Slum Dog: 33 Temple Road ನಲ್ಲಿ ಖಳನಟನಾಗಿ ಅಬ್ಬರ, ವಿಜಯ್ ಸೇತುಪತಿ ಬಗ್ಗೆ ದುನಿಯಾ ವಿಜಯ್ ಹೇಳಿದ್ದೇನು?

ಕಣ್ಣು ಕಾಣದ ಭಿಕ್ಷುಕನ ರೀತಿ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದಾರೆ. ವಿಜಯ್ ಸೇತುಪತಿ ಎದುರು ಕನ್ನಡದ ಸಲಗ ದುನಿಯಾ ವಿಜಯ್ ಕುಮಾರ್ ಅಬ್ಬರಿಸಿದ್ದಾರೆ. ಖಡಕ್ ಖಳನಾಯಕನಾಗಿ ಅವರು ಕಾಣಿಸಿಕೊಂಡಿದ್ದಾರೆ.
ವಿಜಯ್ ಸೇತುಪತಿ, ದುನಿಯಾ ವಿಜಯ್
ವಿಜಯ್ ಸೇತುಪತಿ, ದುನಿಯಾ ವಿಜಯ್
Updated on

Slum Dog: 33 Temple Road ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ವಿಭಿನ್ನ ಆಕ್ಷನ್, ದೊಡ್ಡ ತಾರಾಗಣ, ಸಂಘರ್ಷದಿಂದ ಕುದಿಯುವ ಜಗತ್ತು ಸೇರಿದಂತೆ ಪುರಿ ಜಗನ್ನಾಥ್ ಅವರ ಸಿನಿಮಾಗಳಲ್ಲಿ ಇರುವ ಎಲ್ಲಾ ಅಂಶಗಳು ಚಿತ್ರದಲ್ಲಿದೆ.

ಆದರೆ ಪಂಚ್‌ಗಳು, ಸಾಹಸ ದೃಶ್ಯಗಳನ್ನು ಮೀರಿದ ಪ್ರಮುಖ ಅಂಶವೆಂದರೆ ದುನಿಯಾ ವಿಜಯ್ ಎಂದೇ ಖ್ಯಾತರಾಗಿರುವ ದುನಿಯಾ ವಿಜಯ್ ಹಾಗೂ ವಿಜಯ್ ಸೇತುಪತಿ ನಡುವಿನ ಮುಖಾಮುಖಿಯಾಗಿದೆ. ಕಣ್ಣು ಕಾಣದ ಭಿಕ್ಷುಕನ ರೀತಿ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದಾರೆ. ವಿಜಯ್ ಸೇತುಪತಿ ಎದುರು ಕನ್ನಡದ ಸಲಗ ದುನಿಯಾ ವಿಜಯ್ ಕುಮಾರ್ ಅಬ್ಬರಿಸಿದ್ದಾರೆ. ಖಡಕ್ ಖಳನಾಯಕನಾಗಿ ಅವರು ಕಾಣಿಸಿಕೊಂಡಿದ್ದಾರೆ.

ಕುತೂಹಲಕಾರಿ ಸಂಗತಿ ಏನೆಂದರೆ, ಇಬ್ಬರು ನಟರ ನಡುವಿನ ಬಾಂಧವ್ಯ ಸಿನಿಮಾವನ್ನು ಮೀರಿ ಬೆಳೆದಿದೆ. ವಿಜಯ್ ಸೇತುಪತಿಗೆ ದುನಿಯಾ ವಿಜಯ್ ಜೊತೆಗೆ ಕೆಲಸ ಮಾಡುವುದು ಎಂದರೆ ಅವರು ವರ್ಷಗಳಿಂದ ಪರಿಚಿತ ನಟನೊಂದಿಗೆ ಕೆಲಸ ಮಾಡಿದ ಹಾಗೆ ಅನಿಸುತ್ತದೆಯಂತೆ. ಅವರು ತುಂಬಾ ಪ್ರತಿಭಾನ್ವಿತರಾಗಿದ್ದು, ಸೆಟ್‌ನಲ್ಲಿ ತುಂಬಾ ಶಿಸ್ತುಬದ್ಧರಾಗಿರುತ್ತಾರೆ. ಅವರೊಂದಿಗೆ ಕೆಲಸ ಮಾಡುವುದು ಸಂತೋಷದ ಅನುಭವವಾಗಿತ್ತು. ಪ್ರತಿ ಶಾಟ್‌ನಲ್ಲಿ ನಿರ್ದೇಶಕರು ಏನು ಬಯಸುತ್ತಾರೆ ಎಂಬುದಕ್ಕೆ ತಕ್ಕಂತೆ ಸಿದ್ಧರಾಗಿ ಬರುತ್ತಾರೆ ಎಂದು ವಿಜಯ್ ಸೇತುಪತಿ ಹೇಳುತ್ತಾರೆ.

