ಬಾಕ್ಸಾಫೀಸ್‌ನಲ್ಲೇ ಹೊಸ ಇತಿಹಾಸ ಬರೆದ ರಾಮಾಯಣ: 9ನೇ ದಿನಕ್ಕೆ ಛಾವಾ ದಾಖಲೆ ಮುರಿದು ಹೊಸ ಮೈಲಿಗಲ್ಲು ಸೃಷ್ಟಿಸಿದ ರಣಬೀರ್-ಯಶ್ ಸಿನಿಮಾ

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ: ಭಾಗ 1' ಸಿನಿಮಾ ಕೇವಲ 9 ದಿನಗಳಲ್ಲಿ ವಿಶ್ವಾದ್ಯಂತ ₹1,110.70 ಕೋಟಿ (ಗ್ರಾಸ್) ಗಳಿಸುವ ಮೂಲಕ ಭಾರತೀಯ ಸಿನಿಮಾರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಆ ಕುರಿತ ವರದಿ ಇಲ್ಲಿದೆ:
Ramayana Box Office Collection
ಒಂಬತ್ತನೇ ದಿನಕ್ಕೆ ಛಾವಾ ದಾಖಲೆ ಮುರಿದು ವಿಶ್ವದಲ್ಲೇ ಬ್ರಹ್ಮಾಂಡ ಸೃಷ್ಟಿಸಿದ ರಾಮಾಯಣ
Updated on: 

Ramayana Part 1 Box Office Collection: ಬಾಕ್ಸಾಫೀಸ್ ಲೋಕದಲ್ಲಿ ಹೊಸ ಅಲೆ ಎಬ್ಬಿಸಿರುವ ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅಭಿನಯದ ರಾಮಾಯಣ: ರೈಸ್ ಆಫ್ ಎ ಲಜೆಂಡ್ ಚಿತ್ರವು ಬಿಡುಗಡೆಯಾದ ದಿನದಿಂದಲೂ ಹೊಸ ದಾಖಲೆಗಳನ್ನು ಬರೆಯುತ್ತಾ ಮುನ್ನಡೆಯುತ್ತಿದೆ. ಅದರಲ್ಲೂ, ಬಿಡುಗಡೆಯಾದ ಕೇವಲ ಒಂಬತ್ತೇ ದಿನಗಳಲ್ಲಿ ಈ ಮಹಾಕಾವ್ಯ ಚಿತ್ರವು ಹಿಂದಿನ ಎಲ್ಲಾ ದೊಡ್ಡ ಬ್ಲಾಕ್ ಬಸ್ಟರ್ ಚಿತ್ರಗಳ ದಾಖಲೆಗಳನ್ನು ಪುಡಿಗಟ್ಟಿದೆ. ವಿಶೇಷವಾಗಿ ಒಂಬತ್ತನೇ ದಿನದ ಕಲೆಕ್ಷನ್ ನಲ್ಲಿ ವಿಕ್ಕಿ ಕೌಶಲ್ ಅವರ ಚಾವಾ ಚಿತ್ರದ ಜೀವಿತಾವಧಿ ಗಳಿಕೆಯನ್ನು ಹಿಂದಿಕ್ಕುವ ಮೂಲಕ ಈ ಸಿನಿಮಾ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಪ್ರತಿಯೊಬ್ಬರ ಹುಬ್ಬೇರಿಸುವಂತೆ ಜಾಗತಿಕ ಮಟ್ಟದಲ್ಲಿ 1,100 ಕೋಟಿ ರೂಪಾಯಿಗಳಿಕೆ ಕಂಡು, ವಿಕ್ಕಿ ಕೌಶಲ್ ಅವರ 'ಛಾವಾ' ಚಿತ್ರದ ಭಾರತದ ಜೀವಮಾನದ ಕಲೆಕ್ಷನ್ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದೆ. ಆ ಕುರಿತ ವರದಿ ಇಲ್ಲಿದೆ:

