

ರಾಮಾಯಣ ಚಿತ್ರದ ಯಶಸ್ಸಿನ ನಂತರ, ಸಾಯಿ ಪಲ್ಲವಿ ಇದೀಗ ತಮ್ಮ ಮುಂದಿನ ಚಿತ್ರ 'ಓ.ಎಂ - ಆಪರೇಷನ್ ಮೋಲ್' ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ನಟ ಧನುಷ್ ಚಿತ್ರದಲ್ಲಿ ನಟಿಸಿದ್ದಾರೆ. ತಮಿಳುನಾಡಿನಲ್ಲಿ ನಡೆದ ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ, ಸಾಯಿ ಪಲ್ಲವಿ ತಮ್ಮ ಸಹನಟ ಧನುಷ್ ಅವರ ಮುಂದೆ ವಿಶೇಷ ವಿನಂತಿಯೊಂದನ್ನು ಮಾಡಿಕೊಂಡರು. ಮುಂದಿನ ಜೀವನದಲ್ಲಿ ನೀವು ಏನನ್ನೇ ಮಾಡಲು ಆರಿಸಿಕೊಂಡರೂ ನಿಮಗೆ ಶುಭವಾಗಲಿ. ಆದರೆ ನಟನೆಯನ್ನು ಬಿಡಬೇಡಿ ಎಂದು ಕೇಳಿಕೊಂಡರು.
ರಾಜಕೀಯದ ಮೇಲೆ ಗಮನ ಕೇಂದ್ರೀಕರಿಸಲು ನಟನೆಯನ್ನು ತೊರೆದ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರನ್ನು ಉಲ್ಲೇಖಿಸಿದ ಸಾಯಿ ಪಲ್ಲವಿ, ಧನುಷ್ ಅವರಂತಹ ಇನ್ನೊಬ್ಬ ನಟನನ್ನು ಚಿತ್ರೋದ್ಯಮ ಕಳೆದುಕೊಳ್ಳಬಾರದು. ಈ ಕಾರ್ಯಕ್ರಮಕ್ಕೆ ಬರುವಾಗ ರಾಜಕೀಯ ಧ್ವಜಗಳನ್ನು ನೋಡಿದ ಬಗ್ಗೆ ಪ್ರಸ್ತಾಪಿಸಿದ ಅವರು, ಈ ಸ್ಥಳವು ರಾಜಕೀಯ ಸಭೆಯಂತೆ ಕಾಣುತ್ತಿದೆ ಎಂದು ತಮಾಷೆ ಮಾಡಿದರು.
'ನಾನು ಇಲ್ಲಿಗೆ ಬರುವಾಗ, ಆ ಎಲ್ಲ ಧ್ವಜಗಳು ಮತ್ತು ಬ್ಯಾನರ್‌ಗಳನ್ನು ಗಮನಿಸುತ್ತಲೇ ಇದ್ದೆ. ನಾನು ಆಶ್ಚರ್ಯ ಪಡುತ್ತಿದ್ದೆ, ‘ಇದು ಯಾವುದೋ ರಾಜಕೀಯ ಸಭೆಯೇ? ಇದೇನು ಸರ್?’ ನೀವು ಏನು ಮಾಡಲು ಆರಿಸಿಕೊಂಡರೂ, ನಾನು ನಿಮಗೆ ಶುಭ ಹಾರೈಸುತ್ತೇನೆ ಮತ್ತು ನಿಮಗೆ ಒಳ್ಳೆಯದಾಗಲಿ. ಆದಾಗ್ಯೂ, ನನ್ನೊಳಗಿನ ನಟಿ, ಧನುಷ್ ಸರ್ ನಟಿಸುವುದನ್ನು ಮುಂದುವರಿಸಬೇಕೆಂದು ನಾನು ಆಶಿಸುತ್ತಿದ್ದೆ ಮತ್ತು ಪ್ರಾರ್ಥಿಸುತ್ತಿದ್ದೆ. ವಿಜಯ್ ಸರ್ ಅವರನ್ನು ನೋಡಿದರೆ, ಅವರು ರಾಜಕೀಯಕ್ಕೆ ಕಾಲಿಟ್ಟಿದ್ದಾರೆ ಮತ್ತು ನಟನೆಯನ್ನು ನಿಲ್ಲಿಸಿದ್ದಾರೆ ಎಂಬುದನ್ನು ಯೋಚಿಸದೆ ಇರಲು ಸಾಧ್ಯವಿಲ್ಲ' ಎಂದು ಹೇಳಿದರು.
'ಏಕೆಂದರೆ ಅವರಂತಹ ವಾಸ್ತವಿಕ ಅಭಿನಯವನ್ನು ನೀಡಲು ಮತ್ತು ಉತ್ತಮ ಕಥೆಗಳನ್ನು ಪ್ರೇಕ್ಷಕರಿಗೆ ತಲುಪಿಸಲು, ನಿಜವಾದ ನಟರು ಬೇಕು. ಆದ್ದರಿಂದ, ದಯವಿಟ್ಟು ನಟಿಸುವುದನ್ನು ಮುಂದುವರಿಸಿ. ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ, ನಾವೆಲ್ಲರೂ ಒಬ್ಬ ಉತ್ತಮ ನಟನನ್ನು ಕಳೆದುಕೊಳ್ಳುತ್ತೇವೆ' ಎಂದು ಅವರು ಹೇಳಿದರು.
ಓ.ಎಂ - ಆಪರೇಷನ್ ಮೋಲ್‌ನಲ್ಲಿ ಧನುಷ್ ಜೊತೆಗಿನ ಕೆಲಸದ ಅನುಭವದ ಬಗ್ಗೆ ಮಾತನಾಡಿದ ಸಾಯಿ ಪಲ್ಲವಿ, ಈ ಯೋಜನೆಯ ಭಾಗವಾಗಿರುವುದು ನನ್ನ ಅದೃಷ್ಟ ಎಂದರು. ನಿರ್ಮಾಪಕರಾಗಿಯೂ ಅವರ ಕೆಲಸವನ್ನು ಹೊಗಳಿದ ಅವರು, ಸೆಟ್‌ನಲ್ಲಿ ಅವರೊಂದಿಗೆ ಸಮಯ ಕಳೆಯಲು ಹೆಚ್ಚಿನ ಅವಕಾಶಗಳು ಸಿಗದಿದ್ದರೂ, ಅವರು ಕೆಲಸ ಮಾಡುವ ರೀತಿಯನ್ನು ನೋಡಿ ಆನಂದಿಸಿದೆ. ಚಿತ್ರದ ಭಾಗವಾಗಲು ಅವಕಾಶ ನೀಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರ ನವೆಂಬರ್ 20 ರಂದು ಬಿಡುಗಡೆಯಾಗಲಿದ್ದು, ಇದರಲ್ಲಿ ಮಮ್ಮುಟ್ಟಿ ಮತ್ತು ಶ್ರೀಲೀಲಾ ಕೂಡ ನಟಿಸಿದ್ದಾರೆ.