ದೂರವಾದ್ರ ದರ್ಶನ್-ಧನ್ವೀರ್?" ವಿಜಯಲಕ್ಷ್ಮಿ ಇನ್‌ಸ್ಟಾ ಸ್ಟೋರಿ ಹೇಳ್ತಿರೋದೇನು?

ಈ ಮಧ್ಯೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇಸ್ಟಾಗ್ರಾಮ್ ಸ್ಟೋರಿ ಸಾಕಷ್ಟು ಸುದ್ದಿಯಾಗುತ್ತಿದೆ. ಈ ಮಧ್ಯೆ ದರ್ಶನ್ ಆಪ್ತ ಧನ್ವೀರ್ ಸುಳಿವು ಇಲ್ಲದೇ ಇರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯನ್ನು...
dhanveer-darshan- Vijayalakshmi
ಧನ್ವೀರ್-ದರ್ಶನ್-ವಿಜಯಲಕ್ಷ್ಮಿonline desk
Updated on

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ನಟ ದರ್ಶನ್‌ಗೆ ಸದ್ಯಕ್ಕೆ ಜೈಲೇ ಗತಿಯಾಗಿದೆ. ದರ್ಶನ್‌ ಸತತ ಪ್ರಯತ್ನಗಳನ್ನು ಮಾಡುತ್ತಿದ್ದರೂ ಜಾಮೀನು ಪಡೆಯಲು ಸಾಧ್ಯವಾಗಿಲ್ಲ.

ಈ ಮಧ್ಯೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇಸ್ಟಾಗ್ರಾಮ್ ಸ್ಟೋರಿ ಸಾಕಷ್ಟು ಸುದ್ದಿಯಾಗುತ್ತಿದೆ. ಈ ಮಧ್ಯೆ ದರ್ಶನ್ ಆಪ್ತ ಧನ್ವೀರ್ ಸುಳಿವು ಇಲ್ಲದೇ ಇರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯನ್ನು ತೀವ್ರಗೊಳಿಸಿದೆ.

ಜಾಮೀನಿಗಾಗಿ ನಟ ದರ್ಶನ್ ಸುಪ್ರೀಂ ಕೋರ್ಟ್ ಮೊರೆಹೋದರೂ ಪ್ರಯೋಜನವಾಗಿಲ್ಲ. ಒಂದು ವರ್ಷದ ಒಳಗೆ ವಿಚಾರಣೆ ಮುಗಿಸುವಂತೆ ಹೇಳಿದ್ದರಿಂದ ಅಲ್ಲಿವರೆಗೂ ದರ್ಶನ್‌ಗೆ ಜೈಲೇ ಗತಿಯಾಗಿದೆ. ಈ ಮಧ್ಯೆ ಒಂದಿಷ್ಟು ವಿಷಯಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ.

ವಿಜಯಲಕ್ಷ್ಮಿ ಇನ್‌ಸ್ಟಾ ಸ್ಟೋರಿ

ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಹಂಚಿಕೊಂಡಿರುವ ಇನ್‌ಸ್ಟಾಗ್ರಾಂ ಸ್ಟೋರಿ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

“ಪಡೆದುಕೊಂಡ ಮೇಲೆ ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ… ಅದು ವಸ್ತುವಾಗಲಿ, ವ್ಯಕ್ತಿಯಾಗಲಿ” ಎಂದು ವಿಜಯಲಕ್ಷ್ಮಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇದು ಯಾರಿಗೆ ಹೇಳಿರಬಹುದೆಂದು ಕೆಲವರು ತಲೆ ಕೆಡಿಸಿಕೊಂಡಿದ್ದರೆ, ಮತ್ತೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಧನ್ವೀರ್ ಕಡೆಗೆ ಬೆರೆಳು ಮಾಡಿ ತೋರಿಸುತ್ತಿದ್ದು, ದರ್ಶನ್ ಆಪ್ತನಾಗಿದ್ದ ಧನ್ವೀರ್ ದೂರಾವಾದರಾ ಎಂಬ ಚರ್ಚೆ ಶುರುವಾಗಿದೆ. ದರ್ಶನ್‌ಗೆ ಜಾಮೀನು ಕೊಡಿಸುವ ಪ್ರಯತ್ನದಲ್ಲಿ ಧನ್ವೀರ್ ಸಕ್ರಿಯರಾಗಿದ್ದರು. ದರ್ಶನ್‌ಗೆ ಒಂದು ವರ್ಷದವರೆಗೆ ಜಾಮೀನು ಸಿಗದಂತೆ ಆಗಿದ್ದು, ಧನ್ವೀರ್ ಮೇಲೆ ದರ್ಶನ್ ಮುನಿಸಿಕೊಂಡಿದ್ದಾರೆ ಎಂಬ ಊಹಾಪೋಹಗಳು ಜಾಲತಾಣದಲ್ಲಿ ಹರಿದಾಡುತ್ತಿದೆ.

dhanveer-darshan- Vijayalakshmi
ದರ್ಶನ್ ಪುತ್ರ ವಿನೀಶ್ ಕಾರು ಅಪಘಾತ: ಈಗಾಗಲೇ ಕಷ್ಟದ ಸಮಯದಲ್ಲಿದ್ದೇವೆ- ಮತ್ತಷ್ಟು ಆತಂಕ ಹೆಚ್ಚಿಸಬೇಡಿ; ವಿಜಯಲಕ್ಷ್ಮಿ

ಇದಕ್ಕೆ ಪೂರಕವೆಂಬಂತೆ ಕೆಲವು ದಿನಗಳಿಂದ ಧನ್ವೀರ್ ಸುಳಿವು ಕೂಡ ಇಲ್ಲ. ಹೀಗಾಗಿ ದರ್ಶನ್-ಧನ್ವೀರ್ ನಡುವಿನ ವೈಮನಸ್ಯ ಉಂಟಾಗಿದೆ ಎಂಬ ಊಹಾಪೋಹಗಳು ಹೆಚ್ಚಾಗತೊಡಗಿವೆ. ಆದರೆ ಈ ಬಗ್ಗೆ ಯಾರೂ ಅಧಿಕೃತವಾಗಿ ಏನನ್ನೂ ಮಾತನಾಡಿಲ್ಲ. ಪ್ರತಿಕ್ರಿಯೆಯನ್ನೂ ನೀಡಿಲ್ಲ.

ಈ ಎಲ್ಲಾ ಬೆಳವಣಿಗೆಗಳ ನಡುವೆ ದರ್ಶನ್ ಅಭಿಮಾನಿಗಳು ಸಾಕ್ಷಿಗೆ ಬೆದರಿಕೆ ಹಾಕಿದ್ದರಿಂದ ಅವರನ್ನು ಬಂಧಿಸಲಾಗಿದ್ದು, ವಿಚಾರಣೆಯಲ್ಲಿ ವೇಳೆ ಇನ್ನಷ್ಟು ಮಾಹಿತಿ ಸಿಕ್ಕರೆ ನಟ ದರ್ಶನ್ ಮತ್ತಷ್ಟು ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com