

BBK-12 ರಲ್ಲಿ ಮೊದಲ ರನ್ನರ್ ಅಪ್ ಆದ ಬಳಿಕ, ಹಲವಾರು ಕಾರ್ಯಕ್ರಮಗಳು, ಸಂದರ್ಶನಗಳು ಎಂದೆಲ್ಲಾ ಸಖತ್ ಬ್ಯೂಸಿಯಾಗಿದ್ದ ರನ್ನರ್ ಅಫ್ ರಕ್ಷಿತಾ ಶೆಟ್ಟಿ ಇದೀಗ ಸ್ವಲ್ಪ ಫ್ರೀ ಆದಂತೆ ಕಂಡುಬಂದಿದ್ದಾರೆ. ಅದಕ್ಕಾಗಿಯೇ ವ್ಲಾಗ್ನಲ್ಲಿ ಕೆಲಸ ಮುಂದುವರೆಸುತ್ತಿದ್ದಾರೆ.
ಬಿಗ್ ಬಾಸ್ ಜರ್ನಿ ಕುರಿತು ಏನೇ ಪ್ರಶ್ನೆ ಕೇಳಿದ್ರು, ನಾನು ಅವುಗಳಿಗೆ ಉತ್ತರಿಸಲು ಟ್ರೈ ಮಾಡುತ್ತೇನೆ. ನಿಮ್ಮೆಲ್ಲಾ ಪ್ರಶ್ನೆಗಳನ್ನು ಬರೆಯಿರಿ. ಬಿಗ್ಬಾಸ್ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರ ಕೊಡುತ್ತೇನೆ. ಥ್ಯಾಂಕ್ಯೂ ಸೋ ಮಚ್ ಎಂದಿದ್ದಾರೆ. ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆಯೇ ಹರಿದು ಬಂದಿದೆ.
ಇನ್ನೊಂದೆಡೆ ಕಿಚ್ಚ ಸುದೀಪ್ ಬಗ್ಗೆ ಸುದೀರ್ಘ ಪತ್ರ ಬರೆದಿದ್ದಾರೆ. ಕೆಲವರು ನಿಮಗೆ ಮಾರ್ಗದರ್ಶನ ನೀಡುವುದಷ್ಟೇ ಅಲ್ಲ. ಇಡೀ ಜಗತ್ತು ನಿಮ್ಮನ್ನು ಪ್ರಶ್ನಿಸಿದಾಗ ಅವರು ನಿಮ್ಮೊಂದಿಗೆ ನಿಲ್ಲುತ್ತಾರೆ. ಸುದೀಪ್ ಸರ್..ಈ ಬಿಗ್ ಬಾಸ್ ಪ್ರಯಾಣದುದ್ದಕ್ಕೂ ನೀವು ನನಗೆ ತಂದೆಯಂತೆ ಇದ್ದಿರಿ. ನಾನು ಸರಿಯಾಗಿದ್ದಾಗ ನೀವು ಕೋಟ್ಯಂತರ ಜನರ ಮುಂದೆ ನನ್ನ ಪರವಾಗಿ ಮಾತನಾಡಿದ್ದೀರಿ. ನಾನು ತಪ್ಪುಗಳನ್ನು ಮಾಡಿದಾಗ ನೀವು ನಿಜವಾದ ಹಿತೈಷಿಯಂತೆ ನನ್ನನ್ನು ಸರಿಪಡಿಸಿದ್ದೀರಿ ಎಂದಿದ್ದಾರೆ.
ಪ್ರಾಮಾಣಿಕವಾಗಿ, ತುಂಬಾ ಎಚ್ಚರಿಕೆಯಿಂದ ಅದನ್ನು ನಿಭಾಯಿಸಿದ್ದೀರಿ. ನನ್ನನ್ನು ನೋಡಿ ಸತ್ಯ ಹೇಳಿದವರು ನೀವು. ರಕ್ಷಿತಾ, ನೀವು ಇದಕ್ಕಿಂತ ಬಲಶಾಲಿ ಎಂದು ಧೈರ್ಯ ತುಂಬಿದಿರಿ. ಆ ಪ್ರಾಮಾಣಿಕತೆ, ಮಾರ್ಗದರ್ಶನವೇ ನನ್ನನ್ನು ಬದಲಾಯಿಸಿತು ಎಂದು ಬರೆದುಕೊಂಡಿದ್ದಾರೆ.
ಬಿಗ್ ಬಾಸ್ ನ ಮೊದಲ ರನ್ನರ್ ಅಪ್ ಆಗುವುದು ನನ್ನ ಸಾಧನೆ ಮಾತ್ರವಲ್ಲ. ಅದು ನಿಮ್ಮ ಪ್ರಯತ್ನ, ನಿಮ್ಮ ಬೆಂಬಲ ಮತ್ತು ನೀವು ನನ್ನ ಮೇಲಿಟ್ಟ ನಂಬಿಕೆ. ನಾನು ಇಂದು ಇಲ್ಲಿ ನಿಂತಿದ್ದೇನೆ ಅಂದ್ರೆ ಅದಕ್ಕೆ ನೀವೇ ಕಾರಣ. ನನ್ನನ್ನು ರಕ್ಷಿಸಿದ್ದಕ್ಕೆ, ಬೆಂಬಲಿಸಿದ್ದಕ್ಕೆ ತಂದೆಯಂತೆ ಕಾಳಜಿ ವಹಿಸಿದ್ದಕ್ಕೆ ಧನ್ಯವಾದಗಳು ಸರ್. ನೀವು ನನಗಾಗಿ ಮಾತನಾಡಿದ್ದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನೀವು ಕೊಟ್ಟ ಪ್ರೀತಿಯನ್ನು ನಾನು ನನ್ನ ಹೃದಯದಲ್ಲಿ ಹೊತ್ತು ಸಾಗುತ್ತೇನೆ ಎಂದು ಹೇಳಿದ್ದಾರೆ.
Advertisement