'ಐಶ್ವರ್ಯ ರೈ ನಿಮ್ಮನ್ನು ಮೆಚ್ಚಿಸಲು ಕೇನ್ಸ್​​ಗೆ ಹೋಗಿಲ್ಲ': ಫ್ಯಾಟ್ ಆಂಟಿ ಎಂದ ಟ್ರೋಲರ್ಸ್ ವಿರುದ್ಧ ಕಂಗನಾ ಕಿಡಿ

"ಅವರು ನಿಮ್ಮನ್ನು ಮೆಚ್ಚಿಸಲು ಇಲ್ಲಿಗೆ ಬಂದಿಲ್ಲ. ಅವರು ಅದ್ಭುತ. ನೀವು ವಯಸ್ಸಾದ ಮಹಿಳೆಯರನ್ನು ರೆಡ್ ಕಾರ್ಪೆಟ್‌ಗಳ ಮೇಲೆ ನೋಡುವ ಅಭ್ಯಾಸವಿಲ್ಲದಿದ್ದರೆ, ಈಗಲೇ ಅದಕ್ಕೆ ಒಗ್ಗಿಕೊಳ್ಳಿ. ಧನ್ಯವಾದಗಳು" ಎಂದು ಕಂಗನಾ ಕಿಡಿ ಕಾರಿದ್ದಾರೆ.
'She Is Not Here To Please You': Kangana Ranaut's Reply To Trolls Who Slammed Aishwarya Rai's Cannes Look
ಐಶ್ವರ್ಯ ರೈ - ಕಂಗನಾ
Updated on

ತಮ್ಮ ನೇರ ಮಾತಿನ ಮೂಲಕ ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಯಿಂದ ಸುದ್ದು ಮಾಡುವ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್ ಅವರು, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರ ಕೇನ್ಸ್ ಲುಕ್ ಅನ್ನು ಟೀಕಿಸಿದ ಟ್ರೋಲ್‌ಗಳಿಗೆ ತೀಕ್ಷಣವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಈ ವರ್ಷ ಅಮಿತ್ ಅಗರ್ವಾಲ್ ಗೌನ್‌ನಲ್ಲಿ ಐಶ್ವರ್ಯಾ ರೈ ಅವರ ಮೊದಲ ಕ್ಯಾನ್ಸ್ ಲುಕ್ ಅನ್ನು ಹಂಚಿಕೊಂಡ ಕಂಗನಾ, 'ಐಶ್ವರ್ಯಾ ರೈ ಅವರು ನಿಮ್ಮನ್ನು ಮೆಚ್ಚಿಸಲು ಅಲ್ಲಿಗೆ ಹೋಗಿಲ್ಲ. ಅವರು ವಿಶ್ವದ ಅತ್ಯಂತ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ವಿಶಿಷ್ಟ ಶೈಲಿ ಇರುತ್ತದೆ ಮತ್ತು ಅದನ್ನು ಗೌರವಿಸಬೇಕು" ಎಂದು ಬರೆದಿದ್ದಾರೆ.

"ಅವರು ನಿಮ್ಮನ್ನು ಮೆಚ್ಚಿಸಲು ಇಲ್ಲಿಗೆ ಬಂದಿಲ್ಲ. ಅವರು ಅದ್ಭುತ. ನೀವು ವಯಸ್ಸಾದ ಮಹಿಳೆಯರನ್ನು ರೆಡ್ ಕಾರ್ಪೆಟ್‌ಗಳ ಮೇಲೆ ನೋಡುವ ಅಭ್ಯಾಸವಿಲ್ಲದಿದ್ದರೆ, ಈಗಲೇ ಅದಕ್ಕೆ ಒಗ್ಗಿಕೊಳ್ಳಿ. ಧನ್ಯವಾದಗಳು" ಎಂದು ಕಂಗನಾ ಕಿಡಿ ಕಾರಿದ್ದಾರೆ.

'She Is Not Here To Please You': Kangana Ranaut's Reply To Trolls Who Slammed Aishwarya Rai's Cannes Look
ಕಂಗನಾ ರಣಾವತ್ ಮಂಗಳಸೂತ್ರ ಧರಿಸಿದ ಫೋಟೋ ವೈರಲ್: 'ರಹಸ್ಯ' ಮದುವೆ ಬಗ್ಗೆ ಬಾಲಿವುಡ್ ನಟಿ ಹೇಳಿದ್ದೇನು?

'ಫ್ಯಾಷನ್ ಮತ್ತು ಸ್ಟೈಲ್ ಎಂಬುದು ಸ್ವಯಂ ಅಭಿವ್ಯಕ್ತಿ. ಅದು ಜೀವನದ ಮೇಲಿನ ಒಬ್ಬರ ಸ್ವಂತ ವ್ಯಾಖ್ಯಾನ ಮತ್ತು ಅವರ ಮನೋಭಾವ ಆಗಿರುತ್ತದೆ. ಐಶ್ವರ್ಯಾ ಅದ್ಭುತವಾಗಿ ಕಾಣಿಸುತ್ತಿದ್ದಾರೆ ಅವರನ್ನು ಬೇರೆ ರೀತಿಯಲ್ಲಿ ನೋಡಲು ಬಯಸುವವರು, ಮೊದಲು ನಿಮ್ಮಲ್ಲಿ ಏನಿದೆ ಎಂದು ನೀವೇಕೆ ತೋರಿಸಬಾರದು?? ಎಂದು ಪ್ರಶ್ನಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡುವವರು ಮೊದಲು ಜಾಗತಿಕ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವುದು ಎಂದರೆ ಏನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಐಶ್ವರ್ಯಾ ಅವರು ದಶಕಗಳಿಂದ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಹೆಸರನ್ನು ಹೆಮ್ಮೆಯಿಂದ ಬೆಳಗಿಸುತ್ತಿದ್ದಾರೆ. ಇಂತಹ ನಟಿಯ ಉಡುಪಿನ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವುದು ಸರಿಯಲ್ಲ' ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com