'ರಾಮಾಯಣ'ಕ್ಕಾಗಿ ಮದ್ಯಪಾನ- ಧೂಮಪಾನ ತ್ಯಜಿಸಿದ ರಣಬೀರ್ ಕಪೂರ್: ಆದರೆ... ಅದೊಂದು ತಿಂಡಿ ಬಿಟ್ಟಿರಲು ಸಾಧ್ಯವಾಗಲಿಲ್ಲ!

'ರಾಮಾಯಣ' ಚಿತ್ರವು ಸುದ್ದಿಯಲ್ಲಿರುವಂತೆಯೇ, ಶ್ರೀರಾಮನ ಪಾತ್ರಕ್ಕಾಗಿ ರಣಬೀರ್ ಕಪೂರ್ ನಡೆಸಿದ್ದ ಸಿದ್ಧತೆಗಳೂ ಗಮನ ಸೆಳೆಯುತ್ತಿವೆ. ಚಿತ್ರಕ್ಕಾಗಿ ಸಿದ್ಧತೆ ನಡೆಸುವ ಭಾಗವಾಗಿ ಅವರು ಮದ್ಯಪಾನ ಮತ್ತು ಧೂಮಪಾನವನ್ನು ತ್ಯಜಿಸಿ, ಸಸ್ಯಾಹಾರಿಯಾಗಿದ್ದರು .
Ranbir kapoor
ರಣಬೀರ್ ಕಪೂರ್
Updated on: 

'ರಾಮಾಯಣ' ಚಿತ್ರಕ್ಕಾಗಿ ರಣಬೀರ್ ಕಪೂರ್ ಮದ್ಯಪಾನ, ಧೂಮಪಾನ ಮತ್ತು ಮಾಂಸಾಹಾರವನ್ನು ತ್ಯಜಿಸಿದ್ದರು ಎಂದು ವರದಿಯಾಗಿದೆ. ಆದರೆ ಕ್ಯಾಮೆರಾಗಳಿಂದ ದೂರವಿದ್ದಾಗ, ಅವರ ಆಹಾರ ಪದ್ಧತಿಗಳು ಸಾಮಾನ್ಯ ಜನರಂತೆಯೇ ಇರುವುದು ಅಚ್ಚರಿ ಮೂಡಿಸುತ್ತದೆ.

'ರಾಮಾಯಣ' ಚಿತ್ರವು ಸುದ್ದಿಯಲ್ಲಿರುವಂತೆಯೇ, ಶ್ರೀರಾಮನ ಪಾತ್ರಕ್ಕಾಗಿ ರಣಬೀರ್ ಕಪೂರ್ ನಡೆಸಿದ್ದ ಸಿದ್ಧತೆಗಳೂ ಗಮನ ಸೆಳೆಯುತ್ತಿವೆ. ಚಿತ್ರಕ್ಕಾಗಿ ಸಿದ್ಧತೆ ನಡೆಸುವ ಭಾಗವಾಗಿ ಅವರು ಮದ್ಯಪಾನ ಮತ್ತು ಧೂಮಪಾನವನ್ನು ತ್ಯಜಿಸಿ, ಸಸ್ಯಾಹಾರಿಯಾಗಿದ್ದರು ಎಂದು ವರದಿಗಳು ತಿಳಿಸಿವೆ. ಅವರು 'ಸಾತ್ವಿಕ ಆಹಾರ' ಪದ್ಧತಿಯನ್ನು ಅಳವಡಿಸಿಕೊಂಡಿದ್ದರು.

ಆದರೆ, ರಣಬೀರ್ ಅವರ ದೈನಂದಿನ ಆಹಾರ ಪದ್ಧತಿಯು ನಾವು ಊಹಿಸುವಷ್ಟು ಕಠಿಣವೇನೂ ಅಲ್ಲ. ಇತ್ತೀಚೆಗೆ 'ಪಿಂಕ್‌ವಿಲ್ಲಾ' (Pinkvilla) ಜೊತೆಗಿನ ಸಂಭಾಷಣೆಯಲ್ಲಿ, ಅವರು ಮನೆಯಲ್ಲಿ ತಯಾರಿಸಿದ ಊಟದ ಮೇಲಿನ ತಮ್ಮ ಪ್ರೀತಿ, ಬದಲಾಗುತ್ತಿರುವ ಉಪಹಾರದ ಕ್ರಮ, ಸಿಹಿತಿಂಡಿಗಳ ಮೇಲಿನ ಒಲವು ಮತ್ತು ಯಾವ ವಿಶೇಷ ಸಂದರ್ಭಗಳಲ್ಲಿ ಅವರು ತಮ್ಮ ಆಹಾರ ನಿಯಮಗಳನ್ನು ಸಡಿಲಿಸುತ್ತಾರೆ ಎಂಬುದರ ಕುರಿತು ಮಾತನಾಡಿದ್ದಾರೆ.

