29 ವರ್ಷಗಳ ನಂತರ ‘ಅಮೆರಿಕಾ ಅಮೆರಿಕಾ 2’ ಚಿತ್ರ ಘೋಷಿಸಿದ ನಾಗತಿಹಳ್ಳಿ ಚಂದ್ರಶೇಖರ್; ನಾಯಕ, ನಾಯಕಿ ಯಾರೂ?

ಈ ಬಹುನಿರೀಕ್ಷಿತ ಈ ಚಿತ್ರದ ಶೂಟಿಂಗ್ ಈಗಾಗಲೇ ಮುಕ್ತಾಯಗೊಂಡಿದ್ದು, ಇದನ್ನು ಅಮೆರಿಕಾದಲ್ಲಿಯೇ ಶೂಟಿಂಗ್ ಮಾಡಿದ್ದಾರೆ. ಆದರೆ, ಈ ಚಿತ್ರಕ್ಕೆ ಟೈಟಲ್ ಏನು ಅನ್ನುವ ಕುತೂಹಲವು ಇತ್ತು.
‘ಅಮೆರಿಕಾ ಅಮೆರಿಕಾ 2’ ಚಿತ್ರ ಘೋಷಿಸಿದ ನಾಗತಿಹಳ್ಳಿ
‘ಅಮೆರಿಕಾ ಅಮೆರಿಕಾ 2’ ಚಿತ್ರ ಘೋಷಿಸಿದ ನಾಗತಿಹಳ್ಳಿ
Updated on

29 ವರ್ಷಗಳ ಹಿಂದೆ ತೆರಕಂಡಿದ್ದ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಹಾಗೂ ರಮೇಶ್ ಅರವಿಂದ್ ಅಭಿನಯದ ‘ಅಮೆರಿಕಾ ಅಮೆರಿಕಾ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು.

ಇದೀಗ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ‘ಅಮೆರಿಕಾ ಅಮೆರಿಕಾ 2’ ಸಿನಿಮಾ ಘೋಷಿಸಿದ್ದು, ಸಿನಿರಸಿಕರಲ್ಲಿ ಭಾರೀ ಕುತೂಹಲ ಹಾಗೂ ಭರಪೂರ ನಿರೀಕ್ಷೆ ಮೂಡಿಸಿದೆ.

ಸದ್ಯದ ಮಾಹಿತಿ ಪ್ರಕಾರ, ಈ ಬಹುನಿರೀಕ್ಷಿತ ಈ ಚಿತ್ರದ ಶೂಟಿಂಗ್ ಈಗಾಗಲೇ ಮುಕ್ತಾಯಗೊಂಡಿದ್ದು, ಇದನ್ನು ಅಮೆರಿಕಾದಲ್ಲಿಯೇ ಶೂಟಿಂಗ್ ಮಾಡಿದ್ದಾರೆ. ಆದರೆ, ಈ ಚಿತ್ರಕ್ಕೆ ಟೈಟಲ್ ಏನು ಅನ್ನುವ ಕುತೂಹಲವು ಇತ್ತು. ಇದೀಗ ಚಿತ್ರದ ಟೈಟಲ್ ಅನ್ನು ಅಧಿಕೃತವಾಗಿ ರಿವೀಲ್ ಮಾಡಿದ್ದು, ಅಮೆರಿಕಾ ಅಮೆರಿಕಾ-2 ಎಂದು ಘೋಷಿಸಲಾಗಿದೆ.

‘ಅಮೆರಿಕಾ ಅಮೆರಿಕಾ 2’ ಚಿತ್ರ ಘೋಷಿಸಿದ ನಾಗತಿಹಳ್ಳಿ
22 ವರ್ಷಗಳ ಬಳಿಕ 'ಸೈನಿಕ' ಮತ್ತೆ ರಣರಂಗಕ್ಕೆ; 'ಸೈನಿಕ 2' ಮೂಲಕ ಸಿ.ಪಿ ಯೋಗೀಶ್ವರ್ ಕಂಬ್ಯಾಕ್?

ಈ ಚಿತ್ರದ ನಾಯಕ, ನಾಯಕಿ ಯಾರೂ?

ಅಮೆರಿಕಾ ಅಮೆರಿಕಾ-2 ಚಿತ್ರದಲ್ಲಿ ನಿರೂಪ್ ಭಂಡಾರಿ ಅವರು ನಾಯಕರಾಗಿ ಅಭಿನಯಸಿದ್ದು, ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ಮತ್ತೊಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನು ಶಾನ್ವಿ ಶ್ರೀವಾತ್ಸವ್ ಅವರು ನಾಯಕಿಯಾಗಿ ಅಭಿನಯಸಿದ್ದಾರೆ.

ಈ ಮೂವರು ಕಲಾವಿದರ ಚಿತ್ರವನ್ನ ಮೇಷ್ಟೇ ಡೈರೆಕ್ಷನ್ ಮಾಡಿದ್ದಾರೆ. ಮನೋ ಮೂರ್ತಿಗಳ ಸಂಗೀತ ಈ ಚಿತ್ರಕ್ಕೂ ಇದೆ.

ಈ ಚಿತ್ರದ ಪೋಸ್ಟರ್ ಅನ್ನ ನಾಗತಿಹಳ್ಳಿ ಚಂದ್ರಶೇಖರ್ ಅವರು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com