ನಾನು ರಸ್ತೆಯಲ್ಲಿ ನಿಂತು ಅಕ್ಷರಶಃ ಕಿರುಚಾಡುತ್ತಿದ್ದೆ: ಸೈಫ್ ಅಲಿ ಖಾನ್‌ಗೆ ಚಾಕು ಇರಿದ ಘಟನೆ ಸ್ಮರಿಸಿದ ಕರೀನಾ!

ಆ ಘಟನೆಯ ನಂತರ ತೀವ್ರ ಆತಂಕಕ್ಕೆ ಒಳಗಾದ ಕರೀನಾ ಕಪೂರ್ ಖಾನ್, ಆರು ತಿಂಗಳ ಕಾಲ ತಮಗೆ ನಿದ್ರೆಯೇ ಬರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಂದು, "ನಾನು ರಸ್ತೆಯಲ್ಲಿ 'ರುಕೋ, ರುಕೋ' (ನಿಲ್ಲಿಸಿ, ನಿಲ್ಲಿಸಿ) ಎಂದು ಕಿರುಚುತ್ತಿದ್ದೆ.
ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್
ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್
Updated on: 

ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ 'ಕಾಫಿ ವಿತ್ ಕರಣ್' (Koffee With Karan) ಸೀಸನ್ 9ರ 4ನೇ ಸಂಚಿಕೆಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಹಲವು ವರ್ಷಗಳ ನಂತರ ಈ ದಂಪತಿ ಒಟ್ಟಾಗಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೋಗಳು ವೀಕ್ಷಕರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿವೆ. ಸೈಫ್ ಅಲಿ ಖಾನ್ ಅವರ ವಿಶಿಷ್ಟ ಹಾಸ್ಯಪ್ರಜ್ಞೆ ಮತ್ತು ಕರೀನಾ ಕಪೂರ್ ಖಾನ್ ಅವರ ಸಹಜ ಆಕರ್ಷಕ ವ್ಯಕ್ತಿತ್ವ ಪ್ರೇಕ್ಷಕರ ಮನ ಗೆದ್ದಿದೆ. ಇದಲ್ಲದೆ, ಕಳೆದ ವರ್ಷದ ಜನವರಿಯಲ್ಲಿ ಸೈಫ್ ಅಲಿ ಖಾನ್ ಅವರ ಮೇಲೆ ನಡೆದ ಚಾಕು ದಾಳಿಯ ಘಟನೆ ಮತ್ತು ಅಂದು ನಡೆದ ಘಟನಾವಳಿಗಳ ಬಗ್ಗೆಯೂ ಅವರು ಮುಕ್ತವಾಗಿ ಮಾತನಾಡಿದ್ದಾರೆ.

ಆ ಘಟನೆಯ ನಂತರ ತೀವ್ರ ಆತಂಕಕ್ಕೆ ಒಳಗಾದ ಕರೀನಾ ಕಪೂರ್ ಖಾನ್, ಆರು ತಿಂಗಳ ಕಾಲ ತಮಗೆ ನಿದ್ರೆಯೇ ಬರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಂದು, "ನಾನು ರಸ್ತೆಯಲ್ಲಿ 'ರುಕೋ, ರುಕೋ' (ನಿಲ್ಲಿಸಿ, ನಿಲ್ಲಿಸಿ) ಎಂದು ಕಿರುಚುತ್ತಿದ್ದೆ. ಅದು ಯಾವುದೋ ಸಿನಿಮಾದ ದೃಶ್ಯದಂತಿತ್ತು ಎಂದು ವಿವರಿಸಿದರು. ಸೈಫ್ ಅಲಿ ಖಾನ್ ಈ ರಾತ್ರಿಯನ್ನು "ಎಲ್ಲಾ ರಾತ್ರಿಗಳ ಪೈಕಿ ಅತ್ಯಂತ ಕೆಟ್ಟ ರಾತ್ರಿ" ಎಂದು ಬಣ್ಣಿಸಿದ್ದಾರೆ.

ತಮಗೆ ಉಂಟಾದ ಗಾಯಗಳ ತೀವ್ರತೆಯಿಂದಾಗಿ, ಮತ್ತೆ ಚೇತರಿಸಿಕೊಳ್ಳಲು ತಮಗೆ ಎಷ್ಟು ಸಮಯ ಬೇಕಾಯಿತು ಎಂಬುದರ ಬಗ್ಗೆಯೂ ನಟ ಮಾತನಾಡಿದರು. ತಮ್ಮ ಮಕ್ಕಳು ಈ ಘಟನೆಯನ್ನು ಕಣ್ಣಾರೆ ಕಂಡಿದ್ದರಿಂದ, ಪರಿಸ್ಥಿತಿಯ ಗಂಭೀರತೆ ಇನ್ನಷ್ಟು ಹೆಚ್ಚಾಗಿತ್ತು ಎಂದಿದ್ದಾರೆ. ಜೊತೆಗೆ, ಆ ಕಠಿಣ ಸಮಯದಲ್ಲಿ ತಮ್ಮ ಆಪ್ತರಿಂದ ಸಿಕ್ಕ ಬೆಂಬಲದ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್
ಮಕ್ಕಳೊಂದಿಗೆ ತನ್ನ ಜಾಹೀರಾತು ನೋಡಿದಾಗ ಮುಜುಗರಕ್ಕೊಳಗಾದ ಕರೀನಾ ಕಪೂರ್: ತೈಮೂರ್ ಪ್ರಶ್ನೆಗೆ ಬೆಬೋ ಬೇಸ್ತು!

2025ರ ಜನವರಿ 16ರ ಮುಂಜಾನೆ, ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ನಟ ಸೈಫ್ ಅಲಿ ಖಾನ್ ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಆರು ಬಾರಿ ಚಾಕುವಿನಿಂದ ಇರಿದಿದ್ದನು. ನಟ ಮತ್ತು ಆ ವ್ಯಕ್ತಿಗಳ ನಡುವೆ ನಡೆದ ಜಗಳದ ವೇಳೆ ಸೈಫ್ ಅವರ ಬೆನ್ನುಮೂಳೆ, ಕುತ್ತಿಗೆ ಮತ್ತು ಕೈಗಳಿಗೆ ಗಾಯಗಳಾದವು. ಲೀಲಾವತಿ ಆಸ್ಪತ್ರೆಯಲ್ಲಿ ಸೈಫ್ ಅಲಿ ಖಾನ್ ಅವರಿಗೆ 2.5 ಗಂಟೆಗಳ ಕಾಲ ನರಶಸ್ತ್ರಚಿಕಿತ್ಸೆ ಹಾಗೂ ಪ್ಲಾಸ್ಟಿಕ್ ಸರ್ಜರಿ ನಡೆಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X