Dhurandhar The Revenge trailer: ಪಾಕ್‌ನ ಭವಿಷ್ಯವನ್ನು ಭಾರತ ಬರೆಯಲಿದೆ! ಏನಿದು ರಣವೀರ್ ಸಿಂಗ್ ಶಪಥ?

ಪಾಕಿಸ್ತಾನದ ಭವಿಷ್ಯವನ್ನು ಭಾರತ ಬರೆಯಲಿದೆ ಎಂದು ರಣವೀರ್ ಸಿಂಗ್ ಶಪಥ ಪ್ರೇಕ್ಷಕರಿಗೆ ಇಷ್ಟವಾಗಲಿದೆ. 3 ನಿಮಿಷ 26 ಸೆಕೆಂಡ್ ಇರುವ ಟ್ರೇಲರ್ ನೋಡಿದ ಪ್ರೇಕ್ಷಕರಿಗೆ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.
Ranveersingh
ರಣವೀರ್ ಸಿಂಗ್
Updated on

ಆದಿತ್ಯ ಧರ್ ನಿರ್ದೇಶನ, ರಣವೀರ್ ಸಿಂಗ್ ನಟನೆಯ ಬಹು ನಿರೀಕ್ಷಿತ ಧುರಂಧರ್: ದಿ ರಿವೆಂಜ್' ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಜಿಯೊ ಸ್ಟುಡಿಯೋಸ್ ಯು ಟ್ಯೂಬ್ ಚಾನೆಲ್ ನಲ್ಲಿ ಟ್ರೇಲರ್ ಬಿಡುಗಡೆಯಾಗಿದ್ದು, ಅದರಲ್ಲಿ ರಣವೀರ್ ಸಿಂಗ್ ಅವರು ರಕ್ತಸಿಕ್ತ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಪಾಕಿಸ್ತಾನದ ಭವಿಷ್ಯವನ್ನು ಭಾರತ ಬರೆಯಲಿದೆ ಎಂದು ರಣವೀರ್ ಸಿಂಗ್ ಶಪಥ ಪ್ರೇಕ್ಷಕರಿಗೆ ಇಷ್ಟವಾಗಲಿದೆ. 3 ನಿಮಿಷ 26 ಸೆಕೆಂಡ್ ಇರುವ ಟ್ರೇಲರ್ ನೋಡಿದ ಪ್ರೇಕ್ಷಕರಿಗೆ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

ಈ ಎರಡನೇ ಭಾಗದ ಟ್ರೈಲರ್‌ನಲ್ಲಿ ರಣವೀರ್ ಸಿಂಗ್ ಮತ್ತೆ ಜಸ್ಕಿರತ್ ಸಿಂಗ್ ರಂಗಿ ಪಾತ್ರದಲ್ಲಿ ಮಿಂಚಿದ್ದಾರೆ. ಮೊದಲ ಭಾಗದಲ್ಲಿ ಅಕ್ಷಯ್ ಖನ್ನಾ ಅಭಿನಯದ ರೆಹಮಾನ್ ಡಕಾಯಿತನ ಗ್ಯಾಂಗ್‌ಗೆ ಭಾರತೀಯ ಗೂಢಚಾರನಾಗಿ ನುಗ್ಗಿದ್ದ ಜಸ್ಕಿರತ್, ಈಗ ಅದೇ ಗ್ಯಾಂಗ್‌ನಲ್ಲಿ 'ಲ್ಯಾರಿಯ ಬಾದ್‌ಶಾ' ಆಗಿ ಬೆಳೆಯುವ ಹಂತವನ್ನು ಟ್ರೈಲರ್‌ನಲ್ಲಿ ತೋರಿಸಲಾಗಿದೆ.

ಬಾಂಬೆ ರಾಕರ್ಸ್‌ನ ಖ್ಯಾತ 'ಅರಿ ಅರಿ' ಹಾಡಿನ ರಿಮಿಕ್ಸ್ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಟ್ರೈಲರ್‌ನಲ್ಲಿ, ಪಾಕಿಸ್ತಾನದ ಭವಿಷ್ಯವನ್ನು ಇನ್ಮುಂದೆ ಭಾರತವೇ ನಿರ್ಧರಿಸಲಿದೆ ಎಂಬ ರಣವೀರ್ ಸಿಂಗ್ ಶಪಥಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಈಗಾಗಲೇ ವಿದೇಶದಲ್ಲಿ ಧುರಂಧರ್ 2 ಸಿನಿಮಾದ ಬುಕ್ಕಿಂಗ್ ಆರಂಭವಾಗಿದೆ. ಈ ಬಾರಿ ಧುರಂಧರ್ 2 ಕೇವಲ ಹಿಂದಿ ಮಾತ್ರವಲ್ಲದೇ ಕನ್ನಡ,ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಏಕಕಾಲಕ್ಕೆ ತೆರೆ ಕಾಣುತ್ತಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ತೆರೆಕಂಡಿದ್ದ ಮೊದಲ ಭಾಗವು ಜಾಗತಿಕ ಮಟ್ಟದಲ್ಲಿ 1300 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡಿ, ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿತ್ತು. ಈಗ ಅದರ ಸೀಕ್ವೆಲ್ ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com