

ನವದೆಹಲಿ: ದಳಪತಿ ವಿಜಯ್ ಅಭಿನಯದ ಬಹು ನಿರೀಕ್ಷಿತ ತಮಿಳು ಚಿತ್ರ ಜನ ನಾಯಗನ್ ನಿರ್ಮಾಪಕರು ಸೋಮವಾರ ಮದ್ರಾಸ್ ಹೈಕೋರ್ಟ್ ಆದೇಶ ಪ್ರಶ್ನಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಜನವರಿ 9 ರಂದು, ಜನ ನಾಯಗನ್‌ಗೆ ಸೆನ್ಸಾರ್ ಪ್ರಮಾಣಪತ್ರವನ್ನು ತಕ್ಷಣವೇ ನೀಡಬೇಕೆಂದು ಸಿಬಿಎಫ್‌ಸಿಗೆ ನಿರ್ದೇಶಿಸಿದ್ದ ಮದ್ರಾಸ್ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶವನ್ನು ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠ ತಡೆಹಿಡಿದಿದೆ. ಇದರಿಂದ ರಾಜಕೀಯ ಕಾರಣದಿಂದ ಗಮನ ಸೆಳೆದಿರುವ ನಟ-ರಾಜಕಾರಣಿ ವಿಜಯ್ ಅವರ ಚಿತ್ರದ ಅನಿಶ್ಚಿತತೆಯನ್ನು ಎದುರಿಸುತ್ತಿದೆ.
ಕಳೆದ ಶುಕ್ರವಾರ ಹೈಕೋರ್ಟ್‌ನ ವಿಭಾಗೀಯ ಪೀಠವು ನೀಡಿದ ಆದೇಶದ ವಿರುದ್ಧ ಕೆವಿಎನ್ ಪ್ರೊಡಕ್ಷನ್ಸ್ ಎಲ್‌ಎಲ್‌ಪಿ ಇಂದು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದೆ.
ವಿಜಯ್ ಅವರು ಇತ್ತೀಚೆಗೆ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಎಂಬ ರಾಜಕೀಯ ಪಕ್ಷವನ್ನು ಘೋಷಿಸುವ ಮೂಲಕ ತಮಿಳುನಾಡು ರಾಜಕೀಯ ಪ್ರವೇಶಿಸಿದ್ದು, ಅವರ ಕೊನೆಯ ಚಿತ್ರ ಎಂದು ವ್ಯಾಪಕವಾಗಿ ಪ್ರಚಾರ ಮಾಡಲಾಗುತ್ತಿದ್ದ 'ಜನ ನಾಯಗನ್' ಜನವರಿ 9 ರಂದು ಪೊಂಗಲ್‌ಗೆ ಬಿಡುಗಡೆಯಾಗಬೇಕಿತ್ತು.
ಆದಾಗ್ಯೂ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(CBFC)ಯು ಸಕಾಲದಲ್ಲಿ ಪ್ರಮಾಣೀಕರಣ ನೀಡದ ಕಾರಣ ಚಿತ್ರವು ಕೊನೆಯ ಕ್ಷಣದ ಅಡೆತಡೆಗಳನ್ನು ಎದುರಿಸುತ್ತಿದೆ.
Advertisement