ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ 'ದೃಶ್ಯಂ 3': ಒಂದೇ ದಿನದಲ್ಲಿ 43 ಕೋಟಿ ರೂ ಗಳಿಕೆ

ಜೀತು ಜೋಸೆಫ್ ನಿರ್ದೇಶನದ ಈ ಚಿತ್ರವು ಮೇ 21 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.
Mohanlal-starrer 'Drishyam 3' earns over Rs 40 crore at box office
ಚಿತ್ರದ ಸ್ಟಿಲ್
Updated on

ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ನಟಿಸಿದ ದೃಶ್ಯಂ 3 ಸಿನಿಮಾ ಗುರುವಾರ ಬಿಡುಗಡೆಯಾಗಿದ್ದು, ಒಂದೇ ದಿನದಲ್ಲಿ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 43.37 ಕೋಟಿ ರೂ. ಗಳಿಸಿದೆ.

ಜೀತು ಜೋಸೆಫ್ ನಿರ್ದೇಶನದ ಈ ಚಿತ್ರವು ಮೇ 21 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕೇರಳ ಮಾತ್ರವಲ್ಲದೆ ಗಲ್ಫ್ ರಾಷ್ಟ್ರಗಳಲ್ಲೂ ಈ ಸಿನಿಮಾ ಭರ್ಜರಿ ಕ್ರೇಜ್ ಸೃಷ್ಟಿಸಿದೆ.

'ದೃಶ್ಯಂ 3' ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 18.37 ಕೋಟಿ ರೂ. ಗಳಿಸಿದ್ದು, 15.85 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.

Mohanlal-starrer 'Drishyam 3' earns over Rs 40 crore at box office
1400 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಚಿತ್ರ ಗಳಿಸಿದ್ದು ಕೇವಲ 6 ಕೋಟಿ; ಇದು ವಿಶ್ವದ ಅತಿದೊಡ್ಡ ಫ್ಲಾಪ್ ಚಿತ್ರ!

ಟ್ರೇಡ್ ಟ್ರ್ಯಾಕಿಂಗ್ ವೆಬ್‌ಸೈಟ್ ಸ್ಯಾಕ್ನಿಲ್ಕ್ ಪ್ರಕಾರ, ಈ ಚಿತ್ರದ ವಿದೇಶಗಳಲ್ಲಿ 25 ಕೋಟಿ ರೂ. ಗಳಿಸಿದೆ.

ಮೋಹನ್ ಲಾಲ್ ನಟಿಸಿದ 2013 ರ ಮಲಯಾಳಂ ದೃಶ್ಯಂ ಮತ್ತು 2022 ರಲ್ಲಿ ಬಿಡುಗಡೆಯಾದ ದೃಶ್ಯಂ 2ನ ಮುಂದುವರಿದ ಭಾಗ ಇದಾಗಿದೆ.

ದೃಶ್ಯಂ ಚಿತ್ರದ ಯಶಸ್ಸು ಮತ್ತು ಮೆಚ್ಚುಗೆಯಿಂದಾಗಿ ಈ ಸಿನಿಮಾ ಹಿಂದಿ, ತಮಿಳು, ತೆಲುಗು, ಕನ್ನಡ, ಚೈನೀಸ್(ಮ್ಯಾಂಡರಿನ್) ಮತ್ತು ಸಿಂಹಳೀಯರು ಸೇರಿದಂತೆ ಹಲವಾರು ಭಾಷೆಗಳಲ್ಲಿ ರಿಮೇಕ್ ಮಾಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com