ಒಂದೇ ಕಥೆ, ಒಂದೇ ದಿನ: ಟಾಲಿವುಡ್‌ನಲ್ಲಿ ದುಲ್ಕರ್ ಸಲ್ಮಾನ್ ಸಿನಿಮಾಗೆ ಎದುರಾಯ್ತು ಅದೇ ಕಥೆಯ ಮತ್ತೊಂದು ಸಿನಿಮಾದಿಂದ ಸ್ಪರ್ಧೆ!

ತೆಲುಗು ಚಿತ್ರರಂಗದಲ್ಲಿ ಒಂದೇ ಕಥಾಹಂದರ ಹೊಂದಿರುವ ಎರಡು ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ದುಲ್ಕರ್ ಸಲ್ಮಾನ್ ನಟನೆಯ ಆಕಾಶಂ ಲೊ ಒಕ ತಾರಾ ಮತ್ತು ಡಿಯರ್ ಆಸ್ಟ್ರೊನಾಟ್ ಎಂಬ ಎರಡು ಚಿತ್ರಗಳು ಒಂದೇ ದಿನ ತೆರೆಗೆ ಬರುತ್ತಿವೆ. ಆ ಕುರಿತ ವರದಿ ಇಲ್ಲಿದೆ:
Dulquer Salmaan Starrer Akashamlo Oka Tara Faces Direct Box Office Clash With Same Plot Film Dear Astronaut On November 20 Amid Plagiarism Row
ದುಲ್ಕರ್ ಸಲ್ಮಾನ್ ಸಿನಿಮಾಗೆ ಎದುರಾಯ್ತು ಅದೇ ಕಥೆಯ ಮತ್ತೊಂದು ಸಿನಿಮಾ ಸ್ಪರ್ಧೆ!Online Desk
Updated on: 

ಹೈದರಾಬಾದ್: ದುಲ್ಕರ್ ಸಲ್ಮಾನ್ ಅಭಿನಯದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ಆಕಾಶಂಲೋ ಒಕ ತಾರ ಬಿಡುಗಡೆಯ ದಿನವೇ, ಅದೇ ಕಥಾಹಂದರವನ್ನು ಹೊಂದಿರುವ ಡಿಯರ್ ಆಸ್ಟ್ರೋನಾಟ್ ಎಂಬ ಮತ್ತೊಂದು ತೆಲುಗು ಚಿತ್ರ ತೆರೆಗೆ ಬರುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ತೀವ್ರ ಸ್ಪರ್ಧೆ ಮತ್ತು ಕಥೆ ಕದ್ದ ಆರೋಪಕ್ಕೆ ಕಾರಣವಾಗಿದೆ. ಅದರಲ್ಲೂ, ನವೆಂಬರ್ 20ರಂದು ಈ ಎರಡೂ ಸಿನಿಮಾಗಳು ಒಂದೇ ದಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ಟಾಲಿವುಡ್‌ನಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಆ ಕುರಿತ ವರದಿ ಇಲ್ಲಿದೆ:

ಎರಡೂ ಚಿತ್ರಗಳ ಒಂದೇ ಕಥೆ..

ವರದಿಯ ಪ್ರಕಾರ, ಈ ಎರಡೂ ಸಿನಿಮಾಗಳ ಮೂಲ ಕಥೆ ಒಂದೇ ಆಗಿದೆ. ಗಗನಯಾತ್ರಿ ಆಗಬೇಕೆಂಬ ದೊಡ್ಡ ಕನಸು ಕಾಣುವ ಹಳ್ಳಿಯ ಸಾಮಾನ್ಯ ಯುವತಿ ಮತ್ತು ಆಕೆಯ ಕನಸನ್ನು ನನಸು ಮಾಡಲು ಬೆನ್ನೆಲುಬಾಗಿ ನಿಲ್ಲುವ ವ್ಯಕ್ತಿಯ ಭಾವನಾತ್ಮಕ ಪಯಣವೇ ಎರಡೂ ಚಿತ್ರಗಳ ಜೀವಾಳವಾಗಿದೆ.

ಕಿರುಚಿತ್ರದಿಂದ ಹುಟ್ಟಿದ ವಿವಾದ

ಅನಿವಾಸಿ ಭಾರತೀಯ ನಿರ್ದೇಶಕ ಕಾರ್ತಿಕ್ ಭಾಗ್ಯರಾಜ್ ಅವರು 2021ರಲ್ಲಿ ಇದೇ ಕಥೆಯನ್ನು ಆಧರಿಸಿ ಕೌಗಿಲಿ ಎಂಬ ಕಿರುಚಿತ್ರವನ್ನು ನಿರ್ಮಿಸಿ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದರು. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಬಳಿಕ, ಅದನ್ನು ಪೂರ್ಣ ಪ್ರಮಾಣದ ಸಿನಿಮಾ ಮಾಡಲು ಯೂಟ್ಯೂಬ್‌ನಿಂದ ತೆಗೆದುಹಾಕಿ ಟಾಲಿವುಡ್‌ನ ಹಲವು ನಿರ್ಮಾಪಕರಿಗೆ ಕಥೆ ಹೇಳಿದ್ದರು. ಆದರೆ, ತಮ್ಮ ಕಥೆಯನ್ನೇ ಹೋಲುವ ಆಕಾಶಂಲೋ ಒಕ ತಾರ ಚಿತ್ರವನ್ನು ದೊಡ್ಡ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ ಎಂಬುದು ಕಾರ್ತಿಕ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

