ಹಲವು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ನಟಿಯರಾದ ನಯನತಾರಾ ಮತ್ತು ತ್ರಿಶಾ ದುಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಈ ಚಿತ್ರಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದಕ್ಷಿಣ ಭಾರತೀಯ ಚಿತ್ರೋದ್ಯಮದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ವೃತ್ತಿಜೀವನವನ್ನು ಆನಂದಿಸಿರುವ ಈ ಇಬ್ಬರು ತಾರೆಯರು, ದೋಣಿಯಲ್ಲಿ ಕುಳಿತು ಒಟ್ಟಿಗೆ ಸೂರ್ಯಾಸ್ತವನ್ನು ಅನುಭವಿಸುತ್ತಿರುವುದು ಕಂಡುಬಂದಿದೆ. ಇಬ್ಬರೂ ಕಪ್ಪು ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಹಲವಾರು ತಮಿಳು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರೂ, ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿರುವುದು ಇದೇ ಮೊದಲು. ಈ ಹಿಂದೆ ಅವರ ನಡುವೆ ಜಗಳವಾಗಿರಬಹುದು ಎಂದು ಊಹಿಸಲಾಗಿತ್ತಾದರೂ, ಇದೀಗ ಅವರ ಇತ್ತೀಚಿನ ಫೋಟೊಗಳು ಎಲ್ಲ ವದಂತಿಗಳಿಗೆ ತೆರೆ ಎಳೆದಿವೆ.
ಆ ಚಿತ್ರಗಳು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಚಿತ್ರಗಳನ್ನು ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದು, ಲೈಕ್ ಮಾಡಿದ್ದಾರೆ. ಇದು 'ಅನಿರೀಕ್ಷಿತ ಸಹಯೋಗ' ಎಂದು ನೆಟ್ಟಿಗರು ತಿಳಿಸಿದ್ದಾರೆ. ಕೆಲವರು ಮುಂದಿನ ದಿನಗಳಲ್ಲಿ ಇಬ್ಬರೂ ಒಟ್ಟಿಗೆ ಚಿತ್ರದಲ್ಲಿ ನಟಿಸುವಂತೆಯೂ ಹೇಳಿದ್ದಾರೆ. ಆದರೆ, ಇನ್ನೂ ಕೆಲವರು ಅವು AI-ರಚಿತ ಚಿತ್ರವಲ್ಲ ಎಂಬುದನ್ನೂ ಖಚಿತಪಡಿಸಿಕೊಂಡಿದ್ದಾರೆ.
ನಟಿ ನಯನತಾರಾ ಈ ಚಿತ್ರಗಳನ್ನು ಹಂಚಿಕೊಂಡಿದ್ದು, ನಟಿ ತ್ರಿಶಾ ಅವರಿಗೂ ಟ್ಯಾಗ್ ಮಾಡಿದ್ದಾರೆ. ಹೃದಯದ ಎಮೋಜಿಯನ್ನು ಶೀರ್ಷಿಕೆಯಾಗಿ ನೀಡಿದ್ದಾರೆ.
ಸೋಮವಾರದಂದು, ಹತ್ತನೇ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಪತಿ ರಾಹುಲ್ ಶರ್ಮಾ ಫೋಟೊಗಳನ್ನು ಹಂಚಿಕೊಂಡ ನಂತರ ನಟಿ ಆಸಿನ್ ಅವರ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಕಾಣಿಸಿಕೊಂಡವು. '2000ರ ದಶಕಕ್ಕೆ ಹಿಂತಿರುಗಿ' ಎಂದು ಒಬ್ಬ ಬಳಕೆದಾರರು ಕರೆದಿದ್ದಾರೆ.
ನಯನತಾರಾ ಇತ್ತೀಚೆಗೆ ಚಿರಂಜೀವಿ ಅವರ ಮನ ಶಂಕರ ವರ ಪ್ರಸಾದ್ ಗಾರು ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರವು ಸಂಕ್ರಾಂತಿ ಸಂದರ್ಭದಲ್ಲಿ ಬಿಡುಗಡೆಯಾಯಿತು. ತಮಿಳಿನಲ್ಲಿ, ಅವರ ಕೊನೆಯ ಯೋಜನೆ ಟೆಸ್ಟ್, ಇದು ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಯಿತು. ಸದ್ಯ ನಟಿ ಡಿಯರ್ ಸ್ಟೂಡೆಂಟ್ಸ್, ಎನ್‌ಬಿಕೆ 111, ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್, ಮನ್ನಂಗಟ್ಟಿ ಸಿನ್ಸ್ 1960, ಪೇಟ್ರಿಯಾಟ್, ಮೂಕುತಿ ಅಮ್ಮನ್ 2, ಹಾಯ್ ಮತ್ತು ರಕ್ಕಾಯಿ ಸೇರಿದಂತೆ ವಿವಿಧ ಭಾಷೆಗಳ ಹಲವು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮತ್ತೊಂದೆಡೆ, ಕಳೆದ ವರ್ಷ ಬಿಡುಗಡೆಯಾದ ಕಮಲ್ ಹಾಸನ್-ಮಣಿರತ್ನಂ ಅವರ ಥಗ್ ಲೈಫ್ ಚಿತ್ರದಲ್ಲಿ ತ್ರಿಶಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಆರ್‌ಜೆ ಬಾಲಾಜಿ ನಿರ್ದೇಶನದ ಸೂರ್ಯ ಅವರ ಕರುಪ್ಪು ಚಿತ್ರದ ಬಿಡುಗಡೆಗೂ ಅವರು ಎದುರು ನೋಡುತ್ತಿದ್ದಾರೆ. ಮಲ್ಲಿಡಿ ವಸಿಷ್ಟ ನಿರ್ದೇಶನದ ಚಿರಂಜೀವಿ ಅವರ ಬಹುನಿರೀಕ್ಷಿತ ವಿಶ್ವಂಭರ ಚಿತ್ರದಲ್ಲಿ ತ್ರಿಶಾ ನಟಿಸಲಿದ್ದಾರೆ.
Advertisement