ಸಿಂಪಲ್ ಸುನಿ ನಿರ್ದೇಶನದ 'ಮೋಡ ಕವಿದ ವಾತಾವರಣ' ಚಿತ್ರವು ಬಿಡುಗಡೆಗೆ ಸಿದ್ದವಾಗಿದ್ದು, ಜೂನ್ 26ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಸುನಿ ಅವರ ಗರಡಿಯಲ್ಲಿ ಪಳಗಿರುವ ಯುವ ಪ್ರತಿಭೆ ಶೀಲಮ್ ನಾಯಕನಾಗಿ ಸ್ಯಾಂಡಲ್‌ವುಡ್ ಪ್ರವೇಶಿಸುತ್ತಿದ್ದಾರೆ. ಚಿತ್ರ ಈಗಾಗಲೇ ಟೈಟಲ್‌ನಿಂದಲೇ ತೀವ್ರ ಕುತೂಹಲ ಮೂಡಿಸಿದೆ.
ಈವರೆಗೂ ಪೋಷಕ ಪಾತ್ರಗಳಲ್ಲಿ ಮಿಂಚಿದ್ದ ನಟ ಶೀಲಮ್ ಇದೀಗ ನಾಯಕನಾಗಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅಶ್ವಿನ್ ವಿನ್ಯಾಸಗೊಳಿಸಿದ ಶೈಲೀಕೃತ ಪೋಸ್ಟರ್ ಮೂಲಕ ಬಿಡುಗಡೆ ದಿನಾಂಕವನ್ನು ಘೋಷಿಸಲಾಯಿತು.
ಇದೊಂದು ಸೈನ್ಸ್ ಫಿಕ್ಷನ್ ಕಥೆಯನ್ನು ಒಳಗೊಂಡಿದ್ದು, ಕನ್ನಡದಲ್ಲಿ ಈ ಪ್ರಕಾರದ ಚಿತ್ರಗಳು ತುಂಬಾ ಕಡಿಮೆ. ಹೀಗಾಗಿ ಸುನಿ ಈ ಚಿತ್ರದ ಮೂಲಕ ಬೆಳ್ಳಿ ತೆರೆಯಲಿ ಮಿಂಚಲು ರೆಡಿಯಾಗಿದ್ದಾರೆ.
ಮೋಡ ಕವಿದ ವಾತಾವರಣ ಚಿತ್ರವನ್ನು ರಾಮ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಮತ್ತು ಗೋವಾ ರಮೇಶ್ ನಿರ್ಮಿಸಿದ್ದಾರೆ. ಈ ತಂಡವು ಈ ಹಿಂದೆ ವಿನಯ್ ರಾಜ್‌ಕುಮಾರ್ ನಟನೆಯ, ಸುನಿ ನಿರ್ದೇಶನದ ಒಂದು ಸರಳ ಪ್ರೇಮ ಕಥೆಯೊಂದಿಗೆ ಸಂಬಂಧ ಹೊಂದಿದೆ.
ಚಿತ್ರದ ತಾಂತ್ರಿಕ ತಂಡದಲ್ಲಿ ಛಾಯಾಗ್ರಾಹಕ ಸಂತೋಷ್ ರೈ ಪತಾಜೆ, ಜೂಡಾ ಸ್ಯಾಂಡಿ ಮತ್ತು ಜೇಡ್ ಸಂಗೀತ ಸಂಯೋಜಿಸಿದ್ದಾರೆ. ಆದಿತ್ಯ ಕಶ್ಯಪ್ ಸಂಕಲನವನ್ನು ನಿರ್ವಹಿಸುತ್ತಾರೆ. ಸಂಜಿತ್ ಹೆಗ್ಡೆ ಹಾಡಿರುವ 'ನನ್ನೆದೆಯ ಹಾಡೊಂದನು' ಎಂಬ ಹಾಡನ್ನು ರಿಲೀಸ್ ಮಾಡಲಾಗಿದ್ದು, ಈಗಾಗಲೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
Advertisement