ನಟನೆಯಿಂದ ಸಲಗ, ಭೀಮಾ ಮತ್ತು ಅವರ ಮುಂದಿನ ಸಿಟಿ ಲೈಟ್ಸ್‌ನಂತಹ ಸಿನಿಮಾ ನಿರ್ದೇಶನವರೆಗೂ ಬೆಳೆದು ನಿಂತಿರುವ ವಿಜಯ್ ಕುಮಾರ್, ವಿಜಯ್ ಸೇತುಪತಿ ಜೊತೆಗೆ ನಟಿಸುವ ದೊಡ್ಡ ಅವಕಾಶ ಸಿಕ್ಕಿದೆ ಎಂದು ಒಪ್ಪಿಕೊಳ್ಳುತ್ತಾರೆ.

ನಾನು ವಿಜಯ್ ಸೇತುಪತಿಯನ್ನು ಹತ್ತಿರದಿಂದ ಗಮನಿಸಲು ಬಯಸಿದ್ದೆ. ಅವರು ತುಂಬಾ ಶುದ್ಧ ಹೃದಯದ ವ್ಯಕ್ತಿ. ನಟನ ಹಿಂದಿನ ಮನುಷ್ಯನನ್ನು ತಿಳಿದುಕೊಳ್ಳಲು ನನಗೆ ಕುತೂಹಲವಿತ್ತು. ಹಾಗಾಗೀ ಅವರ ಬಗ್ಗೆ ತಿಳಿಯಲು ಇಷ್ಟವಾಯಿತು. ನಾನು ಅವರನ್ನು ಚೆನ್ನಾಗಿ ತಿಳಿದುಕೊಂಡ ನಂತರ, ಮೆಚ್ಚಲು ಇನ್ನೂ ಅನೇಕ ಗುಣಗಳಿವೆ ಎಂಬ ಅರಿವಾಯಿತು. ಪಟ್ಟಿ ಉದ್ದವಾಗಿದೆ" ಎಂದು ವಿಜಯ್ ಕುಮಾರ್ ಹೇಳುತ್ತಾರೆ.

ವಿಜಯ್ ಸೇತುಪತಿ, ದುನಿಯಾ ವಿಜಯ್
ದುನಿಯಾ ವಿಜಯ್, ರಚಿತಾ ರಾಮ್ ನಟನೆಯ 'ಲ್ಯಾಂಡ್‌ಲಾರ್ಡ್' ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಸಿದ್ದರಾಮಯ್ಯ!

ನನ್ನನ್ನು ಗುರುತಿಸಿ, ಚೆನ್ನಾಗಿ ಬಳಸಿಕೊಂಡ ಕ್ರೆಡಿಟ್ ನ್ನು ಪುರಿ ಜಗನ್ನಾಥ್ ಅವರಿಗೆ ನೀಡಿದ ವಿಜಯ್ ಕುಮಾರ್, ಈ ಚಿತ್ರದಲ್ಲಿ ಸಾಕಷ್ಟು ಸಾಹಸಮಯ ದೃಶ್ಯಗಳಿವೆ .ಆಕ್ಷನ್ ನನ್ನನ್ನು ಆಕರ್ಷಿಸಿತು. ಪ್ರತಿಯೊಬ್ಬ ನಟನೂ ಪುರಿ ಜಗನ್ನಾಥ್ ಅವರಂತಹ ನಿರ್ದೇಶಕರೊಂದಿಗೆ ಕೆಲಸ ಮಾಡಲು ಬಯಸುತ್ತಾನೆ. ಅಂತಹ ನಟರಲ್ಲಿ ನಾನು ಒಬ್ಬ. ಅವರ ಕೆಲಸದ ಅಭಿಮಾನಿಯಾಗಿ, ಈ ಚಿತ್ರ ಸೂಪರ್ ಹಿಟ್ ಆಗಬೇಕೆಂದು ಬಯಸುತ್ತೇನೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com