ಹಲವು ಮಾಧ್ಯಮ ವರದಿಗಳ ಪ್ರಕಾರ, ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ಶ್ರೀರಾಮನ ಪಾತ್ರವನ್ನು ನಿರ್ವಹಿಸಲು ರಣಬೀರ್, ಮದ್ಯಪಾನ ಮತ್ತು ಧೂಮಪಾನವನ್ನು ಬಿಟ್ಟು ಸಸ್ಯಾಹಾರವನ್ನು ಅಳವಡಿಸಿಕೊಂಡಿದ್ದರು. ಅವರು ಸಾತ್ವಿಕ ಆಹಾರ ಪದ್ಧತಿಯನ್ನು ಅನುಸರಿಸುವುದರ ಜೊತೆಗೆ, ಮುಂಜಾನೆ ವ್ಯಾಯಾಮ ಮತ್ತು ಧ್ಯಾನವನ್ನೂ ಮಾಡುತ್ತಿದ್ದರು ಎಂದು ಹೇಳಲಾಗಿದೆ.

Ranbir kapoor
ಗಲ್ಲಾ ಪೆಟ್ಟಿಗೆಯಲ್ಲಿ 'ರಾಮಾಯಣ'ಕ್ಕೆ ಹಿನ್ನಡೆ; ಬಿಡುಗಡೆಯಾದ ಮೊದಲ ದಿನ ರಣಬೀರ್ ಕಪೂರ್-ಸಾಯಿ ಪಲ್ಲವಿ ನಟನೆಯ ಚಿತ್ರ ಗಳಿಸಿದ್ದೆಷ್ಟು?

ಈ ಪಾತ್ರಕ್ಕಾಗಿ ರಣಬೀರ್ ಸಸ್ಯಾಹಾರಿಯಾಗಿದ್ದಾರೆ ಮತ್ತು ಮದ್ಯಪಾನವನ್ನು ತ್ಯಜಿಸಿದ್ದಾರೆ ಎಂದು ಕಳೆದ ವರ್ಷ, 'ವೈರಲ್ ಭಯಾನಿ' (Viral Bhayani) ಎಂಬ ಪಾಪರಾಝಿ ಖಾತೆಯು, ಪೋಸ್ಟ್ ಹಂಚಿಕೊಂಡಿತ್ತು. 40ನೇ ವಯಸ್ಸನ್ನು ತಲುಪಿದ ನಂತರ ಮತ್ತು ತಂದೆಯಾದ ಬಳಿಕ, ಅವರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದು, ಈ ಜೀವನಶೈಲಿಯ ಬದಲಾವಣೆಗಳು ಅದರ ಭಾಗವಾಗಿವೆ ಎಂದು ಹೇಳಲಾಗಿದೆ.

ತಾನು ನಿರ್ವಹಿಸುವ ಪಾತ್ರಕ್ಕೆ ಅನುಗುಣವಾಗಿ ತನ್ನ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುವುದಾಗಿ ರಣಬೀರ್ ಹೇಳುತ್ತಾರೆ. ಒಂದು ಪಾತ್ರಕ್ಕಾಗಿ ನಿರ್ದಿಷ್ಟ ರೂಪವನ್ನು ಪಡೆಯಲು ಆಹಾರದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ, ಆದರೆ ಮನೆಯಲ್ಲಿ ತಯಾರಿಸಿದ ಊಟ ಮಾತ್ರ ಯಾವಾಗಲೂ ಅವರ ಆಹಾರಕ್ರಮದ ಅವಿಭಾಜ್ಯ ಅಂಗವಾಗಿರುತ್ತದೆ. ಅವರ ಮಾತಿನಲ್ಲಿ ಹೇಳುವುದಾದರೆ, ಅವರು 99% ಸಮಯ 'ಘರ್ ಕಾ ಖಾನಾ' ತಿನ್ನಲು ಪ್ರಯತ್ನಿಸುತ್ತಾರೆ.

