ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆಯ್ಕೆ ಮಾಡಿಕೊಂಡದ್ದು ಹನಿಮೂನ್ ಅಲ್ಲ, ಬಡ್ಡಿಮೂನ್: ಏನಿದು ಹೊಸ ಟ್ರೆಂಡ್?

ಸೆಲೆಬ್ರಿಟಿಗಳು ಮದುವೆ ನಂತರ ಹನಿಮೂನ್ ಗೆ ಎಲ್ಲಿಗೆ ಹೋಗುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳಿರುತ್ತದೆ.
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆಯ್ಕೆ ಮಾಡಿಕೊಂಡದ್ದು ಹನಿಮೂನ್ ಅಲ್ಲ, ಬಡ್ಡಿಮೂನ್: ಏನಿದು ಹೊಸ ಟ್ರೆಂಡ್?
Updated on

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅದ್ದೂರಿಯಾಗಿ ಮದುವೆಯಾಗಿ ಒಂದು ತಿಂಗಳು ಕಳೆದಿದೆ. ಈ ಜೋಡಿಗೆ ಸಂಬಂಧಿಸಿದ ಹಲವು ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇವೆ.

ಸೆಲೆಬ್ರಿಟಿಗಳು ಮದುವೆ ನಂತರ ಹನಿಮೂನ್ ಗೆ ಎಲ್ಲಿಗೆ ಹೋಗುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳಿರುತ್ತದೆ. ಇಲ್ಲಿ ರಶ್ಮಿಕಾ-ವಿಜಯ್ ಜೋಡಿ ಹನಿಮೂನ್‌ಗೆ ಬದಲಾಗಿ ‘ಬಡ್ಡಿಮೂನ್’(Buddymoon) ಆಯ್ಕೆಮಾಡಿಕೊಂಡು ಸುದ್ದಿಯಾಗಿದ್ದಾರೆ.

ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆಯ್ಕೆ ಮಾಡಿಕೊಂಡದ್ದು ಹನಿಮೂನ್ ಅಲ್ಲ, ಬಡ್ಡಿಮೂನ್: ಏನಿದು ಹೊಸ ಟ್ರೆಂಡ್?
The Girlfriend ಚಿತ್ರಕ್ಕೆ ರಶ್ಮಿಕಾ ಮಂದಣ್ಣಗೆ ಅತ್ಯುತ್ತಮ ನಟಿ ಪ್ರಶಸ್ತಿ: ವಿಜಯ್ ದೇವರಕೊಂಡ ಸಂತಸ

ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಬಡ್ಡಿಮೂನ್ ವೈರಲ್, ಏನಿದು ಬಡ್ಡಿಮೂನ್

ಹೊಸದಾಗಿ ಮದುವೆಯಾದ ಈ ತಾರಾ ಜೋಡಿ ತಮ್ಮ ಹನಿಮೂನ್‌ಗಾಗಿ ಸಾಂಪ್ರದಾಯಿಕ ವಿಧಾನವನ್ನು ಅನುಸರಿಸಲಿಲ್ಲ. ಸಾಮಾನ್ಯವಾಗಿ ಜೋಡಿ ಇಬ್ಬರೂ ಒಟ್ಟಿಗೆ ಕುಟುಂಬ ಮತ್ತು ಸ್ನೇಹಿತರಿಂದ ದೂರವಾಗಿ ಸುಂದರ ಸ್ಥಳಕ್ಕೆ ತೆರಳಿ ಖಾಸಗಿ ಸಮಯ ಕಳೆಯುವ ಪದ್ಧತಿಯಿಂದ ದೂರವುಳಿದಿದ್ದಾರೆ. ಬದಲಿಗೆ, ತಮ್ಮ ಹತ್ತಿರದ ಸ್ನೇಹಿತರೊಂದಿಗೆ ಒಟ್ಟಿಗೆ ಖುಷಿಯ ಪ್ರವಾಸವನ್ನು ಆಯ್ಕೆ ಮಾಡಿಕೊಂಡಿದ್ದಾರೆ, ಇದನ್ನೇ ‘ಬಡ್ಡಿಮೂನ್’ ಎಂದು ಕರೆಯಲಾಗುತ್ತದೆ.

ರಾಜಸ್ಥಾನದ ಉದಯಪುರ, ಹೈದರಾಬಾದ್‌ನಲ್ಲಿ ಒಂದು ವಾರದ ಅದ್ದೂರಿ ಮದುವೆ ಸಂಭ್ರಮಗಳನ್ನು ಮುಗಿಸಿದ ನಂತರ, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಥೈಲ್ಯಾಂಡ್‌ನ ಕೊಹ್ ಸಮುಯಿಗೆ ಬಡ್ಡಿಮೂನ್‌ಗೆ ತೆರಳಿದರು. ನೂತನ ದಂಪತಿ ಒಟ್ಟಿಗೆ ಅವರ ಆಪ್ತ ಸ್ನೇಹಿತರ ಗುಂಪು ಸಹ ಜೊತೆಯಾಗಿ ಹೋಗಿತ್ತು. ಅಲ್ಲಿ ಸುಂದರ ಕ್ಷಣಗಳನ್ನು ಕಳೆದಿರುವ ಫೋಟೋ-ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಮದುವೆ ಸಂಭ್ರಮದ ನಂತರ, ನಾವು ಕೆಲವು ದಿನಗಳು ವಿಶ್ರಾಂತಿ ಪಡೆಯಬೇಕೆಂದು ಬಯಸಿದ್ದೆವು. ಶಾಂತ ಮುಂಜಾನೆ, ಮಧ್ಯಾಹ್ನದ ಬಿಸಿಲಿನಲ್ಲಿ ಈಜುಕೊಳದ ಸಮೀಪ ಸುಂದರ ಕ್ಷಣಗಳನ್ನು ಕಳೆಯುವುದು, ಸಂಜೆ ಟೇಬಲ್ ಟೆನ್ನಿಸ್, ಪೂಲ್ ಆಟಗಳು ಹಾಗೂ ದೀರ್ಘ ನಗುವಿನೊಂದಿಗೆ ಸಿನಿಮಾ ರಾತ್ರಿಯನ್ನು ಅದ್ಭುತವಾಗಿ ಕಳೆದಿದ್ದೇವೆ ಎಂದು ರಶ್ಮಿಕಾ ಮಂದಣ್ಣ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದಿದ್ದಾರೆ. ವಿಡಿಯೋದಲ್ಲಿ ರಶ್ಮಿಕಾ ಮತ್ತು ವಿಜಯ್ ಅವರು ತಮ್ಮ ಸ್ನೇಹಿತರೊಂದಿಗೆ ಖುಷಿಯ ಕ್ಷಣಗಳನ್ನು ಹಂಚಿಕೊಳ್ಳುತ್ತಿರುವುದು ಕಂಡಿದೆ.

ಮದುವೆ ಕಾರ್ಯಕ್ರಮಗಳನ್ನು ಮುಗಿಸಿದ ಬಳಿಕ, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತಮ್ಮ ಸಿನಿಮಾ ಶೂಟಿಂಗ್ ಗೆ ಮರಳಿದ್ದಾರೆ. ಈ ಹೊಸ ಜೋಡಿ ಶೀಘ್ರದಲ್ಲೇ ‘ರಣಬಲಿ’ ಎಂಬ ಐತಿಹಾಸಿಕ ಆಕ್ಷನ್ ಡ್ರಾಮಾ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ಇದು ಪ್ರಸ್ತುತ ನಿರ್ಮಾಣ ಹಂತದಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com