ಗಿಲ್ಲಿ ನಟ ಚಿನ್ನದ ಹುಡುಗ: ಎರಡೆರಡು ಚಿನ್ನದ ಸರ ಗಿಫ್ಟ್ ಕೊಟ್ಟರಾ ಶರವಣ?

ಗಿಲ್ಲಿ ನಟನಿಗೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯ, ಸಾಯಿ ಗೋಲ್ಡ್ ಪ್ಯಾಲೆಸ್ ನ ಮಾಲೀಕ ಟಿ ಎ ಶರವಣ ಅವರು ಎರಡೆರಡು ಗೋಲ್ಡ್ ಚೈನ್ ಗಿಫ್ಟ್ ಆಗಿ ಕೊಟ್ಟಿದ್ದಾರಾ ಎಂಬ ಪ್ರಶ್ನೆ ಉಂಟಾಗಿದೆ.
Gilli Nata in Sree sai gold palace
ಶ್ರೀ ಸಾಯಿ ಗೋಲ್ಡ್ ಪ್ಯಾಲೆಸ್ ನಲ್ಲಿ ಗಿಲ್ಲಿ ನಟ
Updated on

‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಗಿಲ್ಲಿ ನಟನಿಗೆ ಅದೃಷ್ಟ ಖುಲಾಯಿಸಿದಂತೆ ಕಾಣುತ್ತಿದೆ. ಬಿಗ್ ಬಾಸ್​ನಿಂದ ಗೆಲುವಿನ ಜೊತೆಗೆ ಜನಪ್ರಿಯತೆ ಕೂಡ ಸಾಕಷ್ಟು ಸಿಕ್ಕಿದೆ. ಇಂದು ಗಿಲ್ಲಿ ನಟನಿಗೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯ, ಸಾಯಿ ಗೋಲ್ಡ್ ಪ್ಯಾಲೆಸ್ ನ ಮಾಲೀಕ ಟಿ ಎ ಶರವಣ ಅವರು ಎರಡೆರಡು ಗೋಲ್ಡ್ ಚೈನ್ ಗಿಫ್ಟ್ ಆಗಿ ಕೊಟ್ಟಿದ್ದಾರಾ ಎಂಬ ಪ್ರಶ್ನೆ ಉಂಟಾಗಿದೆ.

ಬೆಂಗಳೂರಿನ ಕನಕಪುರ ರಸ್ತೆಯ ರಘುವನಹಳ್ಳಿಯಲ್ಲಿ ಟಿ.ಎ. ಶರವಣ ಅವರ ಮಾಲೀಕತ್ವದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನ ನೂತನ ಮಳಿಗೆಯ ಉದ್ಘಾಟನೆ ಕಾರ್ಯಕ್ರಮವಿತ್ತು, ಅಲ್ಲಿಗೆ ಗಿಲ್ಲಿ ನಟ, ರನ್ನರ್ ಅಪ್ ರಕ್ಷಿತಾ, ರಘು ಮೊದಲಾದವರು ಆಗಮಿಸಿದ್ದರು.

Gilli Nata in Sree sai gold palace
'ಇಷ್ಟು ದೂರ ಕರ್ಕೊಂಡು ಬಂದಿದ್ದೀರಾ.. ಮನಸ್ಸಲ್ಲಿ ಜಾಗ ಕೊಟ್ಟಿದ್ದೀರಾ': ಕೃತಜ್ಞತೆ ಸಲ್ಲಿಸಿದ ಬಿಗ್‌ಬಾಸ್ ಕನ್ನಡ ವಿಜೇತ ಗಿಲ್ಲಿ ನಟ

