The real reason for Rashmika Mandanna-Rakshit Shetty split revealed?
ರಶ್ಮಿಕಾ ಮಂದಣ್ಣ-ಸುಮನ್ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ (ಸಂಗ್ರಹ ಚಿತ್ರ)

'ರಕ್ಷಿತ್ ಶೆಟ್ಟಿ-ರಶ್ಮಿಕಾ ನಿಶ್ಚಿತಾರ್ಥ ಮುರಿದುಬೀಳಲು ಇದೇ ಕಾರಣ': ತಾಯಿ ಸುಮನ್ ಮಂದಣ್ಣರದ್ದು ಎನ್ನಲಾದ ಆಡಿಯೋ ವೈರಲ್!

ತಾರಾ ಜೋಡಿ ಅದ್ದೂರಿಯಾಗಿ ಮದುವೆಯಾದ ಬೆನ್ನಲ್ಲೇ, ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್‌ ಮಂದಣ್ಣ ಅವರದ್ದು ಎನ್ನಲಾಗುತ್ತಿರುವ ಆಡಿಯೋ ಕ್ಲಿಪ್‌ ವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್‌ ಆಗಿದೆ.
Published on

ನ್ಯಾಷನಲ್‌ ಕ್ರಶ್ ಎಂದೇ ಖ್ಯಾತಿ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್‌ ದೇವರಕೊಂಡ ಅವರು ಇತ್ತೀಚಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ.

ತಾರಾ ಜೋಡಿ ಅದ್ದೂರಿಯಾಗಿ ಮದುವೆಯಾದ ಬೆನ್ನಲ್ಲೇ, ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್‌ ಮಂದಣ್ಣ ಅವರದ್ದು ಎನ್ನಲಾಗುತ್ತಿರುವ ಆಡಿಯೋ ಕ್ಲಿಪ್‌ ವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್‌ ಆಗಿದೆ.

ವೈರಲ್ ಆಗುತ್ತಿರುವ ಆಡಿಯೋದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ಮುರಿದು ಬಿದ್ದಿದ್ದು ಯಾಕೆ ಅನ್ನೋದಕ್ಕೆ ಕಾರಣಗಳನ್ನು ಕೊಟ್ಟಿದ್ದಾರೆ. ಹೀಗಾಗಿ ಆಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಸಂಚಲನ ಮೂಡಿಸಿದೆ.

The real reason for Rashmika Mandanna-Rakshit Shetty split revealed?
'ಪ್ರೀತಿಯನ್ನು ಹೇಗೆ ಕಂಡುಕೊಳ್ಳಬೇಕು' ಎಂದು ವ್ಯಾಖ್ಯಾನ ನೀಡಿದ ರಶ್ಮಿಕಾ ಮಂದಣ್ಣ: ಅಭಿಮಾನಿಯ ಪೋಸ್ಚ್ ಗೆ ಭಾವುಕ

ಆಡಿಯೋದಲ್ಲಿ ಏನಿದೆ?

“ಒಳಗಡೆ ತುಂಬಾ ನಡೆದಿದೆ. ನಾನು ಸ್ಟ್ರಾಂಗ್‌ ಆಗಿರೋದಕ್ಕೆ ಬಚಾವ್.‌ ನಮ್ಮ ಹುಡುಗಿ ಹೇಗೆ ಬೆಳಿತಿದ್ದಾಳೆ ಅಂತ ಖುಷಿ ಪಡಬೇಕು. ಏನು ವಿಷ್ಯ ಇದ್ರು ಇವನು ತಲೆ ಹಾಕೋದು ಯಾಕೆ. ನಾನು ಯಾವ ಗ್ಯಾರೆಂಟಿಯಲ್ಲಿ ಮದುವೆ ಮಾಡಿಕೊಡಲಿ ಇವರಿಗೆ? 21 ವರ್ಷದ ಹುಡುಗಿಯನ್ನ 35 ವರ್ಷ ಹುಡುಗನಿಗೆ ಮದುವೆ ಮಾಡಿ ಕೊಡಲು ಒಪ್ಪಿದ್ದೆ ನನ್ನ ದೊಡ್ಡತನ ಎಂದು ಸುಮನ್‌ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಅಚ್ಚರಿ ಮೂಡಿಸುತ್ತಿದೆ.