ಒಂಬತ್ತನೇ ದಿನದ ಕಲೆಕ್ಷನ್

ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಬಿಡುಗಡೆಯಾದ 9ನೇ ದಿನ (ಶುಕ್ರವಾರ) ಈ ಚಿತ್ರವು ಭಾರತದಲ್ಲಿ ಸುಮಾರು 22,993 ಶೋಗಳಿಂದ ₹47.85 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ದೇಶೀಯ ಒಟ್ಟು ನೆಟ್ ಕಲೆಕ್ಷನ್ ₹612.45 ಕೋಟಿ (ಗ್ರಾಸ್ ₹732.20 ಕೋಟಿ) ತಲುಪಿದೆ. ಇದರೊಂದಿಗೆ, ವಿದೇಶಿ ಮಾರುಕಟ್ಟೆಯಲ್ಲಿ 9ನೇ ದಿನ ₹25 ಕೋಟಿ ಗಳಿಸುವ ಮೂಲಕ, ಚಿತ್ರದ ಒಟ್ಟು ವಿದೇಶಿ ಗಳಿಕೆ ₹378.50 ಕೋಟಿಗೆ ಏರಿದೆ. ಜೊತೆಗೆ, ಭಾರತ ಮತ್ತು ವಿದೇಶಿ ಗಳಿಕೆ ಸೇರಿ ಚಿತ್ರದ ಒಟ್ಟು ವಿಶ್ವಾದ್ಯಂತ ಕಲೆಕ್ಷನ್ ₹1,110.70 ಕೋಟಿ ದಾಟಿದೆ. ಈ ಮೂಲಕ 'ಕೆಜಿಎಫ್-2' ಬಳಿಕ ₹1,000 ಕೋಟಿ ಕ್ಲಬ್ ಸೇರಿದ ಯಶ್ ಅವರ ಎರಡನೇ ಸಿನಿಮಾ ಇದಾಗಿದೆ.

Ramayana Box Office Collection
ಆಸ್ಕರ್ ಅಂಗಳಕ್ಕೆ ರಾಮಾಯಣ: ಜಾಗತಿಕ ಮಟ್ಟದಲ್ಲಿ ರಾಕಿಂಗ್ ಸ್ಟಾರ್ ಯಶ್ ಹೊಸ ಮೈಲಿಗಲ್ಲು!

ಭಾಷಾವಾರು ಗಳಿಕೆ (9ನೇ ದಿನ)

9ನೇ ದಿನದ ₹47.85 ಕೋಟಿ ಗಳಿಕೆಯಲ್ಲಿ ವಿವಿಧ ಭಾಷೆಗಳ ಕೊಡುಗೆ,

  • ಹಿಂದಿ: ₹36.25 ಕೋಟಿ

  • ಮಲಯಾಳಂ: ₹3.25 ಕೋಟಿ

  • ಕನ್ನಡ: ₹3.00 ಕೋಟಿ

  • ತಮಿಳು: ₹2.75 ಕೋಟಿ

  • ತೆಲುಗು: ₹2.60 ಕೋಟಿ

'ಛಾವಾ' ಸೇರಿ ಹಲವು ಬ್ಲಾಕ್‌ಬಸ್ಟರ್‌ಗಳ ದಾಖಲೆ ಧೂಳೀಪಟ

2025ರ ಅತಿ ದೊಡ್ಡ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದ್ದ ವಿಕ್ಕಿ ಕೌಶಲ್ ಅವರ 'ಛಾವಾ' ಚಿತ್ರವು ಭಾರತದಲ್ಲಿ ಒಟ್ಟು ₹601.57 ಕೋಟಿ ನೆಟ್ ಕಲೆಕ್ಷನ್ ಮಾಡಿತ್ತು. 'ರಾಮಾಯಣ' ಕೇವಲ 9 ದಿನಗಳಲ್ಲಿ ₹612.45 ಕೋಟಿ ಗಳಿಸುವ ಮೂಲಕ 'ಛಾವಾ' ಚಿತ್ರದ ಜೀವಮಾನದ ದಾಖಲೆಯನ್ನು ಹಿಂದಿಕ್ಕಿದೆ. ಇದಕ್ಕೂ ಮುನ್ನ ರಣಬೀರ್ ಕಪೂರ್ ಅವರ 'ಅನಿಮಲ್' (₹556.36 ಕೋಟಿ) ಮತ್ತು ಶಾರುಖ್ ಖಾನ್ ಅವರ 'ಪಠಾಣ್' (₹544.28 ಕೋಟಿ) ಚಿತ್ರಗಳ ಭಾರತದ ಒಟ್ಟು ಗಳಿಕೆಯನ್ನೂ 'ರಾಮಾಯಣ' ಮೀರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X