ಶುಭಾ ಪೂಂಜಾ ವೈವಾಹಿಕ ಜೀವನದಲ್ಲಿ ಬಿರುಗಾಳಿ: ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಚೇದನಕ್ಕಾಗಿ ಅರ್ಜಿ!

ವಿಚ್ಚೇದನ ಕೋರಿ ನಟಿ ಶುಭಾ ಪುಂಜಾ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ದಂಪತಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
Shubha poonja and samanth billava
ಶುಭಾ ಪೂಂಜಾ ಮತ್ತು ಸಮಂತ್ ಬಿಲ್ಲವ
Updated on

ಬೆಂಗಳೂರು: ಮೊಗ್ಗಿನ ಮನಸ್ಸಿನ ನಟಿ ಶುಭಾ ಪೂಂಜಾ ಮದುವೆಯಾದ ನಾಲ್ಕನೇ ವರ್ಷಕ್ಕೆ ವಿಚ್ಚೇದನಕ್ಕಾಗಿ ನಟಿ ಶುಭಾ ಪೂಂಜಾ ಕೋರ್ಟ್ ಮೆಟ್ಟಿಲೇರಿದ್ದಾರೆ.

ವಿಚ್ಚೇದನ ಕೋರಿ ನಟಿ ಶುಭಾ ಪುಂಜಾ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ದಂಪತಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಉದ್ಯಮಿ ಸುಮಂತ್​ ಬಿಲ್ಲವ ಎಂಬವರನ್ನ ಶುಭಾ ಪೂಂಜಾ ಮದುವೆಯಾಗಿದ್ದರು.

2022 ಜನವರಿಯಲ್ಲಿ ಶುಭಾ ಪುಂಜಾ ಮತ್ತು ಸುಮಂತ್​ ಬಿಲ್ಲವ ಮದುವೆ ಇಬ್ಬರ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆದಿತ್ತು. ಮದುವೆ ಬಳಿಕ ಪತಿ ಸಮಂತ್ ಜೊತೆ ಶುಭಾ ಪೂಂಜಾ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು.

ಮೊಗ್ಗಿನ ಮನಸು, ಚಂಡ, ಸ್ಲಂ ಬಾಲಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಶುಭಾ ಪೂಂಜಾ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com