ತಮಿಳುನಾಡಿನಾದ್ಯಂತ 'ಜನ ನಾಯಗನ್' ರಿಲೀಸ್; ಥಿಯೇಟರ್‌ಗಳಲ್ಲಿ ಕುಣಿದು ಕುಪ್ಪಳಿಸಿದ ವಿಜಯ್ ಅಭಿಮಾನಿಗಳು!

ಮುಖ್ಯಮಂತ್ರಿ ಸಿ ವಿಜಯ್ ಜೋಸೆಫ್ ಅಭಿನಯದ ಜನ ನಾಯಗನ್ ಚಿತ್ರದ 'ಮೊದಲ ದಿನದ ಮೊದಲ ಪ್ರದರ್ಶನ'ವನ್ನು ವೀಕ್ಷಿಸಿದ ಸಾವಿರಾರು ಅಭಿಮಾನಿಗಳು, ಪೊಂಗಲ್ ಅಡುಗೆ ವಿತರಿಸಿ, ಪಟಾಕಿ ಸಿಡಿಸಿ, ಸಂಗೀತ ಮತ್ತು ಬೃಹತ್ ಕೇಕ್‌ಗಳನ್ನು ಕತ್ತರಿಸುವ ಮೂಲಕ ಸಂಭ್ರಮಿಸಿದರು.
Vijay in Jana Nayagan
ಜನ ನಾಯಗನ್ ಚಿತ್ರದಲ್ಲಿ ವಿಜಯ್
Updated on

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅಭಿನಯದ ಬಹು ನಿರೀಕ್ಷಿತ ತಮಿಳು ಚಿತ್ರ ಜನ ನಾಯಗನ್ ಗುರುವಾರ ಬೆಳಗ್ಗೆ ಭಾರೀ ಉತ್ಸಾಹದೊಂದಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ತಮಿಳಗ ವೆಟ್ರಿ ಕಳಗಂ ಕಾರ್ಯಕರ್ತರು ಹಾಗೂ ವಿಜಯ್ ಅಭಿಮಾನಿಗಳು ಥಿಯೇಟರ್‌ಗಳಲ್ಲಿ ಕುಣಿದು ಕುಪ್ಪಳಿಸಿದ ಸಂಭ್ರಮಿಸಿದ್ದಾರೆ.

ಮುಖ್ಯಮಂತ್ರಿ ಸಿ ವಿಜಯ್ ಜೋಸೆಫ್ ಅಭಿನಯದ ಜನ ನಾಯಗನ್ ಚಿತ್ರದ 'ಮೊದಲ ದಿನದ ಮೊದಲ ಪ್ರದರ್ಶನ'ವನ್ನು ವೀಕ್ಷಿಸಿದ ಸಾವಿರಾರು ಅಭಿಮಾನಿಗಳು, ಪೊಂಗಲ್ ಅಡುಗೆ ವಿತರಿಸಿ, ಪಟಾಕಿ ಸಿಡಿಸಿ, ಸಂಗೀತ ಮತ್ತು ಬೃಹತ್ ಕೇಕ್‌ಗಳನ್ನು ಕತ್ತರಿಸುವ ಮೂಲಕ ಸಂಭ್ರಮಿಸಿದರು.

ಭಾರೀ ವಿಳಂಬದ ನಂತರ ಚಿತ್ರ ಬಿಡುಗಡೆಯಾಗಿರುವುದರಿಂದ ತುಂಬಾ ಸಂತೋಷವಾಗಿದೆ. ಆದರೆ ಜನ ನಾಯಗನ್ ಸಿಎಂ ವಿಜಯ್ ಅವರ ಕೊನೆಯ ಚಿತ್ರವಾಗಿರುವುದರಿಂದ ಬೇಸರವಾಗುತ್ತಿದೆ ಎಂದು ಹಲವು ಅಭಿಮಾನಿಗಳು ಹೇಳಿದ್ದಾರೆ.

Vijay in Jana Nayagan
ಅಂತೂ ಇಂತೂ 'ಜನ ನಾಯಗನ್' ಬಿಡುಗಡೆ: ವಿಜಯ್ ಅಭಿಮಾನಿಗಳಿಗೆ ಡಬಲ್ ಸಂಭ್ರಮ, ಹೇಗಿದೆ Film? Video

ಚಿತ್ರ ಮಂದಿರಗಳ ಹೊರಗಡೆ ವಿಜಯ್ ಅವರ ಬೃಹತ್ ಹೋರ್ಡಿಂಗ್‌ಗಳಿಗೆ ಅಭಿಮಾನಿಗಳು ಹಾಲಿನ ಅಭಿಷೇಕವನ್ನು ಮಾಡಿದರು.

ರೋಹಿಣಿ, ವುಡ್‌ಲ್ಯಾಂಡ್ಸ್ ಮತ್ತು ಕ್ಯಾಸಿನೊ ಚಿತ್ರಮಂದಿರಗಳಲ್ಲಿ ಜನ ನಾಯಗನ್ ಚಿತ್ರದ ಭವ್ಯ ಹೋರ್ಡಿಂಗ್‌ಗಳು ಕಂಡುಬಂದವು ಮತ್ತು ಚೆನ್ನೈನಲ್ಲಿ ಒಂದು ಹೋರ್ಡಿಂಗ್ ವಿಜಯ್ ಅವರನ್ನು 'ತಮಿಳುನಾಡಿನ ಏಕೈಕ ಶಕ್ತಿ ಕೇಂದ್ರ' ಎಂದು ಹೊಗಳಿದೆ.

ಪೊಂಗಲ್ ಹಬ್ಬದ ವೇಳೆಗೆ ತೆರೆಗೆ ಬರಬೇಕಿದ್ದ ಜನ ನಾಯಗನ್ ಚಿತ್ರವು ನಾನಾ ಅಡೆತಡೆಗಳಿಂದಾಗಿ ಮುಂದೂಡಲ್ಪಟ್ಟಿತ್ತು. ಇದೀಗ ಜುಲೈ 23 ರಂದು ಭಾರತವೂ ಸೇರಿದಂತೆ ವಿಶ್ವಾದ್ಯಂತ ಅತ್ಯಂತ ಅದ್ದೂರಿಯಾಗಿ ತೆರೆ ಕಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com