‘ಬಿಗ್ ಬಾಸ್ ಕನ್ನಡ ಸೀಸನ್ 12’ ರನ್ನರ್ ಅಪ್​​ ರಕ್ಷಿತಾ ಶೆಟ್ಟಿಗೆ ಸಾಯಿ ಗೋಲ್ಡ್ ಪ್ಯಾಲೆಸ್​​​ ಮುಖ್ಯಸ್ಥ ಶರವಣ ಕಡೆಯಿಂದ 20 ಲಕ್ಷ ರೂಪಾಯಿ ವೋಚರ್ ನೀಡಲಾಗಿದೆ. ಸಾಯಿ ಗೋಲ್ಡ್ ಪ್ಯಾಲೆಸ್​​​ನಲ್ಲಿ 20 ಲಕ್ಷ ರೂಪಾಯಿವರೆಗೆ ಚಿನ್ನ ಖರೀದಿಸುವ ಅವಕಾಶ ಇದೆ. ವೇದಿಕೆಗೆ ಬಂದು ಅವರು ವೋಚರ್​​ನ ರಕ್ಷಿತಾಗೆ ನೀಡಿದ್ದರು.

ಶರವಣ ಅವರಿಗೆ ಗಿಲ್ಲಿ ಬಗ್ಗೆ ವಿಶೇಷ ಒಲವು ಇದೆ. ಫಿನಾಲೆಗೆ ತೆರಳುವುದಕ್ಕೂ ಮೊದಲು ಮಾತನಾಡಿದ್ದ ಶರವಣ ಅವರು, ‘ಗಿಲ್ಲಿನೇ ಗೆಲ್ತಾನೆ’ ಎಂದು ಭವಿಷ್ಯ ನುಡಿದಿದ್ದರು. ‘ಗಿಲ್ಲಿ ಗೆದ್ರೆ ನನ್ನ ಕಡೆಯಿಂದ 20 ಲಕ್ಷ ರೂಪಾಯಿ ಕೊಡ್ತೀನಿ’ ಎಂದಿದ್ದರು. ಆದರೆ, ಬಿಗ್ ಬಾಸ್ ವೇದಿಕೆ ಮೇಲೆ ಅವರು ಈ ಹಣವನ್ನು ನೀಡಿರಲಿಲ್ಲ. ಈಗ ಶಾಪ್ ಓಪನಿಂಗ್​​ಗೆ ಬಂದ ಗಿಲ್ಲಿಗೆ ದಪ್ಪದ ಎರಡೆರಡು ಚೈನ್ ಹಾಕಿದ್ದು ನೋಡಿ ಎಲ್ಲರೂ ಹುಬ್ಬೇರಿಸಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ನಿಜವಾಗಿಯೂ ಗಿಲ್ಲಿಗೆ ಶರವಣ ಗಿಫ್ಟ್ ಮಾಡಿದ್ದೇ ಅಥವಾ ಶಾಪ್ ಗೆ ಬಂದಾಗ ಗೋಲ್ಡ್ ಹಾಕಿ ತೋರಿಸಿ ಪ್ರಚಾರ ಮಾಡುವ ತಂತ್ರವೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಆಭರಣ ಮಳಿಗೆಗೆ ಬಂದಾಗ ಈ ರೀತಿ ಚಿನ್ನ ತೊಟ್ಟು ಫೋಟೋ-ವಿಡಿಯೊೋಗೆ ಫೋಸ್ ಕೊಡುವುದುಂಟು. ಅದನ್ನು ಮಳಿಗೆಯವರು ತಮ್ಮ ಆಭರಣಗಳ ಪ್ರಚಾರಕ್ಕೆ ಬಳಸುತ್ತಾರೆ. ಇದೇ ರೀತಿ ಶರವಣ ಕೂಡ ಗಿಲ್ಲಿ ಕುತ್ತಿಗೆಗೆ ಹಾಕಿರಬಹುದು. ಒಟ್ಟಿನಲ್ಲಿ ಬಿಗ್ ಬಾಸ್ ನಂತರ ಗಿಲ್ಲಿ ಚಿನ್ನದ ಹುಡುಗ ಆಗಿದ್ದಾನೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com