ರಣಬೀರ್ ತಮ್ಮನ್ನು ತಾವು ಉಪಾಹಾರದ ವ್ಯಕ್ತಿ ಎಂದು ಕರೆದರು, ಆದರೂ ಅವರ ಬೆಳಗಿನ ಊಟ ದಿನದಿಂದ ದಿನಕ್ಕೆ ಬದಲಾಗುತ್ತದೆ. ಕೆಲವು ದಿನಗಳಲ್ಲಿ ಉಪಾಹಾರ ಪೋಹಾ ಆಗಿರಬಹುದು, ಆದರೆ ಇತರ ದಿನಗಳಲ್ಲಿ ಅವರು ಪ್ರೋಟೀನ್ ಶೇಕ್ ಸೇವಿಸಬಹುದು ಅಥವಾ ಊಟವನ್ನು ಸಂಪೂರ್ಣವಾಗಿ ಬಿಟ್ಟುಬಿಡಬಹುದು ಎಂದಿದ್ದಾರೆ.

ಸಿನಿಮಾ ಪಾತ್ರಕ್ಕಾಗಿ ಕೆಲವು ಆಹಾರಗಳನ್ನು ತ್ಯಜಿಸಿದ್ದರು, ಆದರೆ ರಣಬೀರ್ ಸಿಹಿತಿಂಡಿಗಳನ್ನು ತ್ಯಜಿಸಿರಲಿಲ್ಲ, ಅವರು ಪ್ರತಿ ರಾತ್ರಿ ಚಾಕೊಲೇಟ್ ತುಂಡು ತಿನ್ನಲು ಇಷ್ಟಪಡುತ್ತಾರೆ. ಪ್ರತಿದಿನ ಮಿಲ್ಕ್ ಚಾಕೋಲೇಟ್ ತಿನ್ನುತ್ತಾರೆ. ಅವರ ಮತ್ತೊಂದು ಫೇವರಿಟ್ ತಿಂಡಿ ಚೀಸ್‌ಕೇಕ್. ಅವರು ಚೀಸ್ ಕೇಕ್ ಗಾಗಿ ತಮ್ಮ ಡಯಟ್ ಮುರಿಯುತ್ತಾರೆ.

ರಣಬೀರ್ ಸಾಮಾನ್ಯವಾಗಿ ಮನೆಯಲ್ಲಿ ತಯಾರಿಸಿದ ಊಟವನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಸಂದರ್ಭಕ್ಕೆ ತಕ್ಕಂತೆ ಆಹಾರ ವ್ಯವಸ್ಥೆಗೆ ಬದಲಾಗುತ್ತಾರೆ. ಅವರು ಚೀಟಿಂಗ್ ಮೀಲ್ ಮಾಡಿದಾಗ ಪಿಜ್ಜಾ ಅಥಮಾ ಚೈನೀಸ್ ಈಟ ಆಯ್ಕೆ ಮಾಡಿಕೊಳ್ಳುತ್ತಾರೆ.

ಆಹಾರವು ರಣಬೀರ್ ಅವರ ಪ್ರಸ್ತುತ ಕ್ಷೇಮ ದಿನಚರಿಯ ಒಂದು ಭಾಗ ಮಾತ್ರ. ಪಿಂಕ್ವಿಲ್ಲಾ ಜೊತೆ ಮಾತನಾಡಿದ ಅವರು, ಫಿಟ್‌ನೆಸ್, ಚೇತರಿಕೆ ಮತ್ತು ಒಟ್ಟಾರೆ ಕ್ಷೇಮದಲ್ಲಿ ಅವರು ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಹೇಳಿದರು. ಅವರ ದಿನಚರಿಯಲ್ಲಿ ಐಸ್ ಬಾತ್, ಸೌನಾಗಳು, ಆಮ್ಲಜನಕ ಕೊಠಡಿಯನ್ನು ಬಳಸುವ ಹೈಪರ್‌ಬೇರಿಕ್ ಆಕ್ಸಿಜನ್ ಥೆರಪಿ (HBOT) ಮತ್ತು ರೆಡ್ ಲೈಟ್ ಥೆರಪಿ ಸೇರಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X