ಆವತ್ತು ಒಂದಿನ ಮಿಡ್‌ ನೈಟ್‌ 2 ಗಂಟೆಗೆ ರಶ್ಮಿಕಾ ಸಿನಿಮಾ ಕುರಿತ ಇಂಟರ್ವ್ಯೂ ಮುಗಿದಿದೆ. ನೀನು ಕಾರು ತಗೊಂಡು ಬಾ ನನ್ನನ್ನ ನೋಡೋಕೆ ಅಂತ ಹೇಳ್ತಿದ್ದರು. ಇವರು ಮನುಷ್ಯರಾ? ಮಧ್ಯ ರಾತ್ರಿ ರೋಡ್‌ನಲ್ಲಿ ನನ್ನ ಮಗಳಿಗೆ ಏನಾದರೂ ತೊಂದರೆಯಾದ್ರೆ ಯಾರು ಹೊಣೆ? ಆಗ ರಶ್ಮಿಕಾ ಹೇಳಿದ್ಲು ನಾನು ಬರೋದಕ್ಕೆ ಆಗಲ್ಲ, ನನಗೆ ಇವತ್ತಿನ ದಿನ ಇಂಟರ್ವ್ಯೂ ತುಂಬಾ ಇಂಪಾರ್ಟೆಂಟ್‌ ಅಂತ” ಎಂದು ಆಡಿಯೋದಲ್ಲಿ ಹೇಳಲಾಗಿದೆ.

ನೀನು ಎಲ್ಲವನ್ನೂ ಬಿಟ್ಟು ಬಂದು ಟ್ವೀಟ್‌ ಮಾಡಬೇಕು, ನೀನು ಇನ್ಮುಂದೆ ಯಾವ ಸಿನಿಮಾನೂ ಮಾಡಲ್ಲ ಅಂತ ಹೇಳ್ಬೇಕು ಅಂತ ರಶ್ಮಿಕಾಗೆ ಹೇಳಿದ್ರು. ಅವರ ಅಮ್ಮ ಬಂದು ನಿನ್ನ ಅಮ್ಮ ನನಗೆ ಸಾರಿ ಕೇಳ್ಬೇಕು ಅಂತ ಹೇಳಿದ್ರು. ಹುಡುಗ ಹುಡುಗಿಯನ್ನ ಒಂದು ಮಾಡೋದಾ? ಅಥವಾ ಅವರನ್ನ ದೂರ ಮಾಡೋದಾ? ಸಂಬಂಧ ಒಡೆದದ್ದು ನನ್ನ ಪುಣ್ಯ, ಅದು ಬೇರೆ ವಿಷಯ” ಎಂದು ರಕ್ಷಿತ್ ಶೆಟ್ಟಿಯ ತಾಯಿ ಬಗ್ಗೆಯೂ ರಶ್ಮಿಕಾ ತಾಯಿ ಆವೇಶದ ಮಾತುಗಳನ್ನಾಡಿದ್ದಾರೆ.

ಈ ಆಡಿಯೋ ಕುರಿತು ಸುಮನ್‌ ಮಂದಣ್ಣ ಅವರು ಸಹ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಶ್ಮಿಕಾ ಆಗಲಿ ಅಥವಾ ರಕ್ಷಿತ್‌ ಆಗಿಲಿ ಯಾರೂ ಏನೂ ಹೇಳಿಲ್ಲ. ಇಂದಿನ ಎಐ ಯುಗದಲ್ಲಿ ಇಂತಹ ಆಡಿಯೋ ಕಾಮನ್‌. ಅಂತ ಕೆಲ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com