Dulquer Salmaan Starrer Akashamlo Oka Tara Faces Direct Box Office Clash With Same Plot Film Dear Astronaut On November 20 Amid Plagiarism Row
ಮಗಳ ನೆನಪಿಗಾಗಿ ಚಪ್ಪಲಿ ತೊಡುವುದನ್ನೇ ಬಿಟ್ಟ ಖ್ಯಾತನಟ! ಇಲ್ಲಿದೆ ವಿಜಯ್ ಆಂಟನಿ ಜೀವನದ ಕಣ್ಣೀರ ಕಥೆ

ಬಿಗ್ ಬಜೆಟ್ vs ಸ್ವತಂತ್ರ ಸಿನಿಮಾ

ಪವನ್ ಸಾಧಿನೇನಿ ನಿರ್ದೇಶನದ, ಗೀತಾ ಆರ್ಟ್ಸ್ ಮತ್ತು ಸ್ವಪ್ನಾ ಸಿನಿಮಾ ನಿರ್ಮಾಣದ ದುಲ್ಕರ್ ಸಲ್ಮಾನ್ ಮತ್ತು ಸಾತ್ವಿಕಾ ವೀರವಲ್ಲಿ ನಟನೆಯ ಆಕಾಶಂಲೋ ಒಕ ತಾರ ಭಾರಿ ಬಜೆಟ್‌ನ ಸ್ಟಾರ್ ಸಿನಿಮಾವಾಗಿದೆ. ಇದಕ್ಕೆ ಪ್ರತಿಯಾಗಿ ಕಾರ್ತಿಕ್ ಭಾಗ್ಯರಾಜ್ ತಮ್ಮದೇ ತಂಡದೊಂದಿಗೆ ಡಿಯರ್ ಆಸ್ಟ್ರೋನಾಟ್ ಎಂಬ ಸ್ವತಂತ್ರ ಚಿತ್ರವನ್ನು ನಿರ್ಮಿಸಿ, ಅದೇ ದಿನ (ನವೆಂಬರ್ 20) ಬಿಡುಗಡೆ ಮಾಡುವ ಮೂಲಕ ನೇರ ಸವಾಲು ಹಾಕಿದ್ದಾರೆ. ಏತನ್ಮಧ್ಯೆ, ಕಥೆ ಮತ್ತು ಬಿಡುಗಡೆ ದಿನಾಂಕ ಮಾತ್ರವಲ್ಲದೆ, ಈ ಎರಡೂ ಸಿನಿಮಾಗಳಲ್ಲಿ ಖ್ಯಾತ ನಿರ್ದೇಶಕ ಹಾಗೂ ನಟ ಗೌತಮ್ ವಾಸುದೇವ್ ಮೆನನ್ ಅವರು ಪ್ರಮುಖ ಪೋಷಕ ಪಾತ್ರದಲ್ಲಿ ನಟಿಸಿರುವುದು ಮತ್ತೊಂದು ಅಚ್ಚರಿಯ ಸಂಗತಿಯಾಗಿದೆ.

ಮಮ್ಮುಟ್ಟಿ ಚಿತ್ರದ ಸ್ಪರ್ಧೆಯೂ ಇದೆ...

ವಿಶೇಷವೆಂದರೆ, ನವೆಂಬರ್ 20ರಂದೇ ದುಲ್ಕರ್ ಸಲ್ಮಾನ್ ಅವರ ತಂದೆ, ಮೆಗಾಸ್ಟಾರ್ ಮಮ್ಮುಟ್ಟಿ ಹಾಗೂ ಧನುಷ್ ನಟನೆಯ ತಮಿಳು ಆಕ್ಷನ್ ಥ್ರಿಲ್ಲರ್ ಓಂ: ಚಾಪ್ಟರ್ 1 ಕೂಡ ಬಿಡುಗಡೆಯಾಗುತ್ತಿದೆ. ಅದರಂತೆ, ಒಂದೆಡೆ ತಂದೆಯ ಸಿನಿಮಾ, ಮತ್ತೊಂದೆಡೆ ಅದೇ ಕಥೆಯ ಇನ್ನೊಂದು ಸಿನಿಮಾದ ಸ್ಪರ್ಧೆಯನ್ನು ದುಲ್ಕರ್ ಎದುರಿಸಬೇಕಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X