯ ಶೈವ, ಅಶ್ವಿನಿ ಗೌಡ, ಧ್ರುವಂತ್, ರಾಶಿಕಾ ಶೆಟ್ಟಿ, ರಘು, ರಕ್ಷಿತಾ ಶೆಟ್ಟಿ ಡೇಂಜರ್ ಝೋನ್‌ನಲ್ಲಿದ್ದರು. ಶನಿವಾರದ ಎಪಿಸೋಡ್‌ನಲ್ಲಿ ಅಶ್ವಿನಿ ಗೌಡ ಅವರು ಮೊದಲು ಸೇಫ್ ಆದರು.
ಭಾನುವಾರದ ಎಪಿಸೋಡ್‌ನಲ್ಲಿ ಮೊದಲು ಗಿಲ್ಲಿ, ನಂತರ ರಕ್ಷಿತಾ ಶೆಟ್ಟಿ, ಧ್ರುವಂತ್ ಮತ್ತು ಕಾವ್ಯ ಸೇಫ್ ಆದರು. ಕೊನೆಗೆ ರಘು ಹಾಗೂ ರಾಶಿಕಾ ಶೆಟ್ಟಿ ಡೇಂಜರ್ ಝೋನ್‌ನಲ್ಲಿದ್ದರು. ಇವರಿಬ್ಬರ ಪೈಕಿ ಕಡೆಗೆ ರಾಶಿಕಾ ಶೆಟ್ಟಿ ಔಟ್ ಆಗಿದ್ದಾರೆ. ಹೀಗಾಗಿ, ಫಿನಾಲೆಗೆ ಕೇವಲ ಒಂದು ಹೆಜ್ಜೆ ದೂರದಲ್ಲಿದ್ದ ರಾಶಿಕಾ ಅವರು ಸ್ವಲ್ಪದರಲ್ಲಿ ಫೈನಲಿಸ್ಟ್ ಆಗುವ ಅವಕಾಶದಿಂದ ವಂಚಿತರಾಗಿದ್ದಾರೆ.
ರಾಶಿಕಾ ಶೆಟ್ಟಿ ಚೆನ್ನಾಗಿಯೇ ಆಡಿದ್ದರು. ಜೊತೆಗೆ ವೀಕ್ಷಕರನ್ನೂ ರಂಚಿಸುವಲ್ಲಿ ಯಶಸ್ವಿಯಾಗಿದ್ದರು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬೆನ್ನಲ್ಲೇ ವೇದಿಕೆ ಮೇಲೆ ಸುದೀಪ್ ಜೊತೆ ಮಾತನ್ನಾಡಿದ ಅವರು, ಬಿಗ್ಬಾಸ್ಗೆ ಬಂದಿದ್ದು ನನ್ನ ಜೀವನದಲ್ಲಿ ನಾನು ಮಾಡಿದ ಒಳ್ಳೆಯ ನಿರ್ಧಾರ. ನಾನು ಇಷ್ಟು ಧೈರ್ಯವಂತೆ ಎಂಬುದು ಇಲ್ಲಿಗೆ ಬರುವವರೆಗೆ ಗೊತ್ತಿರಲಿಲ್ಲ. ನಾನು ಸಹ ಬಹಳ ಸ್ಟ್ರಾಂಗ್ ಎನ್ನುವುದು ಗೊತ್ತಾಯಿತು. ಅಪ್ಪನ ಧ್ವನಿಯ ಬಳಿಕ ನಾನು ಹೆದರಿರುವುದು ಬಿಗ್ಬಾಸ್ ಧ್ವನಿಗೆ ಮಾತ್ರ ಎಂದು ಹೇಳಿದರು.
ಸದ್ಯ ಮನೆಯಲ್ಲಿ ಅಶ್ವಿನಿ, ಧನುಷ್, ಗಿಲ್ಲಿ, ಕಾವ್ಯಾ, ಧ್ರುವಂತ್, ರಕ್ಷಿತಾ, ರಘು ಉಳಿದುಕೊಂಡಿದ್ದಾರೆ. ಇಲ್ಲಿಗೆ Expect The Unexpected ಮುಗಿದಿಲ್ಲ.. ಮಿಡ್ ವೀಕ್ ಎಲಿಮಿನೇಷನ್ ಕೂಡ ಇದ್ದು, ನೈಟ್ ಎಲಿಮಿನೇಷನ್ ಮೂಲಕ ಇಬ್ಬರು ಹೊರ ಹೋಗಲಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದಲೇ ವೋಟಿಂಗ್ ಲೈನ್ ಶುರುವಾಗಿದ್ದು, ಯಾರು ಹೊರ ಹೋಗುತ್ತಾರೆಂಬುದು ಕುತೂಹಲ ಮೂಡಿಸಿದೆ.
Advertisement