ನಿತೇಶ್ ತಿವಾರಿ ರಾಮಯಾಣದಲ್ಲಿ ದ್ವಿಪಾತ್ರದಲ್ಲಿ ರಣಬೀರ್ ಕಪೂರ್: ಇನ್ನೊಂದು ಪಾತ್ರ ಯಾವುದು?

ನನ್ನ ನೆಚ್ಚಿನ ಕಲೆ ಮತ್ತು ನನ್ನ ನೆಚ್ಚಿನ ಕಲಾವಿದ ಒಂದೇ ಕ್ಷಣದಲ್ಲಿ ಒಂದಾದರು. ಎಲ್ಲರಿಗೂ ಇಂತಹ ಅನುಭವ ಸಿಗುವುದಿಲ್ಲ, ಅಂತಹ ಅದೃಷ್ಟವಂತರಲ್ಲಿ ನಾನೂ ಒಬ್ಬನಾಗಿರುವುದಕ್ಕೆ ನಾನು ನಿಜವಾಗಿಯೂ ಧನ್ಯನೆಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
Ranbeer kapoor
ರಾಮಾಯಣದಲ್ಲಿ ದ್ವಿಪಾತ್ರದಲ್ಲಿ ರಣಬೀರ್ ಕಪೂರ್
Updated on: 

ಮುಂಬಯಿ: ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ಪೌರಾಣಿಕ ಚಿತ್ರ 'ರಾಮಾಯಣ'ದಲ್ಲಿ ರಣಬೀರ್ ಕಪೂರ್ ದ್ವಿಪಾತ್ರದಲ್ಲಿ ನಟಿಸಿರುವುದು ಬಹುತೇಕ ಮಂದಿಗೆ ತಿಳಿದಿಲ್ಲ.

ರಾಮನ ಪಾತ್ರದಲ್ಲಿ ನಟಿಸಿರುವ ರಣಬೀರ್ ಕಪೂರ್ ವಿಷ್ಣುವಿನ ಹಿಂದಿನ ಅವತಾರವಾದ ಪರಶುರಾಮನ ಪಾತ್ರದಲ್ಲಿಯೂ ಸಂಕ್ಷಿಪ್ತವಾಗಿ ಕಾಣಿಸಿಕೊಂಡಿದ್ದಾರೆ. ಪರಶುರಾಮನ ಅವತಾರವನ್ನು ಧರಿಸಲು ರಣಬೀರ್ ಕಪೂರ್ ಅವರು ಎದುರಿಸಿದ ಕಠಿಣ ಪ್ರೊಸ್ಥೆಟಿಕ್ಸ್ ಪ್ರಕ್ರಿಯೆಯ ವಿವಿಧ ಹಂತಗಳನ್ನು ತೋರಿಸುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.

ಪರಶುರಾಮನಿಗಾಗಿ ಪ್ರೊಸ್ಥೆಟಿಕ್ಸ್, ಭಾಗ ಒಂದು. ನಾನೊಬ್ಬ ಅದೃಷ್ಟಶಾಲಿ! ಏಕೆಂದರೆ ನನ್ನ ನೆಚ್ಚಿನ ಕಲೆ ಮತ್ತು ನನ್ನ ನೆಚ್ಚಿನ ಕಲಾವಿದ ಒಂದೇ ಕ್ಷಣದಲ್ಲಿ ಒಂದಾದರು. ಎಲ್ಲರಿಗೂ ಇಂತಹ ಅನುಭವ ಸಿಗುವುದಿಲ್ಲ, ಅಂತಹ ಅದೃಷ್ಟವಂತರಲ್ಲಿ ನಾನೂ ಒಬ್ಬನಾಗಿರುವುದಕ್ಕೆ ನಾನು ನಿಜವಾಗಿಯೂ ಧನ್ಯನೆಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಪರಶುರಾಮ - ಇವರನ್ನು ರಾಮ ಜಮದಗ್ನಿ, ಭಾರ್ಗವ ರಾಮ ಮತ್ತು ವೀರರಾಮ ಎಂದೂ ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ಜಗತ್ತನ್ನು ಪಾಲಿಸುವ ವಿಷ್ಣುವಿನ ದಶಾವತಾರಗಳಲ್ಲಿ ಇವರು ಆರನೆಯ ಅವತಾರವಾಗಿದ್ದಾರೆ.

Ranbeer kapoor
'2 ರೂಪಾಯಿ ವಿಮರ್ಶಕ.. ಬಂಗಲೆ ಕಟ್ಟಿಕೊಂಡಿದ್ದಾನೆ'!: KRKಗೆ ರಾಮಾಯಣ ನಿರ್ದೇಶಕರಿಂದ ಲೀಗಲ್ ನೋಟಿಸ್; ನೆಟ್ಟಿಗರ ತಿರುಗೇಟು

ಇವರನ್ನು 'ಚಿರಂಜೀವಿ'ಗಳಲ್ಲಿ (ಅಮರರು) ಒಬ್ಬರೆಂದು ಪರಿಗಣಿಸಲಾಗುತ್ತದೆ. ಕಲಿಯುಗದ ಅಂತ್ಯದಲ್ಲಿ, ವಿಷ್ಣುವಿನ ಹತ್ತನೆಯ ಮತ್ತು ಅಂತಿಮ ಅವತಾರವಾದ 'ಕಲ್ಕಿ'ಗೆ ಇವರು ಗುರುವಾಗಲಿದ್ದಾರೆ ಎಂದು ಹೇಳಲಾಗುತ್ತದೆ.

'ರಾಮಾಯಣ'ದಲ್ಲಿ, ಸೀತೆಯೊಂದಿಗಿನ ವಿವಾಹದ ನಂತರ ಅಯೋಧ್ಯೆಗೆ ಮರಳುತ್ತಿದ್ದ ರಾಮನಿಗೆ, ಪರಶುರಾಮನು ಯುದ್ಧಕ್ಕೆ ಸವಾಲು ಹಾಕುತ್ತಾನೆ. ನಂತರ, ರಾಮನು ವಿಷ್ಣುವಿನ ಅವತಾರವೇ ಎಂದು ಅರಿತುಕೊಳ್ಳುವ ಪರಶುರಾಮನು, ಯೋಗ ಸಾಧನೆಗಾಗಿ ತನ್ನ ನಿವಾಸಕ್ಕೆ ತೆರಳುತ್ತಾನೆ. ಮಹಾಭಾರತ'ದಲ್ಲಿ, ಇವರು ಭೀಷ್ಮ, ದ್ರೋಣ, ರುಕ್ಮಿ ಮತ್ತು ಕರ್ಣನಿಗೆ ಗುರುವಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X